ಪವಿತ್ರಾ ಲೋಕೇಶ್ ಲವ್ ಟ್ರ್ಯಾಕ್ ಶುರು ಮಾಡಿದ್ದೇ 1500 ಕೋಟಿ ಹೊಡೆಯಲು, ಮೊದಲ ಪತಿ ಸುಚೇಂದ್ರ ಪ್ರಸಾದ್ ಸ್ಫೋಟಕ ಹೇಳಿಕೆ!

ಕಳೆದ ಕೆಲವು ತಿಂಗಳಿನಿಂದ ನರೇಶ್-ಪವಿತ್ರಾ ಲೋಕೇಶ್ ಮದುವೆ ಟಾಲಿವುಡ್​​ನಲ್ಲಿ ಭಾರೀ ಚರ್ಚೆ ಆಗ್ತಿದೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಮದುವೆ ಬಳಿಕ ಹನಿಮೂನ್ ಅಂತ ಓಡಾಡ್ತಿದ್ದಾರೆ. ಇದೀಗ ಪವಿತ್ರಾ ಲೋಕೇಶ್ ಮೊದಲ ಪತಿ ಸುಚೇಂದ್ರ ಪ್ರಸಾದ್ ಮೌನ ಮುರಿದಿದ್ದಾರೆ. ಹೊಸ ವರ್ಷದ ಆರಂಭದಲ್ಲಿ ಪವಿತ್ರಾ ಲೋಕೇಶ್ ಮದುವೆಯಾಗುತ್ತಿದ್ದೇನೆ ಎಂದು ಲಿಪ್ ಲಾಕ್ ಫೋಟೋಗಳನ್ನು ಬಿಟ್ಟಿದ್ದರು. ಇತ್ತೀಚೆಗೆ ಮದುವೆಯ ವಿಡಿಯೋವನ್ನು ಬಿಟ್ಟು ಶಾಕಿಂಗ್ ಕೊಟ್ರು. ಆದ್ರೆ ಇದೀಗ ಇದು ಮದುವೆಯ ವಿಡಿಯೋ ಅಲ್ಲ, ಚಿತ್ರದ ಪ್ರಚಾರದ ವಿಡಿಯೋ ಎಂಬ ಅನುಮಾನ ಹುಟ್ಟಿಕೊಂಡಿದೆ. ಪವಿತ್ರಾ ಲೋಕೇಶ್ ಅವರು ನರೇಶ್​ಗೆ 4ನೇ ಪತ್ನಿಯಾಗಿದ್ದಾರೆ. ಪವಿತ್ರಾ ಲೋಕೇಶ್ ಅವರನ್ನು ಕಾನೂನುಬದ್ಧವಾಗಿ ಮದುವೆಯಾಗಲು ನರೇಶ್ ತನ್ನ 3ನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇದನ ನೋಟಿಸ್ ಕಳುಹಿಸಿದ್ದಾರೆ. ಆದರೆ ಆಕೆ ವಿಚ್ಛೇದನಕ್ಕೆ ರಮ್ಯಾ ಒಪ್ಪುತ್ತಿಲ್ಲ. ನರೇಶ್-ಪವಿತ್ರಾ ಲೋಕೇಶ್ ಮದುವೆ ಇದೀಗ ಸಖತ್ ಟಾಪಿಕ್ ಆಗುತ್ತಿದೆ. ಹೀಗಾಗಿ ಇವರಿಬ್ಬರು ಆಗಾಗ ಸುದ್ದಿಯಲ್ಲಿರುತ್ತಾರೆ. ಮದುವೆ ಬಳಿಕ ದುಬೈಗೆ ಹನಿಮೂನ್​ಗೆ ಹಾರಿದ್ದಾರೆ ಎನ್ನುವ ಸುದ್ದಿ ಕೂಡ ವೈರಲ್ ಆಗಿದೆ. ಈ ನಡುವೆ ಪವಿತ್ರಾ ಲೋಕೇಶ್ ಅವರ ಮೊದಲ ಪತಿ ಮಾಡಿರುವ ಕಾಮೆಂಟ್​ಗಳು ಸಂಚಲನ ಮೂಡಿಸುತ್ತಿವೆ. ಈ ಬಗ್ಗೆ ಪವಿತ್ರಾ ಲೋಕೇಶ್ ಅವರ ಪತಿ ಸುಚೇಂದ್ರ ಪ್ರಸಾದ್ ಪ್ರತಿಕ್ರಿಯಿಸಿದ್ದರು. ಇತ್ತೀಚೆಗೆ ಅವರು ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ಪವಿತ್ರಾ ಲೋಕೇಶ್ ಅವರ ವರ್ತನೆ ಬಗ್ಗೆ ಅವರು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಪವಿತ್ರಾ ಐಷಾರಾಮಿ ಜೀವನವನ್ನು ಇಷ್ಟಪಡುತ್ತಾಳೆ, ಆ ಜೀವನಕ್ಕಾಗಿ ಏನು ಬೇಕಾದರೂ ಮಾಡುತ್ತಾಳೆ. ಆಕೆ ಅವಕಾಶವಾದಿ ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದಾರೆ. ನರೇಶನ ವಿಚಾರದಲ್ಲಿ ಬೇರೆ ಪ್ಲಾನ್ ಮಾಡಿದ್ದಾಳೆ ಎಂದು ಹೊಸ ಬಾಂಬ್ ಸಿಡಿಸಿದ್ದಾಳೆ. 1500 ಕೋಟಿ ಆಸ್ತಿಯನ್ನು ಕಬಳಿಸಲು ನರೇಶ್ ಜೊತೆ ಲವ್ ಟ್ರ್ಯಾಕ್ ಆರಂಭಿಸಿದ್ದಾಳೆ ಎಂದು ಹೇಳಿದ್ದಾರೆ.  ಆಸ್ತಿ ಹಾಳು ಮಾಡುವ ದುರುದ್ದೇಶದಿಂದ ನರೇಶ್ ಜೊತೆ ತಿರುಗಾಡುತ್ತಿದ್ದಾಳೆ ಎಂದು ಸುಚೇಂದ್ರ ಪ್ರಸಾದ್ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಹಣಕ್ಕಾಗಿ ಪವಿತ್ರಾ ಲೋಕೇಶ್ ನನಗೆ ವಿಚ್ಛೇದನ ನೀಡಿದ್ದಾಳೆ. ನರೇಶ್ ಗೆ ಇದು ಇನ್ನೂ ಅರ್ಥವಾಗಿಲ್ಲ. ಮುಂದೊಂದು ದಿನ ಗೊತ್ತಾಗುತ್ತದೆ ಎಂದು ಸುಚೇಂದ್ರ ಪ್ರಸಾದ್ ಹೇಳಿರುವುದು ಇದೀಗ ಭಾರೀ ಚರ್ಚೆ ಆಗ್ತಿದೆ. ಪವಿತ್ರಾ ಲೋಕೇಶ್ ಒಳ್ಳೆಯವಳಲ್ಲ, ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾಳೆ ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದರು. ಈ ವಿಚಾರವಾಗಿ ನರೇಶ್ ಮತ್ತು ಪವಿತ್ರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RRR ತಂಡದಲ್ಲಿ ಜೋರಾಗಿದೆ ಒಳಜಗಳ.. ಆಸ್ಕರ್‌ ಬಳಿಕ ಹೊರಬಿತ್ತು ಅಸಲಿ ವಿಷ್ಯ!

Wed Mar 15 , 2023
ಮೊನ್ನೆ ನಡೆದ ಆಸ್ಕರ್‌ 2023 ಅಲ್ಲಿ RRR ಚಿತ್ರದ ನಾಟು ನಾಟು ಹಾಡು ಈ ವರ್ಷ ಅತ್ಯುತ್ತಮ ಮೂಲ ಗೀತೆಯನ್ನು ಗೆದ್ದಿದೆ. ಇದರ ಜೊತೆಗೆ, ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ಎಲಿಫೆಂಟ್ ವಿಸ್ಪರರ್ಸ್ ಪ್ರಶಸ್ತಿ ಬಾಚಿಕೊಂಡಿದೆ. ಸದ್ಯ RRR ತಂಡ ಆಸ್ಕರ್‌ ಗೆದ್ದ ಖುಷಿಯನ್ನು ಸಂಭ್ರಮಿಸುತ್ತಿದೆ. ಆದರೆ ನಿರ್ಮಾಪಕ ದಾನಯ್ಯ ಮಾತ್ರ ಈ ಸಂತಸದ ಭಾಗವಾಗದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇಡೀ ವಿಶ್ವವೇ ಇಷ್ಟೊಂದು ಬಿಗ್ ಬಜೆಟ್ ಸಿನಿಮಾವನ್ನು ಕುತೂಹಲದಿಂದ ನೋಡುತ್ತಿರುವ […]

Advertisement

Wordpress Social Share Plugin powered by Ultimatelysocial