ಡಾಲಿ ಧನಂಜಯ ಅಭಿನಯದ Once Upon A Time “ಜಮಾಲಿಗುಡ್ಡ” ಚಿತ್ರದ ಚಿತ್ರೀಕರಣ ಪೂರ್ಣ.

ಸೆಪ್ಟೆಂಬರ್ 9 ರಂದು ಅದ್ದೂರಿ ಬಿಡುಗಡೆ.ಡಾಲಿ ಧನಂಜಯ ನಾಯಕರಾಗಿ ನಟಿಸಿರುವ Once Upon A Time “ಜಮಾಲಿಗುಡ್ಡ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಚಿಕ್ಕಮಗಳೂರು, ಕುದುರೆಮುಖ, ಗೋಕರ್ಣ, ಶಿವಮೊಗ್ಗದಲ್ಲಿ ಎಂಭತ್ತು ದಿನಗಳ ಚಿತ್ರೀಕರಣ ನಡೆದಿದೆ. ಮಾತಿನ ಜೋಡಣೆ ಸಹ ಅಂತಿಮ ಹಂತದಲ್ಲಿದೆ. ಸೆಪ್ಟೆಂಬರ್ 9 ರಂದು ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಇದು 90ರ ದಶಕದಲ್ಲಿ ನಡೆಯುವ ಕಥೆ. ಬಾರ್ ಸಪ್ಲೇಯರ್ ಪಾತ್ರದಲ್ಲಿ ಡಾಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರದ ಡಾಲಿ ಅವರ ಫಸ್ಟ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದಿತಿ ಪ್ರಭುದೇವ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಭಾವನ ರಾಮಣ್ಣ, ಕಾಮಿಡಿ ಕಿಲಾಡಿಗಳು ಸಂತು, ತ್ರಿವೇಣಿ, ಪ್ರಾಣ್ಯ, ನಂದ ಗೋಪಾಲ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಕುಶಾಲ್ ಗೌಡ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ಕುಶಾಲ್ ಗೌಡ ಅವರೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಕಾರ್ತಿಕ್ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಸಂಕಲನ ಈ ಚಿತ್ರಕ್ಕಿದೆ. ಕುಟುಂಬ ಸಮೇತ ನೋಡಬಹುದಾದ ಸುಂದರ ಕಥಾಹಂದರದ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ತನುಜಾ" ಚಿತ್ರೀಕರಣ ಮುಕ್ತಾಯ

Tue May 31 , 2022
ನಿರ್ದೇಶನ : ರಾಜ್ಯಪ್ರಶಸ್ತಿ ವಿಜೇತ ಹರೀಶ್ ಎಂ.ಡಿ ಹಳ್ಳಿ. ನಿರ್ಮಾಣ: “ಬಿಯಾಂಡ್ ವಿಷನ್ಸ್ ಸಿನಿಮಾಸ್” ಲಾಂಛನದಲ್ಲಿ “ಶೂರ ಎಂಟರ್ಟೈನ್ಮೆಂಟ್ಸ್” ಸಹಯೋಗದಲ್ಲಿ ತಾರಾಗಣದಲ್ಲಿ : ರಾಜೇಶ್ ನಟರಂಗ, ಸಪ್ತಾ ಪಾವೂರ್ (ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು) ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಂಧ್ಯಾ ಅರಕೆರೆ, ರಘುನಂದನ್ ಎಸ್.ಕೆ ಕೈಲಾಶ್ ಚಿತ್ರಕಲಾ ಬಿರಾದರ್ ಬಾಲ ನಟಿ ಬೇಬಿ ಶ್ರೀ ಅಭಿನಯಿಸಿದ್ದು ಸಂಗೀತ […]

Advertisement

Wordpress Social Share Plugin powered by Ultimatelysocial