ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರಿ ನೌಕರರ ಒತ್ತಾಯ.

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರದಿದ್ದಲ್ಲಿ ಮಾರ್ಚ್ 01 ರಿಂದ ಕರ್ತವ್ಯಕ್ಕೆ ಗೈರು ಹಾಜರಾಗಿ ಅನಿರ್ದಿಷ್ಟವಧಿ ಮುಷ್ಕರ ನಡೆಸಿ ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡುತ್ತೇವೇ ಎಂದು ತಿಳಿಸಿದರು.ವೇತನ ಭತ್ಯೆ ಪರಿಷ್ಕರಣೆ ಹಳೆ ಪಿಂಚಣಿ ಯೋಜನೆಯನ್ನ ಜಾರಿಗೊಳಿಸಬೇಕು, ಸರ್ಕಾರ 7 ನೇ ವೇತನ ಆಯೋಗದ ಮಧ್ಯಂತರ ವರದಿಯನ್ನು ತ್ವರಿತವಾಗಿ ಪಡೆಯುವ ಮೂಲಕ ಜಾರಿಗೆ ಬರುವಂತೆಯೂ ಶೇ.40% ವೇತನ ಹೆಚ್ಚಳ ಸೌಲಭ್ಯ ಕುರಿತಂತೆ ಸರ್ಕಾರವು ಆದೇಶ ಹೊರಡಿಸುವ ಮೂಲಕ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.ಓಪಿಎಸ್ ಯೋಜನೆಯು ಈಗಾಗಲೇ ರಾಜಸ್ತಾನ, ಛತ್ತೀಸ್ ಗಡ, ಜಾರ್ಖಂಡ್, ಹಿಮಾಛಲ ಪ್ರದೇಶಗಳಲ್ಲಿ ಜಾರಿಯಲ್ಲಿದ್ದು ರಾಜ್ಯದಲ್ಲೂ ಇದನ್ನ ಅನುಷ್ಠಾನಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.ಆರೋಗ್ಯ ಮತ್ತು ತುರ್ತು ಸೇವೆಯ ಸಿಬ್ಬಂದಿಗಳು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸವರು ಹೊರತು ಪಡಿಸಿಬ ಇತರೆ ಎಲ್ಲಾ ಇಲಾಖೆಯ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊರಟ ನಿಲ್ದಾಣಕ್ಕೆ ಮತ್ತೆ ಬಂದಿಳಿದ ವಿಮಾನ.

Thu Feb 23 , 2023
ನ್ಯೂಜಿಲೆಂಡ್‌:ನಿಲ್ದಾಣದಿಂದ ಹೊರಟ ವಿಮಾನ ಇಳಿಯಬೇಕಿದ್ದ ಸ್ಥಳ ತಲುಪದೇ ಪ್ರಯಾಣಿಕರು ವಿಮಾನದೊಳಗೆ ಅನಿವಾರ್ಯವಾಗಿ 16 ತಾಸು ವ್ಯಯಿಸಿ ಮತ್ತೆ ಹೊರಟ ನಿಲ್ದಾಣವನ್ನೇ ಸೇರಿದ ಘಟನೆ ಇಲ್ಲಿನ ಆಕ್ಲೆಂಡ್‌ ವಿಮಾನ ನಿಲ್ದಾಣದಲ್ಲಿ ನಡೆದಿದೆ.ಆಕ್ಲೆಂಡ್‌ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್‌ಗೆ ಹೊರಟ್ಟಿದ್ದ ಏರ್ ನ್ಯೂಜಿಲೆಂಡ್ ವಿಮಾನದಲ್ಲಿ ಇಂಥ ವಿಚಿತ್ರ ಘಟನೆ ನಡೆದಿದೆ. ಈ ವಿಮಾನ ತಲುಪಬೇಕಿದ್ದ ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಜೆಕೆಎಫ್‌) ವಿದ್ಯುತ್‌ ಕಡಿತದ ಪರಿಣಾಮವಾಗಿ ವಿಮಾನವನ್ನು ವಾಪಾಸ್‌ ತಿರುಗಿಸಲಾಯಿತು. 8 ಗಂಟೆಗಳ […]

Advertisement

Wordpress Social Share Plugin powered by Ultimatelysocial