ಇಸ್ಲಾಂನಲ್ಲಿ ಅತ್ಯಂತ ಕೆಟ್ಟ ಅಪರಾಧ: ಮುಸ್ಲಿಂ ಕುಟುಂಬದ ಮರ್ಯಾದಾ ಹತ್ಯೆ ಖಂಡಿಸಿದ ಓವೈಸಿ!

 

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಹೈದರಾಬಾದ್‌ ನಲ್ಲಿ ಮುಸ್ಲಿಂ ಪತ್ನಿಯ ಕುಟುಂಬದಿಂದ ನಡೆದ ಶಂಕಿತ ಮರ್ಯಾದಾ ಹತ್ಯೆಯನ್ನು ಖಂಡಿಸಿದ್ದಾರೆ, ದಲಿತ ವ್ಯಕ್ತಿಯನ್ನು ಕೊಲೆ ಕೃತ್ಯವನ್ನು ಇಸ್ಲಾಂನಲ್ಲಿ ಅತ್ಯಂತ ಕೆಟ್ಟ ಅಪರಾಧ ಎಂದು ಖಂಡಿಸಿದ್ದಾರೆ.

ಈ ವಾರದ ಆರಂಭದಲ್ಲಿ ಹೈದರಾಬಾದ್‌ ನ ಸರೂರ್‌ ನಗರದ ಜನನಿಬಿಡ ರಸ್ತೆಯ ಮಧ್ಯದಲ್ಲಿ ಬಿ. ನಾಗರಾಜು(25) ಅವರನ್ನು ಅವರ ಪತ್ನಿಯ ಸಹೋದರ ಮತ್ತು ಸಹಚರರು ಹೊಡೆದು ಮತ್ತು ಇರಿದು ಕೊಂದರು. ಅಂತರ್‌ ಧರ್ಮೀಯ ವಿವಾಹಕ್ಕೆ ಮಹಿಳೆಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರಿಂದ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ.

ಆರೋಪಿಗಳನ್ನು ತ್ವರಿತವಾಗಿ ಬಂಧಿಸಲಾಗಿದೆ. ಆದರೆ, ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೆಲವು ಪಕ್ಷಗಳು ಘಟನೆಗೆ ಬೇರೆ ಬಣ್ಣ ನೀಡಲು ಪ್ರಯತ್ನಿಸುತ್ತಿವೆ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

‘ಹೈದರಾಬಾದ್‌ನಲ್ಲಿ ನಡೆದ ನಾಗರಾಜು ಕೊಲೆ ಇಸ್ಲಾಂಗೆ ವಿರುದ್ಧವಾಗಿದೆ. ಹುಡುಗಿ ತನ್ನ ಸ್ವಂತ ಇಚ್ಛೆಯಿಂದ ಅವನನ್ನು ಮದುವೆಯಾದಳು. ಆಕೆಯ ಪತಿಯನ್ನು ಕೊಲ್ಲುವ ಹಕ್ಕು ಆಕೆಯ ಸಹೋದರನಿಗೆ ಇರಲಿಲ್ಲ. ಇದೊಂದು ಕ್ರಿಮಿನಲ್ ಕೃತ್ಯವಾಗಿದ್ದು, ಇಸ್ಲಾಂ ಧರ್ಮದ ಪ್ರಕಾರ ಅತ್ಯಂತ ಘೋರ ಅಪರಾಧವಾಗಿದೆ. ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Finding the Most Effective Paper Writing Services

Sun May 8 , 2022
Do you need the help of a college paper writer? Are you? No. You want to be able reuse your paper for a long time. A reputable website for essay writing will assure you that the writer who will write Please follow and like us:

Advertisement

Wordpress Social Share Plugin powered by Ultimatelysocial