ನಟಿ ಪವಿತ್ರಾ ಲೋಕೇಶ್​ ಹಾಗೂ ಟಾಲಿವುಡ್​ ನಟ ನರೇಶ್​ ಸಂಬಂಧ !

 

ನಟಿ ಪವಿತ್ರಾ ಲೋಕೇಶ್​ ಹಾಗೂ ಟಾಲಿವುಡ್​ ನಟ ನರೇಶ್​ ಸಂಬಂಧದ ಕುರಿತು ಹುಟ್ಟಿಕೊಂಡಿರುವ ಸುದ್ದಿಗಳಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಇದೀಗ ಡೈಮಂಡ್​ ನೆಕ್ಲೇಸ್​ ಬಗ್ಗೆ ನರೇಶ್​ ಮೂರನೇ ಪತ್ನಿ ರಮ್ಯಾ ಮಾಡಿರುವ ಆರೋಪದ ಬೆನ್ನಲ್ಲೇ ನಟಿ ಪವಿತ್ರ ಲೋಕೇಶ್ ಧರಿಸಿರುವ ಡೈಮಂಡ್ ನೆಕ್ಲೆಸ್ ಸುತ್ತ ಹಲವು ಅನುಮಾನಗಳು ಹುಟ್ಟಿಕೊಂಡಿದೆ.

ನನ್ನ ಅತ್ತೆಯ ಡೈಮಂಡ್ ನೆಕ್ಲಸ್ ಪವಿತ್ರಬಳಿ ಇದೆ ಎಂದು ನರೇಶ್ ಪತ್ನಿ ರಮ್ಯಾ ಆರೋಪ ಮಾಡಿದ್ದರು.

ಇದರ ಬೆನ್ನಲ್ಲೇ ತೆಲುಗು ಹಾಸ್ಯನಟ ಬರ್ತ್ಡೇ ಪಾರ್ಟಿಯಲ್ಲಿ ನರೇಶ್ ಜೊತೆ ಡೈಮಂಡ್ ನೆಕ್ಲೆಸ್ ಹಾಕಿಕೊಂಡು ಮಿಂಚಿರುವ ಪವಿತ್ರ ಅವರ ಫೋಟೋ ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ ಪವಿತ್ರಾ ಲೋಕೇಶ್ ಗೆ ಡೈಮೆಂಡ್ ನೆಕ್ಲೇಸ್ ಕೊಟ್ಟಿದ್ದಾರಾ ನರೇಶ್ ? ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಅಲ್ಲದೆ ಮೈಸೂರಿನಲ್ಲಿರುವ ಮನೆಯಲ್ಲಿ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಒಟ್ಟಿಗೆ ಇದ್ದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅನುಮಾನ ಹುಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಮಾಧ್ಯಮದ ಸ್ಟೇಟ್ ಮೆಂಟ್ ನೋಡಿ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪಿಲ್ಲೋ ಕವರ್ ಮನೆಯ wood ಎಲ್ಲಾ ಇಬ್ಬರ ವಿಡಿಯೋದಲ್ಲಿ ಒಂದೇ ತರಹ ಇದ್ದು, ಇದನ್ನ ನೋಡಿದ ವೀಕ್ಷಕರು ಕಮೆಂಟ್ಸ್ ನಲ್ಲಿ ಪವಿತ್ರಾ ಲೋಕೇಶ್ ಮತ್ತು ನರೇಶ್ ವಿರುದ್ಧ ಕಿಡಿಕಾರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬ್ಯೂಟಿಫುಲ್ ಜೋಡಿ ಅಂದರೆ, ಅದು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ.

Sat Jul 2 , 2022
ಟಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ಜೋಡಿ ಅಂದರೆ, ಅದು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ. ಈ ಜೋಡಿ ತೆರೆ ಮೇಲೆ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿದ್ದೇ ಇಲ್ಲ. ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿಯನ್ನು ಒಟ್ಟಿಗೆ ನೋಡಬೇಕು. ಈ ಪೇರ್ ಮತ್ತೊಂದು ಅದ್ಬುತ ಸಿನಿಮಾ ಮಾಡಬೇಕು ಅಂತ ಇಬ್ಬರ ಫ್ಯಾನ್ ಕಾತುರದಿಂದ ಕಾಯುತ್ತಲೇ ಇದ್ದಾರೆ. ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಂತೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿಯೇ ನಟಿಸುತ್ತಿದ್ದಾರೆ. ಇನ್ನೊಂದ್ಕಡೆ ಅನುಷ್ಕಾ ಶೆಟ್ಟಿ ಸುದ್ದಿನೇ […]

Advertisement

Wordpress Social Share Plugin powered by Ultimatelysocial