ಬೆಂಗಳೂರು, ಅಕ್ಟೋಬರ್ 02 : ಚುನಾವಣಾ ಆಯೋಗ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಮಾಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರ ಉಪ ಚುನಾವಣೆ ರಾಜ್ಯದ ಗಮನ ಸೆಳೆದಿದೆ. ಎಂಟಿಬಿ ನಾಗರಾಜ್ ಸೋಲಿಸಬೇಕು ಎಂದು ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿದ್ದ ಎಂಟಿಬಿ ನಾಗರಾಜ್ 2018ರ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದ ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ.
ದಾವಣಗೆರೆ, ಸೆಪ್ಟೆಂಬರ್ 30: ಮೊಬೈಲ್ ಕಳೆದುಹೋದದ್ದಕ್ಕೆ ಮನೆಯವರು ಬೈಯುತ್ತಾರೆ ಎಂದು ಹೆದರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆಯ ನಿಟ್ಟುವಳ್ಳಿ ನಿವಾಸಿ ಸಿದ್ದೇಶ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ದಾವಣಗೆರೆಯ ಡಿಸಿಎಂ ಟೌನ್ ಶಿಪ್ ಬಳಿ ಈ ಘಟನೆ ನಡೆದಿದ್ದು, ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಪ್ಟೆಂಬರ್ 29ರಂದು ಭಾನುವಾರ ತಮ್ಮ ಪಕ್ಕದ ಮನೆಯವರ ಮೊಬೈಲನ್ನು ಪಡೆದುಕೊಂಡಿದ್ದ ಸಿದ್ದೇಶ್ ಅಂದೇ ಅದನ್ನು ಕಳೆದುಕೊಂಡಿದ್ದ. ವಿಷಯ […]
ದಾವಣಗೆರೆ, ಅಕ್ಟೋಬರ್ 02: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಹುಡುಗರು ಇನ್ನು ಮುಂದೆ ಯುವತಿಯರನ್ನು ಚುಡಾಯಿಸುವ ಮುನ್ನ ಹುಷಾರಾಗಿರಬೇಕು. ಹುಡುಗಿಯರ ತಂಟೆಗೆ ಹೋದರೆ ತಂಟೆಕೋರ ಹುಡುಗರಿಗೆ ಕಾದಿದೆ ಮಾರಿ ಹಬ್ಬ. ಹುಡುಗಿಯರನ್ನು ಚುಡಾಯಿಸುವ ಪುಂಡಪೋಕರಿಗಳನ್ನು ಮಟ್ಟ ಹಾಕಲೆಂದೇ ಹೊಸ ಪಡೆಯೊಂದು ಇದೀಗ ರಸ್ತೆಗಿಳಿದಿದೆ. ಹುಡುಗರ ಪುಂಡಾಟಿಕೆಗಳಿಗೆ ಬ್ರೇಕ್ ಹಾಕುವ ಮೂಲಕ, ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಲು ಈ ಪಡೆ ಸಜ್ಜುಗೊಂಡಿದೆ. ಅದೇ ದುರ್ಗಾ ಪಡೆ. ಕೆಲ ಯುವಕರು ಗುಂಪು ಕಟ್ಟಿಕೊಂಡು […]
ಬೆಂಗಳೂರು, ಅಕ್ಟೋಬರ್ 02 : ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹದಿಂದ ಜನ ತತ್ತರಿಸಿದ್ದಾರೆ. ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಬದುಕು ಬರ್ಬರವಾಗಿದೆ. ಆದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಬಿಡಿಗಾಸಿನ ಪರಿಹಾರ ನೀಡಿಲ್ಲ, ಸಂತ್ರಸ್ತರ ಕಣ್ಣೀರು ಒರೆಸುವ ಪ್ರಯತ್ನ ಮಾಡಿಲ್ಲ. ಉತ್ತರ ಭಾರತದ ಬಿಹಾರದಲ್ಲಿ ಉಂಟಾದ ಪ್ರವಾಹಕ್ಕೆ ಕೇಂದ್ರ ಸರ್ಕಾರ ತಕ್ಷಣ ಸ್ಪಂದಿಸಿದೆ. ನೆರವು ನೀಡುವ ಭರವಸೆಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ನೈತಿಕ ಬೆಂಬಲ ನೀಡಿದ್ದಾರೆ. ಆದರೆ, ಕರ್ನಾಟಕವನ್ನು […]