Paytm Cash Back Offer: ಪ್ರಿಪೇಯ್ಡ್​ ಪ್ಲಾನ್ ರೀಚಾರ್ಜ್​ ಮಾಡಿದರೆ 1 ಸಾವಿರದವರೆಗೆ ಕ್ಯಾಶ್​ಬ್ಯಾಕ್​ ಪಡೆಯಿರಿ!

Paytm New Cash Back Offer: ನಷ್ಟವನ್ನು ಪೂರೈಸುವ ನಿಟ್ಟಿನಲ್ಲಿ ಟೆಲಿಕಾಂ ಕಂಪನಿಗಳಾದ ಜಿಯೋ (Jio), ವೊಡಾಫೊನ್​ (Vi) ಮತ್ತು ಏರ್​ಟೆಲ್​ (​​Airtel) ತಮ್ಮ ಸುಂಕವನ್ನು ಶೇಕಡಾ 20 ರಷ್ಟು ಹೆಚ್ಚಿಸಿವೆ. ಈ ಹೆಚ್ಚಳದಿಂದ ಬೇಸರ ಮಾಡಿಕೊಂಡ ಜನರಿಗಾಗಿ ಇದೇಇಗ ಪೇಟಿಎಂನಿಂದ ಪರಿಹಾರ ಪಡೆದುಕೊಳ್ಳಬಹುದಾಗಿದೆ.
ಏಕೆಂದರೆ ಪೇಟಿಯಂ ಮೂಲಕ ಪ್ರಿಯೇಯ್ಡ್​ ರೀಚಾರ್ಜ್​ ಮಾಡಿಕೊಂಡರೆ ಕ್ಯಾಶ್​ಬ್ಯಾಕ್​ ಮತ್ತು ಇತರ ಕೊಡುಗೆಗಳು ಸಿಗಲಿದೆ.

ಪ್ರೀ-ಪೇಯ್ಡ್ ಬಳಕೆದಾರರಿಗೆ ಪೇಟಿಯಂನ ಕೊಡುಗೆ
ಪೇಟಿಯಂ ಪ್ರಿ-ಪೇಯ್ಡ್ ಯೋಜನೆಗಳನ್ನು ಬಳಸುವ ಗ್ರಾಹಕರಿಗೆ ಕ್ಯಾಶ್ ಬ್ಯಾಕ್ ಮತ್ತು ಇತರ ಬಹುಮಾನಗಳನ್ನು ಘೋಷಿಸಿದೆ. ಸಣ್ಣ ಟ್ರಿಕ್ ಬಳಸಿ 1 ಸಾವಿರದವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು. ಈ ಯೋಜನೆಗಳ ಲಾಭವನ್ನು ಹೇಗೆ ಪಡೆಯಬಹುದು ಎಂಬ ಮಾಹಿತಿ ಇಲ್ಲಿದೆ.

ಮೊದಲ ಬಾರಿಗೆ ಬಳಕೆದಾರರಿಗೂ ಲಾಭ
ಪೇಟಿಯಂ (Paytm) ಮೂಲಕ ಕ್ಯಾಶ್ ಬ್ಯಾಕ್‌ನ ಲಾಭವನ್ನು ಪಡೆಯಲು ಬಯಸಿದರೆ, ‘WIN1000’ ಪ್ರೋಮೋಕೋಡ್ ಅನ್ನು ಬಳಸಿಕೊಂಡು 1 ಸಾವಿರ ರೂಪಾಯಿಗಳವರೆಗೆ ಗೆಲ್ಲಬಹುದು. ಅದೇ ಸಮಯದಲ್ಲಿ, Paytm ಬಳಕೆದಾರರು ಮೊದಲ ಬಾರಿಗೆ 15 ರೂಗಳ ನೇರ ರಿಯಾಯಿತಿಯನ್ನು ಪಡೆಯಲು FLAT15 ಪ್ರೊಮೊಕೋಡ್ ಅನ್ನು ಬಳಸಬಹುದು. ಬಳಕೆದಾರರು ಬಯಸಿದರೆ, ಕಂಪನಿಯ ಇತರ ಕೊಡುಗೆಗಳನ್ನು ಸಹ ಆಯ್ಕೆ ಮಾಡಬಹುದು.

ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ
ಪೇಟಿಯಂ ತನ್ನ ಆಫರ್ ಎಲ್ಲಾ ಏರ್​ಟೆಲ್​​, ಜಿಯೋ, ವೊಡಾಫೋನ್​ ಐಡಿಯಾ, ಬಿಎಸ್​ಎನ್​ಎಲ್​ ಮತ್ತು MTNLಗೆ ಅನ್ವಯಿಸುತ್ತದೆ ಎಂದು ಹೇಳಿದೆ. ಪೇಟಿಯಂನಿಂದ ವಹಿವಾಟಿನ ಮೇಲೆ ಬಳಕೆದಾರರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಕಂಪನಿ ತಿಳಿಸಿದೆ. ಅಂದರೆ, ಬಳಕೆದಾರರು ಎಷ್ಟು ಮೊತ್ತವನ್ನು ರೀಚಾರ್ಜ್ ಮಾಡುತ್ತಾರೆ, ಅದೇ ಮೊತ್ತದಲ್ಲಿ ಅವರು ಕ್ಯಾಶ್ ಬ್ಯಾಕ್ ಪಡೆಯುತ್ತಾರೆ.

ಕ್ಯಾಶ್ ಬ್ಯಾಕ್‌ನ ಪ್ರಯೋಜನವು ರೆಫರಲ್‌ನಲ್ಲಿಯೂ ಸಹ ಲಭ್ಯವಿರುತ್ತದೆ
ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಕ್ಯಾಶ್ ಬ್ಯಾಕ್ ಆಫರ್ ಅನ್ನು ಸಹ ಬಿಡುಗಡೆ ಮಾಡಿದೆ. ಕಂಪನಿಯ ರೆಫರಲ್ ಪ್ರೋಗ್ರಾಂನಲ್ಲಿ ಭಾಗವಹಿಸುವ ಮೂಲಕ ತನ್ನ ಅಸ್ತಿತ್ವದಲ್ಲಿರುವ ಬಳಕೆದಾರರಲ್ಲಿ ಯಾರಾದರೂ Paytm ಅನ್ನು ಬಳಸಲು ಇನ್ನೊಬ್ಬ ವ್ಯಕ್ತಿಯನ್ನು ಆಹ್ವಾನಿಸಿದರೆ, ಉಲ್ಲೇಖಿತ ಬಳಕೆದಾರರು ಮತ್ತು ಆಹ್ವಾನಿಸಲ್ಪಟ್ಟ ವ್ಯಕ್ತಿ ಇಬ್ಬರೂ 100-100 ರೂ.ವಿನ ಕ್ಯಾಶ್ ಬ್ಯಾಕ್ ಪಡೆಯುತ್ತಾರೆ ಎಂದು ಕಂಪನಿ ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹೊಸ ಫೀಚರ್ ಪಡೆದುಕೊಂಡ Hero Optima HX ಎಲೆಕ್ಟ್ರಿಕ್ ಸ್ಕೂಟರ್

Sun Dec 26 , 2021
ಭಾರತದಲ್ಲಿ ಇಂಧನ ದರ ಗಗನಕ್ಕೇರಿದೆ. ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ನಡುವೆ ಉತ್ತಮ ಪೈಪೋಟಿ ಇವೆ, ಈ ನಡುವೆ ಹೀರೋ ಆಪ್ಟಿಮಾ ಹೆಚ್‌ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಹೊಸ ನವೀಕರಣವನ್ನು ಪಡೆದುಕೊಂಡಿದೆ. ಹೀರೋ […]

Advertisement

Wordpress Social Share Plugin powered by Ultimatelysocial