ಪಾದರಾಯನಪುರದಲ್ಲಿ ವೈದ್ಯಕೀಯ ಹಾಗೂ ಪೊಲೀಸ್ ಸಿಬ್ಬಂದಿ ವಿರುದ್ದ ದೌರ್ಜನ್ಯ ನಡೆಸುವ ಪ್ರಯತ್ನ ಮಾಡಿದವರನ್ನು ಮುಲಾಜಿಲ್ಲದೆ ಬಂಧಿಸಿ ಕಠಿಣ‌‌ ಕ್ರಮ ಜರುಗಿಸಬೇಕು ಎಂದು  ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂತಹವರ ನಿಯಂತ್ರಿಸದಿದ್ದರೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ.‌ ಹೀಗಾಗಿ ಈ ರೀತಿ ಪುಂಡಾಟ ಮಾಡಿದವರನ್ನು ಕೂಡಲೇ  ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು. ಗೃಹ ಸಚಿವರು ಇಂತಹವರನ್ನು ಮಟ್ಟ ಹಾಕಬೇಕು ಎಂದು ಒತ್ತಾಯ ಮಾಡಿದ್ದೇನೆ. […]

  ಬೆಂಗಳೂರು : ಪ್ರಸಕ್ತ  ಸಾಲಿನಲ್ಲಿ  ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹಾಗೂ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ-ನೀಟ್) ಬರೆಯಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ತಂತ್ರಜ್ಞಾನ ಆಧರಿತ ‘ ಗೆಟ್‌ಸೆಟ್‌ ತರಬೇತಿ ನೀಡುವ  ಕಾರ್ಯಕ್ರಮಕ್ಕೆ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ.

ಇಟಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ತರಲು ಅಲ್ಲಿನ ಸರ್ಕಾರ ಹರ ಸಾಹಸಪಟ್ಟಿತು. ಮಾ.13ರಂದು ತಿರುವನಂತಪುರದ ಕೇರಳಕ್ಕೆ ಭೇಟಿ ಕೊಟ್ಟಿದ್ದರು. ಆಗ ಅವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಆದರೆ, ಟೋನಿಜ್  ಈಗ ಕೊರೊನಾ  ಸೋಂಕಿನಿಂದ  ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.  ಅವರನ್ನು ಸೋಮವಾರ ಆಸ್ಪತ್ರೆಯ ಸಿಬ್ಬಂದಿ ಮತ್ತು ಕೇರಳ ಸರ್ಕಾರ ಸನ್ಮಾನ ಮಾಡಿ ಬೀಳ್ಕೊಟ್ಟಿದೆ. ಅವರು ಬೆಂಗಳೂರಿಗೆ ತೆರಳಲು ಕೇರಳ ಸರ್ಕಾರವೇ ಸಹಾಯ ಮಾಡಿದೆ.

ಕೋವಿಡ್-೧೯ ಗೆ ಸಂಬಂಧಿಸಿದ ಸಾರ್ವಜನಿಕರ ಪ್ರಶ್ನೆಗಳನ್ನು ಉತ್ತರಿಸಲು ಆರೋಗ್ಯ ಸಚಿವಾಲಯ ಟ್ವಿಟರ್ ಸೇವಾ ಎಂಬ ವಿನೂತನ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದೆ. ತ್ವರಿತಗತಿಯಲ್ಲಿ ಅತಿ ಹೆಚ್ಚು ಜನರ ಪ್ರಶ್ನೆಗಳಿಗೆ ಉತ್ತರಿಸುವ ಕಾರ್ಯವಿಧಾನಗಳನ್ನು ಆರೋಗ್ಯ ಸಚಿವಾಲಯ ಟ್ವಿಟರ್ ಅಳವಡಿಸಿಕೊಂಡಿದೆ. ಕೋವಿಡ್ ತಡೆಗೆ ಸರ್ಕಾರ ಕೈಗೊಂಡಿರುವ ಇತ್ತೀಚಿನ ಕ್ರಮಗಳು, ಆರೋಗ್ಯ ಸೇವೆಗಳನ್ನು ಪಡೆಯುವ ಮಾರ್ಗ, ರೋಗ ಲಕ್ಷಣಗಳು ಕಾಣಿಸಿಕೊಂಡವರಿಗೆ ಯಾರನ್ನು ಸಂಪರ್ಕಿಸಬೇಕೆಂಬ ಮಾಹಿತಿ, ಸಾರ್ವಜನಿಕರ ಅಗತ್ಯತೆಗಳಿಗೆ ಅಧಿಕಾರಿಗಳನ್ನು ಸಂಪರ್ಕಿಸುವುದು ಹೀಗೆ ಹಲವಾರು ವಿಷಯಗಳ ಕುರಿತ ಪ್ರಶ್ನೆಗಳಿಗೆ […]

ಬೆಂಗಳೂರು.ಏ.೨೦: ಬಿಬಿಎಂಪಿಯ ತೆರಿಗೆ ಮತ್ತು ರ‍್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ೨೦೨೦-೨೧ನೇ ಸಾಲಿನ ಬಜೆಟ್ ಮಂಡಿಸಿದರು. ಬಜೆಟ್‌ನಲ್ಲಿ ಸರ್ವ ಶಿಕ್ಷಣ, ಶುದ್ಧ ಕುಡಿಯುವ ನೀರು, ಪರಿಸರ ಸಂರಕ್ಷಣೆ ಹಾಗೂ ಮೂಲಸೌಕರ್ಯಕ್ಕೆ ಅದ್ಯತೆ. ಪ್ರತಿ ಗೃಹೋಪಯೋಗಿ ಕೆಲಸಗಳಿಗೆ ತಿಂಗಳಿಗೆ ೧೦ ಸಾವಿರ ಲೀಟರ್ ನೀರು ಪೂರೈಕೆ. ಇದಕ್ಕಾಗಿ ಬಜೆಟ್‌ನಲ್ಲಿ ₹43 ಕೋಟಿ ಕಾಯ್ದಿರಿಸಲಾಗಿದೆ.

  ಗುವಾಹಟಿ: ದೇಶದಾದ್ಯಂತ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಆದೇಶಿಸಿಸಲಾಗಿದೆ. ಆದ್ರೆ ಅರುಣಾಚಲ ಪ್ರದೇಶದಲ್ಲಿ ಬೇಟೆಗಾರರ ಗುಪೊಂದು ಹಬ್ಬದೂಟಕ್ಕಾಗಿ ೧೨ ಅಡಿ ಉದ್ದದ ಕಾಳಿಂಗ ಸರ್ಪವನ್ನು ಕೊಂದಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್ ಡೌನ್ ಮಾಡಿದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆದರೆ ರತನ್ ಟಾಟಾ ಅವರ ಸ್ಟಾರ್ಟ್ ಅಪ್ ಕಂಪನಿಯು ಈ ಸಮಯದಲ್ಲಿ ಲಾಭ ಪಡೆದಿದೆ. ಈ ಟಾಟಾ ಕಂಪನಿಯು ಮೊಬೈಲ್ ಪೆಟ್ರೋಲ್ ಪಂಪ್ ಸೇವೆ ನೀಡುತ್ತದೆ. ಕಂಪನಿಯ ಹೋಮ್ ಡಿಲೆವರಿ ಮಾದರಿಯಿಂದಾಗಿ ಈ ಕಂಪನಿಯ ಬೇಡಿಕೆ ಹೆಚ್ಚಾಗಿದೆ. ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಪುಣೆ ಮೂಲದ ರೆಪೊಸ್ […]

ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ಮನೆಯಿಂದ ಹೊರ ಬರುವವರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಕೂಡ ಈ ಅಭಿಯಾನಕ್ಕೆ ಸಾಥ್ ನೀಡಿದೆ. ಇನ್ನು ಮುಂದೆ ಮಾಸ್ಕ್ ಇಲ್ಲದವರಿಗೆ ಪೆಟ್ರೋಲ್ ಹಾಕದಿರಲು ನಿರ್ಧರಿಸಲಾಗಿದೆ. ಕರ್ನಾಟಕ ರಾಜ್ಯ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ವತಿಯಿಂದ ನೋ ಮಾಸ್ಕ್ ನೋ ಫ್ಯೂಯಲ್ ಅಭಿಯಾನ ಕೈಗೊಳ್ಳಲಾಗಿದೆ.

ಪುಟಾಣಿ ಮಕ್ಕಳಿಂದ ಹಿಡಿದು ವೃದ್ಧರು ಕೂಡ ತುಂಬ ಖುಷಿ ಖುಷಿಯಿಂದ ನೋಡುತ್ತಿದ್ದ ಟಾಮ್ ಅಂಡ್ ಜರ‍್ರಿ ಕಾಮಿಡಿ ಸಿರೀಸ್  ನಿರ್ದೇಶಕ ಜೆನಿ ಡಿಚ್,  ಅಮೆರಿಕಾದಲ್ಲಿ ಮೃತಪಟ್ಟಿದ್ದಾರೆ. ಇಬ್ಬರು ಪತ್ನಿಯರು, ಮೂರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಇವರು ಆನಿಮೇಶನ್‌ನಲ್ಲಿ ಡಿಚ್ ಆಸ್ಕರ್ ಪ್ರಶಸ್ತಿ ಪಡೆದಿದ್ದರು.  

ಫ್ರಾನ್ಸ್ ಕರೊನಾ ಸಂಕಷ್ಟಕ್ಕೆ ತತ್ತರಿಸಿದೆ. ಈವರೆಗೆ ಅಲ್ಲಿ ೧,೫೪,೦೯೮ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ೧೯,೭೭೮ ಜನರು ಮೃತಪಟ್ಟಿದ್ದಾರೆ. ಕೋವಿಡ್-೧೯ ನಿಯಂತ್ರಣಕ್ಕೆ ಸಿಗದ ಕಾರಣ ಅಲ್ಲಿ ದೇಶಾದ್ಯಂತ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಲಾಗಿದೆ. ಇದೀಗ ಆಘಾತಕಾರಿ ಸುದ್ದಿಯೊಂದು ಪ್ಯಾರಿಸ್ ನಗರದಿಂದ ವರದಿಯಾಗಿದೆ. ಅಲ್ಲಿನ ನೀರಿನಲ್ಲೂ ಕರೊನಾ ವೈರಸ್ ಪತ್ತೆಯಾಗಿದೆ. ನೀರಿನಲ್ಲಿ ಅತಿ ಸಣ್ಣ ಪ್ರಮಾಣದಲ್ಲಿ ವೈರಸ್ ಕಣಗಳಿರುವುದು ಪರೀಕ್ಷೆಯಿಂದ ಗೊತ್ತಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದರ ಪ್ರಮಾಣ ತೀರಾ ಕಡಿಮೆಯಿದ್ದು, ನಗರದಲ್ಲಿ ಸ್ವಚ್ಛತಾ […]

Advertisement

Wordpress Social Share Plugin powered by Ultimatelysocial