ಕಿತ್ತಲೆ ಹಣ್ಣು ಹುಳಿ ಮಿಶ್ರಿತ ಸಿಹಿಯಾಗಿರುವುದರಿಂದ ತಿನ್ನಲು ಬಹಳ ರುಚಿ.

 

ಕಿತ್ತಲೆ ಹಣ್ಣು ಹುಳಿ ಮಿಶ್ರಿತ ಸಿಹಿಯಾಗಿರುವುದರಿಂದ ತಿನ್ನಲು ಬಹಳ ರುಚಿ. ಇದರಲ್ಲಿ ಸಿಟ್ರಸ್ ಅಂಶ ಮಾತ್ರವಲ್ಲದೆ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೆ ಬಹಳ ಸಹಕಾರಿ. ಇದರಲ್ಲಿ ಹೇರಳವಾಗಿ ಬೀಟಾ ಕೆರೋಟಿನ್ ಇದ್ದು, ದೇಹದಲ್ಲಿನ ಜೀವಕಣಗಳನ್ನು ಸಂರಕ್ಷಿಸುತ್ತದೆ.
ರೋಗನಿರೋಧಕಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿನ ಮಟ್ಟದಲ್ಲಿದ್ದು, ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿ ರೋಗ ನಿರೋಧಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ. ಹಾಗೇ ವೈರಲ್ ಸೋಂಕುಗಳಿಂದ ದೂರವಿರಬಹುದು. ಕಿಡ್ನಿಯಲ್ಲಿ ಕಲ್ಲು ಸೇರಿಕೊಳ್ಳುವುದನ್ನು ತಡೆಯಬಹುದು.

ನಾರಿನಂಶ

ಫೈಬರ್ ಹೆಚ್ಚಿರುವ ಕಾರಣ ಮಲಬದ್ಧತೆಯಾಗದಂತೆ ಮಾಡುತ್ತದೆ.

ಕೊಲೆಸ್ಟ್ರಾಲ್ ನಿಂದ ಮುಕ್ತಿ

ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕರಗಿಸುವುದರಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ.

ಕ್ಯಾಲ್ಶಿಯಂ

ಕಿತ್ತಲೆ ಹಣ್ಣು ತಿನ್ನುವುದರಿಂದ ಮೂಳೆ ಮತ್ತು ಹಲ್ಲುಗಳು ಗಟ್ಟಿಗೊಳ್ಳುತ್ತವೆ.

ಪೋಷಕಾಂಶಗಳು ಹೆಚ್ಚು

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಕ್ಯಾಲ್ಸಿಯಂ ಅಷ್ಟೇ ಅಲ್ಲದೆ ಯಥೇಚ್ಛವಾದ ಪೊಟ್ಯಾಷಿಯಂ ಅನ್ನು ಹೊಂದಿದೆ. ಇದರ ಸೇವನೆಯಿಂದ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಪಾನಮತ್ತನಾಗಿ ಬಸ್ ಚಲಾಯಿಸುತ್ತಿದ್ದ ಚಾಲಕ

Thu Jan 5 , 2023
  ಎಲ್ಲ ಸರಿ ಇದ್ದು ಜಾಗರೂಕತೆಯಿಂದ ವಾಹನ ಚಲಾಯಿಸಿದರೂ ಅಪಘಾತ ನಡೆಯುವ ಕಾಲ ಇದು. ಇದತ ನಡುವೆ ಚಾಲಕನೊಬ್ಬ ಕುಡಿದು ಮತ್ತೇರಿಸಿಕೊಂಡು ಬಸ್‌ ಚಲಾಯಿಸಿ ಪ್ರಯಾಣಿಕರ ಜೀವವನ್ನೇ ಒತ್ತೆ ಇಟ್ಟ ಘಟನೆಯೊಂದು ಕರಾವಳಿಯಲ್ಲಿ ನಡೆದಿದೆ. ಇದರಿಂದ ಭಯಗೊಂಡ ಪ್ರಯಾಣಿಕರು ಸೇರಿ ಚಾಲಕನನ್ನು  ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.ಬುಧವಾರ ರಾತ್ರಿ ಬೆಂಗಳೂರಿನಿಂದ ಕುಂದಾಪುರಕ್ಕೆ ಹೊರಟಿದ್ದ ಆನಂದ್ ಟ್ರಾವೆಲ್ಸ್ ಬಸ್ ಇದಾಗಿದೆ. ಬೆಂಗಳೂರಿನಿಂದ ಕರಾವಳಿಗೆ 30ಕ್ಕೂ ಅಧಿಕ ಪ್ರಯಾಣಿಕರು ಬಸ್‌ನಲ್ಲಿ ಹೊರಟಿದ್ದರು. ಬೆಂಗಳೂರಿನಿಂದ ಹೊರಟು […]

Advertisement

Wordpress Social Share Plugin powered by Ultimatelysocial