ಒಣ ಕೆಮ್ಮಿ ನಿಂದ ರೋಸಿ ಹೋಗಿದ್ದೀರಾ.? ಅದಕ್ಕೆ ಇಲ್ಲಿದೆ ʼಪರಿಹಾರʼ

ಕೆಮ್ಮಿನಲ್ಲಿ ಎರಡು ವಿಧಗಳಿವೆ. ಉತ್ಪಾದಕ ಮತ್ತು ಅನುತ್ಪಾದಕ. ಒಣಕೆಮ್ಮು ಎಂದರೆ ಅನುತ್ಪಾದಕ ಕೆಮ್ಮು. ಒಣಕೆಮ್ಮಿಗೆ ಕಾರಣಗಳು ಹಲವಿದ್ದರೂ ಇದು ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ. ರಾತ್ರಿಯ ನಿದ್ರೆಯನ್ನು ಹಾಳು ಮಾಡುತ್ತದೆ.ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ಒಣಕೆಮ್ಮನ್ನು ಕಡಿಮೆ ಮಾಡಬಹುದು.ಅರ್ಧ ಚಮಚ ಜೇಷ್ಟಮಧು, ಒಂದು ಚಮಚ ಜೇನುತುಪ್ಪ ಮತ್ತು ಹತ್ತು ತುಳಸಿ ಎಲೆಗಳನ್ನು ಜೊತೆಯಲ್ಲಿ ಮಿಶ್ರಣ ಮಾಡಿ ಪ್ರತಿ ದಿನ ಊಟದ ಬಳಿಕ ಮೂರು ಬಾರಿ ಸೇವಿಸಿ.ಎರಡು ಚಿಟಿಕೆ ಕಾಳು ಮೆಣಸಿನ ಪುಡಿ, ಅರ್ಧ ಚಮಚ ಕಲ್ಲು ಸಕ್ಕರೆ ಮತ್ತು ಅರ್ಧ ಚಮಚ ಜೇನುತುಪ್ಪ ಮಿಕ್ಸ್ ಮಾಡಿ, ಮಿಶ್ರಣವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸಬೇಕು.ನಾಲ್ಕರಿಂದ ಐದು ಲವಂಗವನ್ನು ಹುರಿದ ತುಳಸಿ ಎಲೆಯನ್ನು ಸೇರಿಸಿ ಹಾಗೆಯೇ ಜಗಿದು ತಿನ್ನಬೇಕು. ಇದನ್ನು ದಿನಕ್ಕೆ ಎರಡು ಬಾರಿ ಮಾಡುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.ಅರ್ಧ ಇಂಚು ಅರಿಶಿನ ಕೊಂಬನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದು ರಾತ್ರಿ ಹೊತ್ತು ಮಲಗುವಾಗ ಬಾಯಲ್ಲಿ ಹಾಗೆ ಇಟ್ಟುಕೊಳ್ಳಬೇಕು. ನಂತರ ಇದನ್ನು ಜಗಿದು ತಿನ್ನಬೇಕು. ಹೀಗೆ ಮಾಡುವುದರಿಂದ ಒಣ ಕೆಮ್ಮು ಕಡಿಮೆಯಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಸ್ಸಾಂ, ಅರುಣಾಚಲ ಪ್ರದೇಶಗಳು ಈ ವರ್ಷ ಗಡಿ ವಿವಾದವನ್ನು ಬಗೆಹರಿಸಲಿವೆ!!

Mon Feb 21 , 2022
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಅರುಣಾಚಲ ಪ್ರದೇಶ ಸಹವರ್ತಿ ಪೇಮಾ ಖಂಡು ಭಾನುವಾರ ಅವರು ಎರಡು ರಾಜ್ಯಗಳ 804 ಕಿಮೀ ಅಂತರರಾಜ್ಯ ಗಡಿಯಲ್ಲಿ ದೀರ್ಘಕಾಲದ ವಿವಾದಗಳನ್ನು ಪರಿಹರಿಸಲು ಏಪ್ರಿಲ್‌ನಿಂದ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಶರ್ಮಾ ಮತ್ತು ಖಂಡು ಭಾನುವಾರ ನಹರ್ಲಗುನ್‌ನಲ್ಲಿ ಅರುಣಾಚಲ ಪ್ರದೇಶದ 50 ವರ್ಷಗಳ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮತ್ತು 36 ನೇ ರಾಜ್ಯೋತ್ಸವದ ದಿನದಂದು ಭಾಗವಹಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೆಹಲಿಯಿಂದ ಕಾರ್ಯಕ್ರಮವನ್ನು […]

Advertisement

Wordpress Social Share Plugin powered by Ultimatelysocial