ಪಠಾಣ್‌ ಸಿನಿಮಾದಲ್ಲಿ ʼಬೇಷರಂ ರಂಗ್‌ʼ ಹಾಡೇ ನನ್ನ ಮೆಚ್ಚಿನ ಹಾಡು; ದೀಪಿಕಾ ಪಡುಕೋಣೆ.

ಮುಂಬಯಿ:ಶಾರುಖ್‌ ಖಾನ್‌ ಅಭಿನಯದ ʼಪಠಾಣ್‌ʼ ಸಿನಿಮಾ ರಿಲೀಸ್‌ ಗೆ ದಿನಗಣನೆ ಆರಂಭವಾಗಿದೆ. ಒಂದಷ್ಟು ಕಾರಣದಿಂದ ಸುದ್ದಿಯಾದ ಸಿನಿಮಾದ ʼಬೇಷರಂ ರಂಗ್‌ʼ ಹಾಡು ಸಿನಿಮಾಕ್ಕೆ ಪಾಸಿಟಿವ್‌ ಹಾಗೂ ನೆಗೆಟಿವ್‌ ಎರಡು ಕಡೆಯಿಂದಲೂ ಪರಿಣಾಮ ಬೀರಿದೆ.

ಈಗಾಗಲೇ ಸಿನಿಮಾ ಅಡ್ವಾನ್ಸ್‌ ಬುಕಿಂಗ್‌ ನಲ್ಲಿ ದಾಖಲೆ ಬರೆದಿದೆ. ಒಂದು ಕಡೆಯಿಂದ ಕೆಲವರು ಸಿನಿಮಾದ ಹಾಡನ್ನು ಹಿಡಿದುಕೊಂಡು ಬಾಯ್ಕಾಟ್‌ ಮಾಡುತ್ತಿದ್ದರೆ, ಇನ್ನೊಂದೆಡೆ ಬಹು ಸಮಯದ ಬಳಿಕ ಅಭಿಮಾನಿಗಳು ಶಾರುಖ್‌ ಅವರನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ.

ಸಿನಿಮಾದ ಬಗ್ಗೆ ಇದೀಗ ನಟಿ ದೀಪಿಕಾ ಪಡುಕೋಣೆ ಅವರು ಮಾತನಾಡಿದ್ದಾರೆ. ಯಶ್‌ ರಾಜ್‌ ಫಿಲ್ಮ್ಸ್‌ ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ದೀಪಿಕಾ ಪಡುಕೋಣೆ ಸಿನಿಮಾದ ಹಾಡುಗಳ ಬಗ್ಗೆ ಮಾತನಾಡಿದ್ದಾರೆ.

ಜೂಮ್ ಜಾ ಪಠಾಣ್ ಹಾಗೂ ಬೇಷರಂ ರಂಗ್‌ ಇದರಲ್ಲಿ ಯಾವ ಹಾಡು ನಿಮಗೆ ಇಷ್ಟವೆನ್ನುವ ಪ್ರಶ್ನೆಗೆ ಉತ್ತರಿಸಿದ ದೀಪಿಕಾ, ಎರಡೂ ಹಾಡುಗಳು ನನ್ನ ಇಷ್ಟದ ಹಾಡುಗಳು, ಈ ಹಾಡುಗಳು ಭಿನ್ನವಾಗಿ ಮೂಡಿಬಂದಿದೆ. ʼಬೇಷರಂʼ ಹಾಡು ನನ್ನ ಇಷ್ಟದ ಹಾಡು. ನಾವು ಶೂಟಿಂಗ್‌ ಮಾಡುತ್ತಿದ್ದ ಸ್ಥಳ ಕಷ್ಟಕರವಾಗಿತ್ತು. ಈ ಹಾಡು ತುಂಬಾ ಸುಂದರವಾಗಿ ಮೂಡಿಬಂದಿದೆ ಎಂದಿದ್ದಾರೆ.

ಹಾಡಿನ ಚಿತ್ರೀಕರಣದ ವೇಳೆ ಎಂಜಾಯ್‌ ಮಾಡಿ, ಸ್ಟೆಪ್‌ ಗಳನ್ನು ಹಾಕುತ್ತಿದ್ದೆವು. ಎರಡೂ ಹಾಡುಗಳು ನನ್ನ ಇಷ್ಟದ ಹಾಡುಗಳು, ಈ ಎರಡೂ ಹಾಡುಗಳೂ ದೊಡ್ಡಮಟ್ಟದಲ್ಲಿ ಹಿಟ್‌ ಆಗಿರುವುದು ಖುಷಿಯಿದೆ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸದ್ಯದಲ್ಲೇ ಯಶ್​​, ಪ್ರಭಾಸ್​ ಒಟ್ಟಿಗೆ ಸಿನಿಮಾ ಮಾಡ್ತಾರಾ? ಹಾಗಾದ್ರೆ ಈ ಚಿತ್ರದ ಡೈರೆಕ್ಟರ್​​​?

Tue Jan 24 , 2023
ಕೆಜಿಎಫ್ ಮುಗಿದ ಮೇಲೆ ನಿದೇರ್ಶಕ ಪ್ರಶಾಂತ್ ನೀಲ್ ಜೊತೆ ಪ್ರಭಾಸ್ ಸಲಾರ್ ಚಿತ್ರವನ್ನು ಮಾಡ್ತಿದ್ದಾರೆ. ಈ ಕಡೆ ಯಶ್​ ಹೊಸ ಚಿತ್ರಕ್ಕೆ ಸಜ್ಜಾಗ್ತಿದ್ದಾರೆ. ಸದ್ಯಕ್ಕೆ ಮೂವರಿಗೂ ಕನೆಕ್ಷನ್ನೇ ಇಲ್ಲ. ಆದ್ರೀಗ, ಯಶ್​, ನೀಲ್ ಮತ್ತು ಪ್ರಭಾಸ್​ ಬಗ್ಗೆ ಹಳೆ ಸುದ್ದಿ ಮತ್ತೆ ಸದ್ದು ಮಾಡ್ತಿದೆ. ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಮುಗಿದ ತಕ್ಷಣ ತೆಲುಗು ನಟ ಪ್ರಭಾಸ್ ಜೊತೆ ಪ್ರಶಾಂತ್ ನೀಲ್, ಸಲಾರ್ ಅಂತ ಸಿನಿಮಾ ಅನೌನ್ಸ್ ಮಾಡಿದ್ರು. ಕೆಜಿಎಫ್ […]

Advertisement

Wordpress Social Share Plugin powered by Ultimatelysocial