ದೆಹಲಿ: ಲಾಕ್‌ಡೌನ್ ಕಾರಣಕ್ಕಾಗಿ ಮಾವಿನ ಹಣ್ಣುಗಳನ್ನು ಸವಿಯುವ ಅವಕಾಶ ಕಳೆದುಕೊಳ್ಳಲಿದ್ದ ಉತ್ತರ ಭಾರತದ ಜನರಿಗೆ ರೈಲ್ವೆ ಸಚಿವಾಲಯ ಮಾವಿನ ಹಣ್ಣುಗಳನ್ನು ತಲುಪಿಸಲು ವಿಶೇಷ ಸರಕು ಸಾಗಾಣಿಕೆ ರೈಲುಗಳ ವ್ಯವಸ್ಥೆ ಮಾಡಿದೆ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಮಹಾರಾಷ್ಟçದಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣುಗಳನ್ನು ಈ ರೈಲುಗಳ ಮೂಲಕ ತಲುಪಿಸಲಿದೆ.ಮಾವಿನ ಹಣ್ಣಿನ ಜೊತೆಗೆ ಕಿತ್ತಳೆ, ದ್ರಾಕ್ಷಿ, ಬಾಳೆಹಣ್ಣು ಹಾಗೂ ದಾಳಿಂಬೆ ಹಣ್ಣುಗಳನ್ನು ವಿಶೇಷ ರೈಲುಗಳ ಮೂಲಕ ದೆಹಲಿ ಹಾಗೂ […]
ಪಣಜಿ: ದೇಶದಲ್ಲಿಯೇ ಕರೊನಾ ಮುಕ್ತ ಮೊದಲ ರಾಜ್ಯವೆನಿಸಿದೆ ಗೋವಾ. ಇಲ್ಲಿದ್ದ ಏಳು ಸೋಂಕಿತರ ಪೈಕಿ ಎಲ್ಲರೂ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಆದರೆ, ಎಲ್ಲ ರಾಜ್ಯಗಳಂತೆ ಇಲ್ಲಿಯೂ ಲಾಕ್‌ಡೌನ್ ನಿಯಮಗಳು ಅನ್ವಯಿಸುತ್ತವೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಈ ರಾಜ್ಯ ಹೊರಗಿನ ಜನರೇ ಇಲ್ಲದಂತಾಗಿ ಆದಾಯದ ಮೂಲವನ್ನೇ ಕಳೆದುಕೊಂಡಿದೆ. ಇನ್ನೊಂದೆಡೆ ಗೋವಾ ಪ್ರಸಿದ್ಧವಾಗಿರುವುದು ಜೂಜಾಟಕ್ಕೆ. ಕ್ಯಾಸಿನೋಗಳು ಕಾನೂನುಬದ್ಧ ಜೂಜಾಟ ನಡೆಸಿದರೆ, ಅಕ್ರಮವಾಗಿ ನಡೆಯುವ ಮಟ್ಕಾ ಸಾವಿರಾರು ಜನರಿಗೆ ಉದ್ಯೋಗ ಮೂಲ. ಪ್ರತಿದಿನ ೧೦-೧೨ […]
ವಡೋದರಾ: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಸೋಂಕು ತಗುಲುವ ರಿಸ್ಕ್ನಲ್ಲೇ ಕೆಲಸ ಮಾಡುವಂತಾಗಿದೆ. ಈಗಾಗಲೇ ದೇಶದ ಹಲವೆಡೆ ಪಿಪಿಇ ಕಿಟ್‌ಗಳು ಅಗತ್ಯ ಪ್ರಮಾಣದಲ್ಲಿ ಸಿಗುವುದು ಕಡಿಮೆಯಾಗಿದೆ. ಇದಕ್ಕೆ ಪರಿಹಾರವಾಗಿ ಈಗ ಶ್ಯೂರ್ ಸೇಫ್ಟಿ ಎಂಬ ಕಂಪನಿ ಮರುಬಳಕೆ ಮಾಡಲು ಸಾಧ್ಯವಾಗುವ ಪಿಪಿಇ ಕಿಟ್ ಅಭಿವೃದ್ಧಿಪಡಿಸಿದೆ. ಈ ವೇಳೆ ಪುರ್ನಬಳಕೆ ಮಾಡಲು ಸಾಧ್ಯವಾಗುವ ಪಿಪಿಇ ಕಿಟ್ ಅಭಿವೃದ್ಧಿಯಾಗಿರೋದ್ರಿಂದ ಇದು ವೈದ್ಯಕೀಯ ಸಿಬ್ಬಂದಿಗೆ ಅನುಕೂಲವಾಗಲಿದೆ. ಈ ಮಧ್ಯೆ ಕೆಲವೆಡೆ ವೈದ್ಯರು ಬಳಸಬೇಕಾದ […]
ನವದೆಹಲಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಪೋರ್ನ್ ವೆಬ್‌ಸೈಟ್‌ಗಳ ಮೂಲಕ ಮಕ್ಕಳು ಅಶ್ಲೀಲ ಚಿತ್ರಗಳ ವೀಕ್ಷಣೆ ಹೆಚ್ಚಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸುವಂತೆ ಗೂಗಲ್, ಟ್ವೀಟರ್ ಮತ್ತು ವಾಟ್ಸಾಪ್‌ಗಳಿಗೆ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ನೋಟಿಸ್ ನೀಡಿದೆ. ಕೊರೊನಾ ಸೋಂಕು ಸಂಬಂಧ ಭಾರತದಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಹೀಗಾಗಿ ಅಶ್ಲೀಲ ಚಿತ್ರಗಳ ವೀಕ್ಷಣೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಭಾರತ ಸೇರಿದಂತೆ ವಿದೇಶಿ ಪೋರ್ನ್ ಸೈಟ್‌ಗಳ ಮೂಲಕ ಜನರು ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ಚಿತ್ರಗಳನ್ನು ನೋಡುವುದು ಅಧಿಕವಾಗಿದೆ. […]
ನವದೆಹಲಿ: ಲಾಕ್‌ಡೌನ್ ವೇಳೆ ತಮ್ಮ ಆರೋಗ್ಯ ಹದಗೆಡುತ್ತಿದೆ ಮತ್ತು ಯುವಜನತೆ ಜತೆಗೆನ ಸಂಬಂಧ ಹಾಳಾಗುತ್ತಿದೆ ಎಂದು ವೃದ್ಧರು ಭಾವಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇದರ ಜೊತೆಗೆ ಮಗ, ಮಗಳ ಜತೆಗೆನ ಸಂಬಂಧ ಹಾಳುಗುತ್ತಿದೆ ಎನ್ನುತ್ತಿದ್ದಾರೆ. ಏಜ್‌ವೆಲ್ ಫೌಂಡೇಶನ್ ಸಂಸ್ಥೆಯು ದೂರವಾಣಿ ಮೂಲಕ ೫,೦೦೦ ವೃದ್ಧರನ್ನು ಸಮೀಕ್ಷೆಗೆ ಒಳಪಡಿಸಿದೆ. ಈ ಪೈಕಿ ಪ್ರತಿ ಇಬ್ಬರಲ್ಲೊಬ್ಬರಂತೆ ಮಕ್ಕಳ ಮೇಲೆ ದೌರ್ಜನ್ಯ, ಕಿರುಕುಳ, ಬೆದರಿಕೆ, ನಿರ್ಲಕ್ಷ್ಯ, ಪ್ರತ್ಯೇಕವಾಸದ ಆರೋಪ ಮಾಡಿದ್ದಾರೆ. ಲಾಕ್‌ಡೌನ್ ವೇಳೆ ಏಂಕಾಗಿಯಾಗಿ […]
ನವದೆಹಲಿ: ವಿಶ್ವವಿಖ್ಯಾತ ಕ್ರಿಕೆಟ್ ಆಟಗಾರ, ವಿಶ್ವಕಪ್ ಗೆದ್ದ ಭಾರತೀಯ ತಂಡದ ಕ್ಯಾಪ್ಟನ್. ಹಾಗಿದ್ದ ಮೇಲೆ ಜೀವನದಲ್ಲಿ ಕ್ರಿಕೆಟ್ ಬಿಟ್ಟು ಬೇರೇನೂ ಇರಬಾರದೇ? ಹಾಗೇನಿಲ್ಲ, ಕ್ರಿಕೆಟ್ ಬಿಟ್ಟು ಬೇರೆಯದ್ದಕ್ಕೂ ಪ್ರಾಧಾನ್ಯತೆ ಇದೆ ಎನ್ನುತ್ತಾರೆ ಕಪಿಲ್ ದೇವ್. ದೇಶಾದ್ಯಂತ್ ಲಾಕ್‌ಡೌನ್ ಜಾರಿಯಲ್ಲಿದ್ದು, ಜನರು ಸಂಕಷ್ಟದಲ್ಲಿದ್ದಾರೆ. ಸದ್ಯ ಕ್ರಿಕೆಟ್, ಫುಟ್ಬಾಲ್‌ಕ್ಕಿಂತ ಹೆಚ್ಚು ಮುಖ್ಯವಾಗಿರುವ ಸಂಗತಿಗಳೆಂದರೆ ಶಾಲೆ ಹಾಗೂ ಕಾಲೇಜುಗಳು. ಇವುಗಳ ಬಗ್ಗೆ ನಾವು ಗಮನ ಹರಿಸಬೇಕಿದೆ ಎಂದು ಅವರು ಹೇಳುತ್ತಾರೆ. ಬೇರೆಲ್ಲ ಸಂಗತಿಗಳನ್ನು ಬಿಟ್ಟು […]
ವಾಷಿಂಗ್ಟನ್: ಕೊರೊನಾ ಸೋಂಕಿತರಿಗೆ ಮಲೇರಿಯಾ ನಿರೋಧಕ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮತ್ತು ಅದಕ್ಕೆ ಸರಿಸಮನಾದ ಔಷಧವನ್ನು ನೀಡುವುದರಿಂದ ಅವರ ಹೃದಯದ ಮೇಲೆ ಅಡ್ಡಪರಿಣಾಮಗಳಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ತಿಳಿಸಿದೆ. ಸಂಶೋಧನೆ, ಅಧ್ಯಯನಕ್ಕಾಗಿ ಆಸ್ಪತ್ರೆಗಳಲ್ಲಿ ಬಳಸುವುದನ್ನು ಹೊರತುಪಡಿಸಿ ಕೊರೊನಾ ವೈರಸ್ ರೋಗಿಗಳಿಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ನೀಡದಂತೆ ವೈದ್ಯರಿಗೆ ಎಚ್ಚರಿಕೆಯನ್ನೂ ನೀಡಿದೆ. ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಮಲೇರಿಯಾ ಹೈಡ್ರಾಕ್ಸಿ ಕ್ಲೋರೋಕ್ವಿನ್ ಪರಿಣಾಮಕಾರಿಯಾಗಬಲ್ಲದು ಎಂದು ಅಮೆರಿಕದ ಅಧ್ಯಕ್ಷ […]
ಚೆನೈ:ಕಳೆದೊಂದು ತಿಂಗಳಿನಿAದ ಇಡಿ ಚಿತ್ರರಂಗವೇ ಕೆಲಸವಿಲ್ಲದೆ ಖಾಲಿ ಕುಳಿತಿವೆ. ಬೇಕಾದಷ್ಟೂ ಸಿನಿಮಾಗಳಿದ್ದರೂ ಲಾಕ್‌ಡೌನ್ ಚಿತ್ರರಂಗವನ್ನೆ ಸ್ತಬ್ದಗೊಳಿಸಿವೆ. ಇದರ ನಡುವೆ ಈಗಾಗಲೇ ಸಿದ್ಧವಾಗಿರುವ ಫಿಲ್ಮ್ಗಳು, ಪ್ರೇಕ್ಷಕರ ಮನಸೂರೆಗೊಳ್ಳಲು ಹೊಸ ದಾರಿ ಕಂಡುಕೊಳ್ಳುತ್ತಿವೆ. ಆದರೆ ಅದನ್ನು ಥಿಯೇಟರ್ ಮಾಲೀಕರು ಒಪ್ಪುತ್ತಿಲ್ಲ. ತಮಿಳಿನ ೨ಡಿ ಎಂಟರ್‌ಟೇನ್ಮೆAಟ್ ಜ್ಯೋತಿಕಾ ಅಭಿನಯದ ಪೊನ್ನಮಗಳ್ ವಂದಾಲ್ ಎನ್ನುವ ಸಿನಿಮಾವನ್ನು ಆನ್‌ಲೈನ್‌ನ ಅಮೆಜಾನ್‌ನಲ್ಲಿ ಮುಂದಿನ ತಿಂಗಳು ರಿಲೀಸ್ ಮಾಡಲು ಮುಂದಾಗಿದೆ. ಈ ಕಾರಣಕ್ಕೆ ಖ್ಯಾತ ನಟ ಸೂರ್ಯರ ಚಿತ್ರ ನಿರ್ಮಾಣ […]
ಲಖನೌ: ಕೊರೊನಾ ಪತ್ತೆ ಪರೀಕ್ಷೆಗೆ ಒಳಗಾಗದೆ ತಲೆಮರೆಸಿಕೊಂಡು ಓಡಾಡುವ ತಬ್ಲಿಗಿ ಜಮಾತ್ ಸದಸ್ಯರ ಕುರಿತು ಮಾಹಿತಿ ನೀಡುವವರಿಗೆ ರೂ.೧೧ ಸಾವಿರ ನಗದು ಬಹುಮಾನ ನೀಡುವುದಾಗಿ ಉತ್ತರ ಪ್ರದೇಶದ ಸಲೀಮ್‌ಪುರದ ಬಿಜೆಪಿ ಸಂಸದ ರವೀಂದ್ರ ಕುಶ್ವಾಹ ಘೋಷಿಸಿದ್ದಾರೆ. ದೆಹಲಿಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆದಿದ್ದ ತಬ್ಲಿಗಿ ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ ಅನೇಕರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ದೇಶದ ನಾನಾ ಕಡೆಗಳಿಂದ ಜನ ಆ ಸಮಾವೇಶದಲ್ಲಿ ಭಾಗವಹಿಸಿದ್ದರು. ಪರಿಣಾಮವಾಗಿ ದೇಶದ ವಿವಿಧೆಡೆಗಳಿಗೆ […]
ತಿರುವನಂತಪುರಂ: ತೀವ್ರ ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿಯನ್ನ ಇಂಗ್ಲೆಂಡ್‌ನಿಂದ ಏರ್‌ಲಿಫ್ಟ್ ಮಾಡಿ ಕೇರಳಕ್ಕೆ ಕರೆತರುವಲ್ಲಿ ವಾಟ್ಸ್ಯಾಪ್ ಗ್ರೂಪ್‌ವೊಂದು ನೆರವಾಗಿದೆ. ಕೊರೊನಾದಿಂದ ಭಾರತದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದಿದ್ದರಿಂದ ಈ ವಾಟ್ಸ್ಯಾಪ್ ಗ್ರೂಪ್‌ನ ಸಹಾಯದಿಂದ ರೋಗಿಯೊಬ್ರು ದೇಶಕ್ಕೆ ವಾಪಸ್ ಆಗಲು ಅನುಕೂಲವಾಗಿದೆ. ಕೇರಳಿಗರನ್ನೊಳಗೊಂಡ ದೆಹಲಿ ಮೂಲದ ಈ ವಾಟ್ಸ್ಆ್ಯಪ್ ಗ್ರೂಪ್‌ನಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಹಾಗೂ ಮಾಜಿ ಕೇಂದ್ರ ಸಚಿವ ಕೆ.ಜೆ ಅಲ್ಫೋನ್ಸ್ ಕೂಡ ಇದ್ದರು. ೫೦ ದಿನಗಳ ಹಿಂದೆ ಡಿಸ್ಟ್ರೆಸ್ ಮ್ಯಾನೇಜ್ಮೆಂಟ್ ಕಲೆಕ್ಟಿವ್ […]