ದೆಹಲಿ: ಎರಡನೇ ಹಂತದಲ್ಲಿ ಲಾಕ್‌ಡೌನ್ ಮುಂದುವರೆಸಿದರು ಸಹಿತ ಕೊರೊನಾ ವೈರಸ್ ಹಾವಳಿ ಕಡಿಮೆಯಾಗಿಲ್ಲ. ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗಾಗಿ ಅರವಿಂದ ಕೇಜ್ರಿವಾಲ್ ಸರ್ಕಾರ ಕೂಡ ಮೇ ೧೮ರವೆಗೆ ಲಾಕ್‌ಡೌನ್ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.  ದೆಹಲಿ ಸರ್ಕಾರದಂತೆ ಮಹಾರಾಷ್ಟç, ಮಧ್ಯಪ್ರದೇಶ, ಬಂಗಾಳ, ಪಂಜಾಬ್ ಮತ್ತು ಓಡಿಶಾ ಈ ೫ ರಾಜ್ಯಗಳು ಕೂಡಾ ಲಾಕ್‌ಡೌನ್ ಮುಂದುವರೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೊರೊನಾ ವೈರಸ್ ಕಾಯಿಲೆಯಿಂದ ಗುಣಮುಖರಾಗಿರುವವರು ಧರ್ಮವನ್ನು ಬದಿಗಿಟ್ಟು, ಮುಂದೆ ಬಂದು ಕೊರೊನಾ ಪೀಡಿತರಿಗೆ ಪ್ಲಾಸ್ಮಾ ದಾನ ಮಾಡಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ದೆಹಲಿನಲ್ಲಿ ಮಾತನಾಡಿದ ಅವರು, ರಕ್ತದ ಪ್ಲಾಸ್ಮಾ ಧರ್ಮದ ನಡುವೆ ವ್ಯತ್ಯಾಸವನ್ನು ತೋರಿಸುವುದಿಲ್ಲ. ಹಿಂದೂ ವ್ಯಕ್ತಿಯ ಪ್ಲಾಸ್ಮಾ ಮುಸ್ಲಿಂ ರೋಗಿಯನ್ನು ಉಳಿಸಬಹುದು ಮತ್ತು  ಮುಸ್ಲಿಂ ರೋಗಿಯ ಪ್ಲಾಸ್ಮಾ ಹಿಂದೂ ವ್ಯಕ್ತಿಯನ್ನು ಉಳಿಸಬಹುದು.’ಮುಂದೆ ಬಂದು ಪ್ಲಾಸ್ಮಾವನ್ನು ದಾನ ಮಾಡಿ. ನಾವೆಲ್ಲರೂ ಕರೋನವೈರಸ್ ನಿಂದ ಚೇತರಿಸಿಕೊಂಡೂ […]

ಪ್ಯಾರಿಸ್: ಡೆಡ್ಲಿ ಕೊರೊನಾದಿಂದ ಜಗತ್ತಿನ ೧೯೩ ದೇಶಗಳಲ್ಲಿ ೨೮,೬೪,೦೭೦ಕ್ಕಿಂತಲೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಪೈಕಿ ಕೊರೊನಾ ಸೋಂಕಿನಿAದ ಮೃತಪಟ್ಟವರ ಸಂಖ್ಯೆ ೨೦೦,೭೩೬ಕ್ಕೆ ಏರಿಕೆಯಾಗಿದ್ದು, ೭೭೨,೯೦೦ಜನ ಸೋಂಕಿತರು ಗುಣಮುಖರಾಗಿದ್ದಾರೆ.  ವಿಶ್ವದಲ್ಲಿ ಕೊರೊನಾದಿಂದಾಗಿ ಅಮೆರಿಕದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ. ಎರಡನೇ ಸ್ಥಾನದಲ್ಲಿ ಇಟಲಿ ಇದೆ. ಚೀನಾದಲ್ಲಿ ಒಟ್ಟು ೮೨,೮೧೬ ಪ್ರಕರಣಗಳು ವರದಿಯಾಗಿದ್ದು, ೪,೬೩೨ಜನ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಿಳಿಸುವ ಯಂತ್ರವನ್ನು ಐಐಟಿ ಸಂಶೋಧಕರು ತಯಾರಿಸಿದ್ದಾರೆ. ದೆಹಲಿ ಐಐಟಿಯ ಪ್ರೊಫೆಸರ್ ಅನೂಪ್ ಕೃಷ್ಣನ್ ಮತ್ತು ತಂಡ ಸೇರಿಕೊಂಡು ಪ್ರಕ್ರಿತಿ(pracriti) ವೆಬ್ ಆಧಾರಿತ ಡ್ಯಾಶ್‌ಬೋರ್ಡ್ಅನ್ನು ಸಿದ್ಧಪಡಿಸಿದ್ದಾರೆ. ಈ ಮೂಲಕ ಆರೋಗ್ಯ ಸಚಿವಾಲಯ, ಡಬ್ಲ್ಯೂಹೆಚ್‌ಒ, ಸರ್ಕಾರ ನೀಡಿದ ಮಾಹಿತಿ ಮೇರೆಗೆ ರಾಜ್ಯ ಹಾಗೂ ಜಿಲ್ಲೆಗಳನುಸಾರ ಕೊರೊನಾ ಸೋಂಕಿತರ ಪ್ರಮಾಣ ದರವನ್ನು ಪತ್ತೆ ಹಚ್ಚಬಹುದಾಗಿದೆ.  ಪ್ರಕ್ರಿತಿ ಎಂದರೆ ಪ್ರಿಡಿಕ್ಷನ್ ಅಂಡ್ ಅಸೆಸ್‌ಮೆಂಟ್ ಆಫ್ ಕೊರೊನಾ ಇನ್ಫೇಕ್ಷನ್ಸ್ ಅಂಡ್ […]

ಬೆಂಗಳೂರು: ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ತಿಲಕ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಸಿಪಿ ಸುಧೀರ್ ಹೆಗ್ಡೆ, ಇನ್ಸ್ಪೆಕ್ಟರ್ ಅನಿಲ್‌ಕುಮಾರ್ ನೇತೃತ್ವದಲ್ಲಿ ಪಥ ಸಂಚಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.. ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ಸ್ಥಳಿಯರು ಆರತಿ ಎತ್ತಿ, ಹೂವು ಚೆಲ್ಲಿ ಧನ್ಯವಾದ ಹೇಳಿದ್ದಾರೆ. ರಸ್ತೆಯುದ್ದಕ್ಕೂ ಸಾಮಾಜಿಕ ಅಂತರ ಕಾಯ್ದುಕೊಂಡು ನಿಂತಿದ್ದ ಸಾರ್ವಜನಿಕರು, ಪೊಲೀಸರ ಪಥ ಸಂಚಲನದ ವೇಳೆ ಚಪ್ಪಾಳೆ ತಟ್ಟಿ ಸೆಲ್ಯೂಟ್ ಮಾಡಿ ಅಭಿನಂದಿಸಿದರು.

ತಮಿಳುನಾಡು: ಕೊರೊನಾ ಸೋಂಕು ತಡೆಗಟ್ಟಲು ತಮಿಳುನಾಡಿನ ಐದು ಮಹಾನಗರಗಳಾದ ಚೆನೈ, ಕೊಯಿಮತ್ತೂರು, ಮಧುರೈ, ಸೇಲಂ ಮತ್ತು ತಿರುಪ್ಪುರಗಳನ್ನು ಇಂದಿನಿಂದ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ. ದಿನಸಿ ಅಂಗಡಿ, ತರಕಾರಿ ಮತ್ತು ಹಣ್ಣುಗಳ ಮಾರುಕಟ್ಟಗಳ ವ್ಯಾಪಾರ, ಸಾರ್ವಜನಿಕ ಸಂಚಾರಗಳನ್ನು ಆದೇಶಿಸಿದೆ. ಮೊಬೈಲ್ ಔಟ್‌ಲೆಟ್‌ಗಳ ಮೂಲಕ ತರಕಾರಿ ಮತ್ತು ಹಣ್ಣುಗಳು ಮನೆ ಬಾಗಿಲಿಗೆ ತಲುಪಲಿವೆ ಎಂದು ಪಳನಿಸ್ವಾಮಿ ಭರವಸೆ ನೀಡಿದ್ದಾರೆ.

ಪಾದರಾಯನಪುರದ ಖೈದಿಗಳನ್ನು ಕರೆತಂದು ನೆಮ್ಮದಿಯಾಗಿದ್ದ ರಾಮನಗರಕ್ಕೆ ಕೊರೊನಾ ಸೋಂಕು ಹರಡಿಸಿದ ಸಣ್ಣತನ ನಿಮ್ಮದು, ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಪಾದರಾಯನಪುರದ ಗಲಭೆಕೋರರನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿದ್ದ ವಿಚಾರದಲ್ಲಿ ಸರ್ಕಾರದ ಸಚಿವರು ನೀಡುತ್ತಿರುವ ಹೇಳಿಕೆಗಳಿಗೆ ಟ್ವಿಟ್ಟರ್ ನಲ್ಲಿ ಖಾರವಾಗಿಯೇ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಪಾದರಾಯನಪುರದ ಗಲಭೆಕೋರರನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡುವ ವಿಷಯದಲ್ಲಿ ಎಡಬಿಡಂಗಿತನ ಮತ್ತು ರಾಜಕಾರಣ […]

ಬೆಂಗಳೂರು: ಮಾನವತಾವಾದಿ, ಜಗಜ್ಯೋತಿ, ವಿಶ್ವಗುರು ಬಸವಣ್ಣ ಅವರ ತತ್ವ-ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಏಕತೆಯನ್ನು ಸಾಧಿಸಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ಕರೆ ನೀಡಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಸವಣ್ಣ ಅವರು 900 ವರ್ಷಗಳ ಹಿಂದೆ ವರ್ಗ, ವರ್ಣ, ಜಾತಿ, ಧರ್ಮ, ಲಿಂಗಭೇದಗಳಿಂದ ಮುಕ್ತರಾಗಿ ಮಾನವ ಏಕತೆಯನ್ನು ಸಾಧಿಸಬೇಕು ಎನ್ನುವ ಸಂದೇಶವನ್ನು ಸಾರಿದ್ದಾರೆ. ಅದಕ್ಕಾಗಿ ಅಪರಿಮಿತವಾಗಿ ಹೋರಾಟವನ್ನ ಮಾಡಿದ್ದಾರೆ. ಇಡೀ ಪ್ರಪಂಚದ ಯಾವುದೇ ದೇಶದಲ್ಲಿ ದುಡಿಯುವ ವರ್ಗಕ್ಕಾಗಿ, ಕಾಯಕ ಜೀವಿಗಳಿಗಾಗಿ, ನೊಂದವರ […]

ಕೇರಳ: ಇಂದು ಜಗತ್ತಿಗೆ ಅನುಭವ ಮಂಟಪ ಮೂಲಕ ಪ್ರಜಾಪ್ರಭುತ್ವದ ಪರಿಚಯ ಮಾಡಿಕೊಟ್ಟ ಜಗಜ್ಯೋತಿ ಬಸವಣ್ಣನವರ ಜಯಂತಿ ಸಂಭ್ರಮ. ಈಗಾಗಲೇ ಬಸವಣ್ಣನವರ ಜಯಂತಿಗೆ ಪ್ರಧಾನಿ ಮೋದಿ ಸೇರಿದಂತೆ ನಾಡಿನ ಹಲವು ಗಣ್ಯರು ಜನತೆಗೆ ಶುಭ ಕೋರಿ ಬಸವಣ್ಣನವರನ್ನು ಸ್ಮರಿಸಿದ್ದಾರೆ. ಇದೀಗ ಪಕ್ಕದ ರಾಜ್ಯ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಸವಣ್ಣನವರನ್ನು ವಚನದ ಮೂಲಕ ಸ್ಮರಿಸಿದ್ದಾರೆ. ವಿಶೇಷ ಅಂದ್ರೆ ಕನ್ನಡದಲ್ಲಿ ಟ್ವೀಟ್ ಮಾಡೋ ಮೂಲಕ ಕ್ರಾಂತಿಯೋಗಿಗೆ ನೆರೆ ರಾಜ್ಯದ ಮುಖ್ಯಮಂತ್ರಿಗಳು ನಮನ ಸಲ್ಲಿಸಿದ್ದಾರೆ. […]

ಬೆಂಗಳೂರು : ರಾಜ್ಯದಲ್ಲಿ ಇಂದು ಹೊಸದಾಗಿ 1 ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 501ಕ್ಕೆ ಏರಿಕೆಯಾಗಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೊರೋನಾ ಸೋಂಕಿನ ಪ್ರಕರಣ ಸಂಬಂಧ ಇಲಾಖೆ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ, ಇಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ 47 ವರ್ಷದ ಮಹಿಳೆಗೆ ಕೊರೋನಾ ಸೋಂಕು ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 501ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ […]

Advertisement

Wordpress Social Share Plugin powered by Ultimatelysocial