ಪಾಕಿಸ್ತಾನದಲ್ಲಿ ಸರಕಾರ ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸುವಂತೆ ಕೇಳಿಕೊಂಡ ಇಮ್ರಾನ್‌ ಖಾನ್‌ !

 

ಇಸ್ಲಾಮಾಬಾದ್:‌ ಹಲವಾರು ದಿನಗಳಿಂದ ಪಾಕಿಸ್ತಾನದ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಉಂಟಾಗಿದ್ದು, ಇದೀಗ ಇಂದು ನಡೆದ ಕ್ಷಿಪ್ರ ಘಟನೆಯಲ್ಲಿ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಇಮ್ರಾನ್‌ ಖಾನ್‌ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ನಿರೀಕ್ಷಿತ ಅವಿಶ್ವಾಸ ನಿರ್ಣಯಕ್ಕೆ ಮುಂಚಿತವಾಗಿ ಅವರು ನೂತನ ಚುನಾವಣೆ ನಡೆಸುವಂತೆ ಘೋಷಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜನರನ್ನುದ್ದೇಶಿಸಿ ಮಾತನಾಡಿದ ಇಮ್ರಾನ್‌ ಖಾನ್‌, “ಎಲ್ಲರೂ ಚುನಾವಣೆಗೆ ಸಿದ್ಧರಾಗಿ” ಎಂದು ಕರೆ ನೀಡಿದ್ದಾರೆ. ಸರಕಾರವನ್ನು ಕೆಳಗೆ ಉರುಳಿಸುವ ಪಿತೂರಿಯು ಇಲ್ಲವಾಗಿದೆ” ಎಂದೂ ಅವರು ಹೇಳಿದ್ದಾರೆ. ಭದ್ರತಾ ಬೆದರಿಕೆಯನ್ನು ಉಲ್ಲೇಖಿಸಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಉಪ ಸ್ಪೀಕರ್ ವಜಾಗೊಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಂಜಾನ್ 2022 ಪ್ರಾರಂಭ: ಪ್ರಧಾನಿ ಮೋದಿ ಸೇರಿ ಹಲವು ಗಣ್ಯರ ಶುಭಾಶಯ!

Sun Apr 3 , 2022
  ನವದೆಹಲಿ, ಏಪ್ರಿಲ್‌ 03: ನಿನ್ನೆ ಸಂಜೆ ದೇಶದ ಹಲವೆಡೆ ಚಂದ್ರ ದರ್ಶನವಾದ ಬಳಿಕ ಪವಿತ್ರ ರಂಜಾನ್ ಮಾಸ ಇಂದು (ಏಪ್ರಿಲ್‌ 03) ಆರಂಭವಾಗಿದೆ. ಮುಸ್ಲಿಂ ಬಾಂಧವರು ನಿನ್ನೆ ರಾತ್ರಿ ಸ್ಥಳೀಯ ಮಸೀದಿಗಳಲ್ಲಿ ತರಾವೀಹ್ ಎಂಬ ವಿಶೇಷ ರಾತ್ರಿ ಪ್ರಾರ್ಥನೆ ಸಲ್ಲಿಸಿದರು. ಇಂದು ಉಪವಾಸದ ಮೊದಲ ದಿನ ಆರಂಭವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಶುಭಾಶಯ ತಿಳಿಸಿದ್ದಾರೆ. ಪವಿತ್ರ ರಂಜಾನ್ ತಿಂಗಳ ಆರಂಭದ […]

Advertisement

Wordpress Social Share Plugin powered by Ultimatelysocial