ನವದೆಹಲಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷ ಹುದ್ದೆಗಳು ಖಾಲಿ!

ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2020 ಮಾರ್ಚ್‌1ರ ವರೆಗೆ 8.72 ಲಕ್ಷ ಹುದ್ದೆಗಳು ಖಾಲಿ ಇದ್ದವು ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಗುರುವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ), ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್‌ಸಿ) ಮತ್ತು ರೈಲ್ವೆ ನೇಮಕಾತಿ ಮಂಡಳಿಗಳು (ಆರ್‌ಆರ್‌ಬಿ) 2018-19 ಮತ್ತು 2020-21ರ ಅವಧಿಯಲ್ಲಿ 2.65 ಲಕ್ಷ ನೇಮಕಾತಿಗಳನ್ನು ನಡೆಸಿವೆ ಎಂದೂ ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ.ಸಿಬ್ಬಂದಿ ನೇಮಕಾತಿ ಮಾಡುವ ಯುಪಿಎಸ್‌ಸಿ ಯಲ್ಲೇ 485 ಹುದ್ದೆಗಳು ಖಾಲಿ ಬಿದ್ದಿವೆ.ಇದರಲ್ಲಿ ಎ ಗುಂಪಿನ 45, ಬಿ ಗುಂಪಿನ 240 ಮತ್ತು ಸಿ ಗುಂಪಿನ 200 ಹುದ್ದೆಗಳು ಸೇರಿವೆ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆತ್ಮಹತ್ಯೆ ̤ಮಗುವಿನೊಂದಿಗೆ ತಾಯಿ!

Fri Feb 4 , 2022
ರಿಪ್ಪನ್ ಪೇಟೆ:ಇಲ್ಲಿನ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದ ಮಜರೆ ಚಿಟ್ಟೆ ಗದ್ದೆಯಲ್ಲಿ ಗುರುವಾರ ಮುಂಜಾನೆ ವಿದ್ಯಾ (32) ಎಂಬುವವರು ತಮ್ಮ ಎರಡನೇ ಮಗು ತನ್ವಿ (4)ಯನ್ನು ವೇಲ್‌ನಿಂದ ಸೊಂಟಕ್ಕೆ ಕಟ್ಟಿಕೊಂಡು ಮನೆ ಮುಂಭಾಗದ ಬಾವಿಗೆ ಹಾರಿದ್ದಾರೆ.ಶಿಕಾರಿಪುರ ತಾಲ್ಲೂಕಿನ ಸಿದ್ದಾಪುರ ಗ್ರಾಮದ ವಾಸಿ ಮಂಜಪ್ಪ ಮತ್ತು ಗಿರಿಜಮ್ಮ ದಂಪತಿಯ ಮೂರನೇ ಪುತ್ರಿ ವಿದ್ಯಾ ಎಂಬುವವರನ್ನು ಹೊಸನಗರ ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಚಿಟ್ಟೆಗದ್ದೆ ವಾಸಿ ನಾಗೇಶ್ ಮತ್ತು ಭಾಗ್ಯ ದಂಪತಿಯ […]

Advertisement

Wordpress Social Share Plugin powered by Ultimatelysocial