ರಾಬರ್ಟ್ ಬಾಡೆನ್ ಪೊವೆಲ್

ರಾಬರ್ಟ್ ಬಾಡೆನ್ ಪೊವೆಲ್
ವಿಶ್ವಪ್ರಸಿದ್ಧವಾದ ಸ್ಕೌಟ್ ಚಳುವಳಿಯ ಪ್ರವರ್ತಕರಾದ ಬಾಡೆನ್ ಪೊವೆಲ್ 1857ರ ಫೆಬ್ರುವರಿ 22ರಂದು ಲಂಡನ್ನಿನಲ್ಲಿ ಜನಿಸಿದರು. ರಾಬರ್ಟ್ ಬಾಡೆನ್ ಪೊವೆಲ್ ಬ್ರಿಟಿಷ್ ಸೈನ್ಯಾಧಿಕಾರಿಯಾಗಿ ಭಾರತ ಮತ್ತು ಆಫ್ರಿಕಾಗಳಲ್ಲಿ ಸೇವೆ ಸಲ್ಲಿಸಿದ್ದರು.
ತಮ್ಮ ಮಿಲಿಟರಿ ದಿನಗಳ ಕುರಿತಾಗಿ ಹಲವಾರು ಪುಸ್ತಕಗಳನ್ನು ಬರೆದಿದ್ದ ರಾಬರ್ಟ್ ಬಾಡೆನ್ ಪೊವೆಲ್ ಯುವ ಪೀಳಿಗೆಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಳ ಕುರಿತು ಅಪಾರ ಚಿಂತನೆ ನಡೆಸಿ ಆ ಚಿಂತನೆಗಳನ್ನು ಪ್ರಾಯೋಗಿಕವಾಗಿ ಬ್ರೌನ್ ಸೀ ಎಂಬಲ್ಲಿ ಸ್ಥಳೀಯ ಹುಡುಗರ ಕ್ಯಾಂಪ್ ಒಂದರ ಮೂಲಕ 1907ರ ವರ್ಷದಲ್ಲಿ ಮೊದಲಿಗೆ ಕಾರ್ಯರೂಪಕ್ಕೆ ತಂದರು. ಇದು ಮುಂದೆ ಸ್ಕೌಟ್ ಚಳುವಳಿಯಾಗಿ ವಿಶ್ವದೆಲ್ಲೆಡೆ ಪ್ರವರ್ತನಗೊಳ್ಳುವಲ್ಲಿ ಪ್ರಮುಖ ಹೆಜ್ಜೆಯೆನಿಸಿತು.
1908ರಲ್ಲಿ ಪೊವೆಲ್ ಅವರು ‘ಸ್ಕೌಟಿಂಗ್ ಫಾರ್ ಬಾಯ್ಸ್’ ಎಂಬ ಪುಸ್ತಕವನ್ನು ಬರೆದರು. ನೂರೈವತ್ತು ಮಿಲಿಯನ್ ಪ್ರತಿಗಳು ಮಾರಾಟವಾದ ಈ ಪುಸ್ತಕವು ಇಪ್ಪತ್ತನೆಯ ಶತಮಾನದ ಅತ್ಯಂತ ಹೆಚ್ಚು ಮಾರಾಟವಾದ ಪುಸ್ತಕಗಳಲ್ಲಿ ನಾಲ್ಕನೆಯ ಸ್ಥಾನ ಪಡೆದಿದೆ. ಮುಂದೆ ಅವರ ಸಹೋದರಿ ಆಗೆನ್ಸ್ ಬಾಡೆನ್ ಪೊವೆಲ್ ಮತ್ತು ಪತ್ನಿ ಆಲೆವರ್ ಸೇಂಟ್ ಕ್ಲೇರ್ ಸೋಮ್ಸ್ ಅವರುಗಳು ಹೆಣ್ಣುಮಕ್ಕಳಿಗಾಗಿ ‘ಗರ್ಲ್ಸ್ ಗೈಡ್ಸ್ ಮೂಮೆಂಟ್’ ಎಂಬ ಕಾರ್ಯಕ್ರಮವನ್ನು ಪ್ರಸಿದ್ಧಿಗೊಳಿಸಿದರು.
ಮಿಲಿಟರಿ, ಸ್ಕೌಟಿಂಗ್ ಮತ್ತು ಹಲವಾರು ಸಾಹಸ ಕೌತುಕಗಳ ಕುರಿತಾದ ಮಹತ್ವದ ಪುಸ್ತಕಗಳ ಬರವಣಿಗೆಯ ಜೊತೆಗೆ ರಾಬರ್ಟ್ ಬಾಡೆನ್ ಪೊವೆಲ್ ಅವರು ಚಿತ್ರಕಾರರಾಗಿ ಸಹಾ ಹೆಸರಾಗಿದ್ದರು. ಅವರ ಪ್ರಸಿದ್ಧ ಪುಸ್ತಕಗಳಲ್ಲಿ ಭಾರತದಲ್ಲಿನ ನೆನಪುಗಳ ಕುರಿತಾದ ‘ಇಂಡಿಯನ್ ಮೆಮೊರಿಸ್’ ಎಂಬ ಪುಸ್ತಕವೂ ಸೇರಿದೆ. ವಿಶ್ವದಾದ್ಯಂತ ಸ್ಕೌಟ್ಸ್ ಕಾರ್ಯಕ್ರಮಗಳು ಜನಪ್ರಿಯಗೊಂಡು ರಾಬರ್ಟ್ ಬಾಡೆನ್ ಪೊವೆಲ್ ಅವರಿಗೆ ವಿವಿಧ ದೇಶಗಳಲ್ಲಿ ಗೌರವ, ಬಹುಮಾನ, ಜನಪ್ರಿಯತೆಗಳು ಸಂದವು. ತಮ್ಮ ಕೊನೆಯ ದಿನಗಳನ್ನು ಕೀನ್ಯಾದಲ್ಲಿ ಕಳೆದ ಪೊವೆಲ್ಲರು 1941ರ ವರ್ಷದಲ್ಲಿ ನಿಧನರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುರೇಶ್ ಹೆಬ್ಳೀಕರ್

Thu Feb 24 , 2022
ನಮ್ಮ ಸುರೇಶ್ ಹೆಬ್ಳೀಕರ್ ಯಾವಾಗಲೂ ಸುದ್ಧಿ ಮಾಡುವ ಚಿತ್ರರಂಗದಲ್ಲಿನ ಸದ್ದುಗದ್ದಲವಿಲ್ಲದ ಒಬ್ಬ ಸೂಪರ್ ಸ್ಟಾರ್. ಚಿತ್ರರಂಗದಲ್ಲಿ ಅವರೊಬ್ಬ ಯಶಸ್ವೀ ನಟ, ನಿರ್ಮಾಪಕ ಮತ್ತು ನಿರ್ದೇಶಕ. ಪರಿಸರ ಸಂರಕ್ಷಣೆಯಲ್ಲಿ ನಿಷ್ಠೆಯ ಕಾರ್ಯಕರ್ತ. ಸುರೇಶ್ ಹೆಬ್ಳೀಕರ್ 1948ರ ಫೆಬ್ರವರಿ 22ರಂದು ಜನಿಸಿದರು. ಧಾರವಾಡದ ಪ್ರೆಸೆಂಟೇಷನ್ ಕಾನ್ವೆಂಟ್, ಬಾಸೆಲ್ ಮಿಷನ್ ಶಾಲೆಗಳಲ್ಲಿ ಓದಿ, ಕರ್ನಾಟಕ ಕಾಲೇಜಿನಲ್ಲಿ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಗಳಿಸಿದರು. ಸುರೇಶ್ ಹೆಬ್ಳೀಕರ್ ಸುರದ್ರೂಪಿ ನಾಯಕನಟರಾಗಿ ಕಂಗೊಳಿಸಿದ ಸರಳ […]

Related posts

Advertisement

Wordpress Social Share Plugin powered by Ultimatelysocial