ರಾಜ್ಯದಲ್ಲಿ ಶತಕ ಬಾರಿಸಿದ ಪೆಟ್ರೋಲ್‌-ಡೀಸೆಲ್‌ ದರ..!?

ಪೆಟ್ರೋಲ್ಬೆನ್ನಲ್ಲೇ ಇದೀಗ ಡೀಸೆಲ್ದರ ಕೂಡ ರಾಜ್ಯದಲ್ಲಿ ಶತಕದ ಬಾರಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ ಮುಂದುವರಿದರೆ ವಾರದೊಳಗೆ ಡೀಸೆಲ್ದರ 100 ಗಡಿ ದಾಟಲಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶುಕ್ರವಾರ ಒಂದು ಲೀಟರ್ಡೀಸೆಲ್ದರ 99.65 ರು. ತಲುಪಿದ್ದು, ಇದೇ ರಾಜ್ಯದ ಅತಿಹೆಚ್ಚಿನ ದರವಾಗಿದೆ.

ಉತ್ತರ ಕನ್ನಡ ಸೇರಿ ರಾಜ್ಯದ 10 ಕಡೆ ಡೀಸೆಲ್ದರ 99 ರೂ. ದಾಟಿದೆ, ಶತಕದತ್ತ ದಾಪುಗಾಲಿಡುತ್ತಿದೆ. ಬಳ್ಳಾರಿ​- 99.33 ರೂ, ವಿಜಯನಗರ 99.06 ರೂ, ದಾವಣಗೆರೆ 99.31 ರೂ, ಶಿವಮೊಗ್ಗ– 99.01 ರೂ, ಚಿಕ್ಕಮಗಳೂರು 99.21 ರೂ. ಹಾಗೂ ಚಿತ್ರದುರ್ಗದಲ್ಲಿ ಒಂದು ಲೀಟರ್ಡೀಸೆಲ್ದರ 99.19 ರೂ.ತಲುಪಿದೆ.

ಇನ್ನು ದಕ್ಷಿಣ ಕನ್ನಡದಲ್ಲಿ 96.96 . ರೂ. ಉಡುಪಿ 97.25 ರೂ., ಕಲಬುರಗಿ 97.54 ರೂ. ರಾಯಚೂರು 97.28 ರೂ. ಚಿಕ್ಕಬಳ್ಳಾಪುರ-97.88, ಹುಬ್ಬಳ್ಳಿ 97.51 ರೂ.ಮೈಸೂರು 97.36 ರೂ.ಹಾಸನ  97.00 ರೂ. ತುಮಕೂರು 97.82 ರೂ.ಇದ್ದರೆ, ಕೊಪ್ಪಳದಲ್ಲಿ 98.76 ರೂ. ಯಾದಗಿರಿ  98.11 ರೂ. ಬಾಗಲಕೋಟೆ 98.30, ಬೀದರ್‌ 98.62 , ರೂ. ಗದಗ 98.28 ಮತ್ತು ಹಾವೇರಿಯಲ್ಲಿ 98.22 ದರ ಇದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲೇ ಪೆಟ್ರೋಲ್ಹಾಗೂ ಡೀಸೆಲ್ದರ ಕಡಿಮೆ ಇದೆ

ರಾಜ್ಯಗಳಲ್ಲಿ ಬೆಲೆ ಏರಿಕೆ

ತೈಲ ಕಂಪನಿಗಳು ಸತತ 2ನೇ ದಿನವಾದ ಶುಕ್ರವಾರ ಕೂಡಾ ಪೆಟ್ರೋಲ್ಮತ್ತು ಡೀಸೆಲ್ಬೆಲೆಯನ್ನು ಲೀ.ಗೆ ಕ್ರಮವಾಗಿ 25 ಮತ್ತು 30 ಪೈಸೆಯಷ್ಟು ಹೆಚ್ಚಳ ಮಾಡಿವೆ. ಇದರೊಂದಿಗೆ ಪೆಟ್ರೋಲ್ದರ ಮತ್ತೊಮ್ಮೆ ದೇಶಾದ್ಯಂತ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದೆ. ಇನ್ನು ಡೀಸೆಲ್ದರ ಹಲವು ರಾಜ್ಯಗಳಲ್ಲಿ 100 ರು. ಗಡಿ ದಾಟಿದೆ.

ಏರಿಕೆ ಬಳಿಕ ಪೆಟ್ರೋಲ್ದರ ಬೆಂಗಳೂರಿನಲ್ಲಿ 105.44 ರೂ.ಮುಂಬೈನಲ್ಲಿ 107.95 ರೂ.ಕೋಲ್ಕತಾದಲ್ಲಿ 102.47 ರೂ.ದೆಹಲಿಯಲ್ಲಿ 101.89 ರೂ.ಮತ್ತು ಚೆನ್ನೈನಲ್ಲಿ 99.58 ರೂ.ಗೆ ತಲುಪಿದೆ.

ಇನ್ನು ಕಳೆದ 8 ದಿನದಲ್ಲಿ 6 ಬಾರಿ ಏರಿಕೆಯಾದ ಪರಿಣಾಮ ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ನಗರಗಳಲ್ಲಿ ಡೀಸೆಲ್ದರ 100 ರೂ.ಗಡಿ ದಾಟಿದೆ. ಶುಕ್ರವಾರದ ಏರಿಕೆ ಬಳಿಕ ಡೀಸೆಲ್ದರ ಬೆಂಗಳೂರಿನಲ್ಲಿ 95.70 ರು., ಮುಂಬೈನಲ್ಲಿ 97.84 ರೂ. ಕೋಲ್ಕತಾದಲ್ಲಿ 93.27 ರೂ. ಚೆನ್ನೈನಲ್ಲಿ 94.74 ರೂ. ಮತ್ತು ದೆಹಲಿಯಲ್ಲಿ 90.17 ರೂ.ಗೆ ತಲುಪಿದೆ.

ಸದ್ಯ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ದರ 113.73 ರೂ.ಮತ್ತು ಡೀಸೆಲ್ದರ 103.09 ರೂ.ನಷ್ಟಿದೆ. ಇಲ್ಲಿ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಮತ್ತು ಪ್ರದೇಶವು ದೇಶದ ಗಡಿ ಭಾಗದಲ್ಲಿರುವ ಕಾರಣ ಸಾಗಣೆ ವೆಚ್ಚವೂ ಹೆಚ್ಚಾಗಿ ತೈಲ ಬೆಲೆ ಗಗನಕ್ಕೇರಿದೆಕಳೆದ 3 ದಿನ ಏರಿಕೆ ಬಳಿಕ ಪೆಟ್ರೋಲ್ದರದಲ್ಲಿ ಒಟ್ಟು 75 ಪೈಸೆ ಮತ್ತು 6 ಏರಿಕೆ ಮೂಲಕ ಡೀಸೆಲ್ದರ 1.55 ರು.ನಷ್ಟುಹೆಚ್ಚಾಗಿದೆ

Please follow and like us:

Leave a Reply

Your email address will not be published. Required fields are marked *

Next Post

Rules For First of all Phone Call in Internet Dating

Mon Oct 11 , 2021
The 1st phone call in internet dating is a very important part of a relationship. If you’re within a long-term relationship with someone you met online, you should not continue on the initially mobile phone call seriously, but rather casually. During the original meeting, you need to maintain a friendly […]

Advertisement

Wordpress Social Share Plugin powered by Ultimatelysocial