ಒಂದು ಹೆದ್ದಾರಿ.. ಹಲವು ಹೆಸರು.. ರಾಜಕೀಯ ಕೆಸರು.. ಕೊನೆಗೂ ಯಾವ ಹೆಸರು ಫೈನಲ್.?

ಮಾರ್ಚ್​ 12ಕ್ಕೆ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಲೋಕಾರ್ಪಣೆಯಾಗಲಿದೆ. ಒಂದೆಡೆ ಈಗಾಗಲೇ ಹೆದ್ದಾರಿಗಾಗಿಯೆ ಕ್ರೆಡಿಟ್ ವಾರ್ ಜೋರಾಗಿದ್ದರೆ, ಮತ್ತೊಂದೆಡೆ ಹೆದ್ದಾರಿ ನಾಮಕರಣ ಕಗ್ಗಂಟಾಗಿಯೆ ಉಳಿದಿದೆ.

ವಿವಿಧ ಪಕ್ಷಗಳ ಶಾಸಕರು, ಸಂಸದರು ಒಂದೊಂದು ಹೆಸರು ಸೂಚಿಸಿ ಮನವಿ ಪತ್ರ ಸಲ್ಲಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.

‘ಕಾವೇರಿ’ ಹೆಸರಿಡುವಂತೆ ಸಂಸದ ಪ್ರತಾಪ್ ಸಿಂಹ, ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಹೆಸರಿಡುವಂತೆ ಎಸ್.ಎಂ.ಕೃಷ್ಣ ಮನವಿ ಸಲ್ಲಿಸಿದ್ದರು.

‘ಹೆಚ್.ಡಿ.ದೇವೇಗೌಡರ’ ಹೆಸರಿಡುವಂತೆ ಜೆಡಿಎಸ್ ನಾಯಕರು ಮನವಿ ಸಲ್ಲಿಸಿದ್ದಾರೆ. ಗೊಂದಲವಿರೋ ಕಾರಣ ಹೆದ್ದಾರಿ‌ ಲೋಕಾರ್ಪಣೆ ಮಾಡುತ್ತಿದ್ದರೂ ಹೆದ್ದಾರಿಗೆ ಅಧಿಕೃತ ನಾಮಕರಣ ಮಾಡಲಾಗುತ್ತಿಲ್ಲ ಎನ್ನಲಾಗುತ್ತಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದೇ ಮಂಟಪದಲ್ಲಿ ಇಬ್ಬರು ಪ್ರೇಯಸಿಯರನ್ನು ವರಿಸಿದ ಭೂಪ!

Sat Mar 11 , 2023
ಮದುವೆಯಾಗಲು ಒಂದು ಹೆಣ್ಣು ಹುಡುಕೋದ್ರಲ್ಲೇ ದಣಿದು ಹಣ್ಣಾಗುತ್ತಿರುವ ಬಿಸಿ ರಕ್ತದ ಯುವಕರ ನಡುವೆ ಇಲ್ಲೊಬ್ಬ ಇಬ್ಬರನ್ನು ಒಂದೇ ಮಂಟಪದಲ್ಲಿ ವರಿಸಿದ್ದಾನೆ. ತೆಲಂಗಾಣದಲ್ಲಿ ಜರುಗಿದ ಈ ಘಟನೆಯಲ್ಲಿ, ತಾನು ಸಂಬಂಧ ಬೆಳೆಸಿದ್ದ ಇಬ್ಬರು ಮಹಿಳೆಯರನ್ನು ಬುಡಕಟ್ಟು ಪುರುಷನೊಬ್ಬ ಒಂದೇ ಮಂಟಪದಲ್ಲಿ ವರಿಸಿದ್ದಾನೆ. ಭದ್ರಾದ್ರಿ ಕೋತಗುಡೆಂ ಜಿಲ್ಲೆಯ ಮಾದಿವಿ ಸತಿಬಾಬು ಹೆಸರಿನ ಈ ವ್ಯಕ್ತಿ ಒಂದೇ ಸಮಾರಂಭದಲ್ಲಿ ಇಬ್ಬರು ಮಹಿಳೆಯರನ್ನು ವರಿಸಿದ್ದಾನೆ. ಇಲ್ಲಿನ ಚೇರ್ಲಾ ಮಂಡಲದ ಎರ‍್ರಬೋರು ಗ್ರಾಮದ ಸತಿಬಾಬು ಸುನಿತಾ ಹಾಗೂ […]

Advertisement

Wordpress Social Share Plugin powered by Ultimatelysocial