ಪಾಟ್ನಾ: ಮದ್ಯ ಸೇವಿಸುವವರ ಪತ್ತೆ ಹಚ್ಚಲು ಶಿಕ್ಷಕರು; ಶಿಕ್ಷಣ ಇಲಾಖೆಯಿಂದ ಆದೇಶ ಜಾರಿ.

ಪಾಟ್ನಾ: ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರ್ಪಡೆಗೊಳಿಸಲು ಶಿಕ್ಷಕರಿಗೆ ಸೂಚನೆ ನೀಡುವುದು ಸಾಮಾನ್ಯ. ಏಕೆಂದರೆ, ಸ್ಥಳೀಯವಾಗಿ ಶಿಕ್ಷಕರು ಪರಿಚಯಸ್ಥರೇ ಆಗಿರುವುದರಿಂದ ಅವರಿಗೆ ಅದು ಸುಲಭವೂ ಆಗಿರುತ್ತದೆ. ಆದರೆ, ಬಿಹಾರದಲ್ಲಿ ಮದ್ಯ ಸೇವನೆ ಮತ್ತು ಮದ್ಯ ಪೂರೈಕೆಯನ್ನು ಯಾರು ಮಾಡುತ್ತಾರೆ ಎಂಬುದನ್ನು ಪತ್ತೆ ಹಚ್ಚುವ “ಹೊಸ ಕೆಲಸ’ ಶಿಕ್ಷಕರ ಪಾಲಿಗೆ ಸಿಕ್ಕಿದೆ.ಈ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆ ಆದೇಶವನ್ನೂ ಹೊರಡಿಸಿದೆ.ಆದೇಶದ ಪ್ರಕಾರ ಬಿಹಾರ ಸರ್ಕಾರದ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ ಕುಮಾರ್‌ ಹೊರಡಿಸಿದ ಆದೇಶದ ಪ್ರಕಾರ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮದ್ಯ ಸೇವನೆ ಮಾಡುವವರು ಮತ್ತು ಮದ್ಯ ಪೂರೈಕೆ ಮಾಡುವವರ ವಿವರ ಸಂಗ್ರಹಿಸಿ, ಅಬಕಾರಿ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ಎರಡು ವಿಶೇಷ ಮೊಬೈಲ್‌ ಸಂಖ್ಯೆ ಮತ್ತು ಟೋಲ್‌ ಫ್ರೀ ನಂಬರ್‌ಗಳನ್ನು ಸಿದ್ಧಪಡಿಸಲಾಗಿದೆ.ಶಿಕ್ಷಕರಲ್ಲದೆ, ಶಾಲೆಯ ಇತರ ಸಿಬ್ಬಂದಿ ಮತ್ತು ಅದರ ಮೇಲುಸ್ತುವಾರಿ ಸಮಿತಿ ಸದಸ್ಯರಿಗೂ ಇಂಥವರನ್ನು ಕಡ್ಡಾಯವಾಗಿ ಪತ್ತೆ ಹಚ್ಚಿ ಮಾಹಿತಿ ನೀಡುವ ಹೊಣೆಗಾರಿಕೆ ವಹಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

‌ ಕಾಜೋಲ್‌ ದೇವ್ ಗನ್ ಗೆ ಕೋವಿಡ್‌-19ಪಾಸಿಟಿವ್

Sun Jan 30 , 2022
ಮುಂಬೈ: ಬಾಲಿವುಡ್ ನಟಿ ಕಾಜೋಲ್ ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು 47 ವರ್ಷದ ನಟಿ ಕಾಜೋಲ್ ಖಚಿತಪಡಿಸಿದ್ದಾರೆ. ರುಡಾಲ್ಫ್ ಹಿಮಸಾರಂಗದಂತಹ ಶೀತದಿಂದಾಗಿ ತನ್ನ ಕೆಂಪು ಮೂಗನ್ನು ಯಾರಿಗಾದರೂ ತೋರಿಸಲು ತುಂಬಾ ಮುಜುಗರವಾಗುತ್ತಿದೆ ಎಂದು ಬರೆದು ತನ್ನ ಮಗಳು ನೈಸಾಳ ಚಿತ್ರವನ್ನು ಅವರು ಹಂಚಿಕೊಂಡಿದ್ದಾಳೆ.ಕೋವಿಡ್-19 ಸೋಂಕು ದೃಢಪಟ್ಟಿದೆ. ನನ್ನ ರುಡಾಲ್ಫ್ ಮೂಗನ್ನು ಯಾರೂ ನೋಡಬಾರದು ಎಂದು ನಾನು ನಿಜವಾಗಿಯೂ ಬಯಸುವುದಿಲ್ಲ ಆದ್ದರಿಂದ ನಾವು ವಿಶ್ವದ ಅತ್ಯಂತ ಸಿಹಿಯಾದ […]

Advertisement

Wordpress Social Share Plugin powered by Ultimatelysocial