ಖಾದ್ಯ ತೈಲ ಬೆಲೆಯು ಲೀಟರ್‌ಗೆ 15 ರೂಪಾಯಿ ಇಳಿಕೆ!

ಕೇಂದ್ರ ಸರ್ಕಾರವು ಖಾದ್ಯ ತೈಲ ತಯಾರಕರು ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳ ಬೆಲೆಯನ್ನು ಡಿತ ಮಾಡುವಂತೆ ಇತ್ತೀಚೆಗೆ ಹೇಳಿದೆ. ಇದಕ್ಕಾಗಿ ಗಡುವು ಕೂಡಾ ಕೇಂದ್ರ ಸರ್ಕಾರ ನೀಡಿದೆ. ಈಗ ಖಾದ್ಯ ತೈಲ ಬೆಲೆಯು ಲೀಟರ್‌ಗೆ 15 ರೂಪಾಯಿ ಇಳಿಕೆಯಾಗಲಿದೆ ಎಂದು ವರದಿಯಾಗಿದೆ.

“ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಜುಲೈ 6, 2022 ರಂದು ನಡೆದ ಸಭೆಯಲ್ಲಿ ಖಾದ್ಯ ತೈಲಗಳ ಎಂಆರ್‌ಪಿಯಲ್ಲಿ 15 ರೂಪಾಯಿ ಕಡಿತ ಮಾಡಬೇಕೆಂದು ಪ್ರಮುಖ ಖಾದ್ಯ ತೈಲ ಸಂಸ್ತೆಗಳುಗೆ ಸೂಚನೆ ನೀಡಿದೆ,” ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.

ಖಾದ್ಯ ತೈಲಗಳ ಬೆಲೆಯನ್ನು ಕೂಡಲೇ ಇಳಿಕೆ ಮಾಡಿ ಅದರ ಲಾಭವನ್ನು ಗ್ರಾಹಕರಿಗೆ ನೀಡಬೇಕು ಎಂದು ಕೇಂದ್ರ ಸರ್ಕಾರವು ತೈಲ ಸಂಸ್ಕರಣಾ ಸಂಸ್ಥೆಗಳಿಗೆ ಸೂಚಿಸಿದೆ. “ಜಾಗತಿಕವಾಗಿ ತೈಲ ಬೆಲೆಯು ಕಡಿಮೆಯಾಗಿದೆ. ಹಾಗಿರುವಾಗ ಸಂಸ್ಥೆಗಲು ಲಾಭವನ್ನು ಜನರಿಗೆ ಕೂಡಾ ವರ್ಗಾವಣೆ ಮಾಡಬೇಕು,” ಎಂದು ಸಚಿವಾಲಯವು ಸುತ್ತೋಲೆಯಲ್ಲಿ ಸೇರಿಸಿದೆ.

ಅತೀ ಹೆಚ್ಚು ಖಾದ್ಯ ತೈಲ ಆಮದು ಮಾಡುವ ಭಾರತ

ಕಳೆದ ಒಂದು ತಿಂಗಳಲ್ಲಿ ಖಾದ್ಯ ತೈಲಗಳ ಜಾಗತಿಕ ಬೆಲೆಗಳು ಪ್ರತಿ ಟನ್‌ಗೆ ಸುಮಾರು 300-450 ಯುಎಸ್‌ ಡಾಲರ್ ಇಳಿಕೆಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಕ್ರಮವನ್ನು ಕೈಗೊಂಡಿದೆ. ದೇಶದಲ್ಲಿ ಖಾದ್ಯ ತೈಲದ ಶೇಕಡಾ 60 ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತದೆ. ಆದ್ದರಿಂದ ಜಾಗತಿಕ ಬೆಳವಣಿಗೆಯು ಖಾದ್ಯ ತೈಲಗಳ ಮೇಲೆ ನೇರ ಪರಿಣಾಮವನ್ನು ಉಂಟು ಮಾಡುತ್ತದೆ.

ನಿಮ್ಮ ಬಜೆಟ್ ಕಡಿಮೆ ಮಾಡಲಿದೆ ಖಾದ್ಯ ತೈಲ

ಖಾದ್ಯ ತೈಲದ ಬೆಲೆಯು ಏರಿಕೆಯಾದ ಕಾರಣದಿಂದಾಗಿ ಹಲವಾರು ಮಂದಿಯ ಮೇಲೆ ಪರಿಣಾಮ ಉಂಟಾಗಿತ್ತು. ಬಜೆಟ್ ಮೇಲೆ ಪರಿಣಾಮ ಉಂಟು ಮಾಡಿದ್ದವು. ಆದರೆ ಈಗ ಸರ್ಕಾರದ ಈ ಕ್ರಮವು ಬಜೆಟ್ ಅನ್ನು ಕಡಿತ ಮಾಡಲಿದೆ. “ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಗಳು ಕುಸಿತವಾಗುತ್ತಿದೆ. ಆದರೆ ದೇಶದಲ್ಲಿ ಅಷ್ಟು ಪ್ರಮಾಣದಲ್ಲಿ ಬೆಲೆ ಇಳಿಕೆ ಕಂಡು ಬಂದಿಲ್ಲ. ಆದ್ದರಿಂದ ಸರ್ಕಾರ ಮಧ್ಯ ಪ್ರವೇಶ ಮಾಡಬೇಕಾಗಿದೆ. ಸರ್ಕಾರ ಉದ್ಯಮಿಗಳ ಜೊತೆ ಸಭೆ ಕರೆದು ಬೆಲೆ ಇಳಿಕೆ ಮಾಡಲು ಸೂಚನೆ ನೀಡಿದೆ,” ಎಂದು ಸುತ್ತೋಲೆಯಲ್ಲಿ ಸಚಿವಾಲಯ ಸೇರಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಹೈದರಾಬಾದ್: ಭಾರೀ ಮಳೆಯಿಂದ ಗೋಡೆ ಕುಸಿದು ತಾಯಿ, ಮಗಳು ಮೃತ!

Sat Jul 9 , 2022
ಹೈದರಾಬಾದ್: ತೆಲಂಗಾಣದ ನಲ್ಗೊಂಡದಲ್ಲಿ ಸುರಿದ ಭಾರೀ ಮಳೆಗೆ ಗೋಡೆ ಕುಸಿದು ಮಹಿಳೆ ಹಾಗೂ ಅವರ ಮಗಳು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರಾಜ್ಯಕ್ಕೆ ರೆಡ್ ಅಲರ್ಟ್ ಘೋಷಿಸಿದೆ. ಇಂದು ರಾಜ್ಯದ 14 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಏತನ್ಮಧ್ಯೆ, ಮಳೆಯಿಂದಾಗಿ ಹೈದರಾಬಾದ್‌ನಲ್ಲಿ ವಾಹನ ಸಂಚಾರಕ್ಕೆ ತೊಂದರೆ ಯಾಗಿದೆ. ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೊಮಾರಂ […]

Advertisement

Wordpress Social Share Plugin powered by Ultimatelysocial