ಪೆಟ್ರೋಲ್, ಡೀಸೆಲ್ ದರ ಜಾಸ್ತಿ ಮಾಡಿದ್ದಾಯ್ತು. ಇದೀಗ ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ

ಪೆಟ್ರೋಲ್, ಡೀಸೆಲ್ ದರ ಜಾಸ್ತಿ ಮಾಡಿದ್ದಾಯ್ತು. ಇದೀಗ ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಹಾಕಿದ್ದು ನಾಚಿಕೆಗೇಡು ಎಂದು ಜೆಡಿಎಸ್ ಹಿರಿಯ ಮುಖಂಡ ಮುಹಮ್ಮದ್ ಕುಞಿ ಕಿಡಿಕಾರಿದ್ದಾರೆ. ಮಂಗಳೂರು ನಗರದ ಖಾಸಗಿ ಹೊಟೇಲ್ ನಲ್ಲಿ ಮಾತನಾಡಿದ ಅವರು, ಇನ್ಮುಂದೆ ಹೆಣಕ್ಕೂ, ಸುಡುವ ಕಟ್ಟಿಗೆಗೂ ಜಿಎಸ್ ಟಿ ಹಾಕಬಹುದು ಇವರು. ಈ ರೀತಿ ಆದ್ರೆ ಜನಸಾಮಾನ್ಯರು ಯಾವ ರೀತಿ ಜೀವನ ನಡೆಸಬೇಕು..? ಹಾಲು, ಮಜ್ಜಿಗೆ, ಮೊಸರು ಹೇಗೆ ಖರೀದಿ ಮಾಡೋದು..? ಹೀಗಾಗಿ ಇದನ್ನು ನಾವು ವಿರೋಧಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಅವತ್ತು ಮೋದಿ ಮೋದಿ ಎಂದು ಜನರು ವೋಟ್ ಹಾಕಿದ್ರು. ಈ ಸಲ ಮೋದಿ ಮೋದಿ ಅಂದ್ರೆ ಯಾರೂ ವೋಟ್ ಕೊಡಲ್ಲ ಅಂದ್ರು.
ಇನ್ನು ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೊಡಲು ಸರ್ಕಾರದ ಬಳಿ ಹಣ ಇಲ್ಲ ಎಂದು ಆರೋಪಿಸಿದ್ದಾರೆ. ‌ಜನ ಎಚ್ಚರಗೊಂಡಿದ್ದಾರೆ. ಹೀಗಾಗಿ ನಾವು ಜನರಿಗೆ ನ್ಯಾಯ ದೊರಕಿಸಿಕೊಡಲು ಪಕ್ಷವನ್ನು ಬಲವಾಗಿ ಸಂಘಟಿಸಲಿದ್ದೀವಿ ಅಂದ್ರು. ಶೀಘ್ರದಲ್ಲೇ ಜಿಎಸ್ ಟಿ ವಿರುದ್ದ ದೊಡ್ಡ ಮಟ್ಟದ ಪ್ರತಿಭಟನೆಯನ್ನು ಜೆಡಿಎಸ್ ಮಾಡಲಿದೆ ಎಂದ್ರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ

Wed Jul 20 , 2022
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಕಹರಾ ಗ್ರಾಮದ ಬಳಿ ಮಂಗಳವಾರ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿದ್ದು, ಈ ಪ್ರದೇಶದಲ್ಲಿ ಸಾಕಷ್ಟು ಹಾನಿಯಾಗಿದೆ. “ಗ್ರಾಮ ಪ್ರದೇಶವು ಪ್ರಸ್ತುತ ಭಾರಿ ಮಳೆಯಿಂದ ಉಂಟಾದ ಪ್ರವಾಹವನ್ನು ಅನುಭವಿಸುತ್ತಿದೆ, ಇದು ಅಲ್ಲಮ ಇಕ್ಬಾಲ್ ಸ್ಮಾರಕ ಅಕಾಡೆಮಿ ಮತ್ತು ಪ್ರವಾಸೋದ್ಯಮದ ಕಟ್ಟಡ ಮತ್ತು ಮೈದಾನ ಸೇರಿದಂತೆ ಅನೇಕ ಮನೆಗಳನ್ನು ನಾಶಪಡಿಸಿದೆ ಮತ್ತು ಆಸ್ತಿ ನಷ್ಟಕ್ಕೆ ಕಾರಣವಾಗಿದೆ” ಎಂದು ಸ್ಥಳೀಯರು ಹೇಳಿದರು. ಜಿಲ್ಲಾಡಳಿತ ಮತ್ತು […]

Advertisement

Wordpress Social Share Plugin powered by Ultimatelysocial