ನಾಲ್ಕನೇ ದಿನವೂ ಏರಿದ ಡೀಸಲ್ ಬೆಲೆ : 3 ನಗರಗಳಲ್ಲಿ 100 ರೂಪಾಯಿ ದಾಟಿದ……!!!!​

ನವದೆಹಲಿ: ಶನಿವಾರದಂದು ಸತತ ನಾಲ್ಕನೇ ದಿನ ಭಾರತದಲ್ಲಿ ಇಂಧನ ಬೆಲೆಗಳು ಏರಿಕೆಯಾಗಿವೆ. ದೇಶಾದ್ಯಂತ ಆಯಾ ರಾಜ್ಯಗಳ ತೆರಿಗೆಗಳಿಗೆ ತಕ್ಕಂತೆ ಪೆಟ್ರೋಲ್ ಮತ್ತು ಡೀಸಲ್​ ಮತ್ತಷ್ಟು ದುಬಾರಿಯಾಗಿವೆ.

ನಿನ್ನೆಯ ಏರಿಕೆಯ ನಂತರ ತಮಿಳುನಾಡಿನ ರಾಜಧಾನಿ ಚೆನ್ನೈ, ಡೀಸಲ್​ ಬೆಲೆ ಪ್ರತಿ ಲೀಟರ್​ಗೆ 100 ರೂಪಾಯಿಯ ಮಟ್ಟ ದಾಟಿದ ದೇಶದ ಎರಡನೇ ಮೆಟ್ರೋ ನಗರವಾಗಿದೆ. ಇಂದು ಚೆನ್ನೈನಲ್ಲಿ ಡೀಸಲ್​ ಬೆಲೆ ಲೀಟರ್​ಗೆ 100.24 ರೂ.ಗಳಾಗಿದ್ದರೆ, ಪೆಟ್ರೋಲ್ ಬೆಲೆ 104.22 ರೂಪಾಯಿಯಾಗಿದೆ.ಇಂದು ದೆಹಲಿಯ ಪೆಟ್ರೋಲ್​ ಬೆಲೆ 107.24 ರೂಪಾಯಿ ಮತ್ತು ಡೀಸಲ್ ಬೆಲೆ 95.97 ರೂಪಾಯಿಯಷ್ಟಿದೆ. ಕೋಲ್ಕತಾದಲ್ಲಿ ಪೆಟ್ರೋಲ್​ 107.78 ರೂ., ಡೀಸಲ್​ 99.08 ರೂ. ದರ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ 113.12 ಆಗಿದ್ದು, ಡೀಸಲ್ ಲೀಟರ್​ಗೆ 104 ರೂಪಾಯಿಗಳಷ್ಟಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆ ನಿನ್ನೆಯ ದಿನ ಲೀಟರ್​ಗೆ 110.61 ಇದ್ದದ್ದು, 37 ಪೈಸೆ ಏರಿಕೆಯೊಂದಿಗೆ ಇಂದು 110.98 ರೂಪಾಯಿ ಆಗಿದೆ. ಡೀಸಲ್​ ದರ 100 ರೂಪಾಯಿ ಮಟ್ಟ ದಾಟಿದ ಕೆಲವೇ ಮಹಾನಗರಗಳಲ್ಲಿ ಬೆಂಗಳೂರು ಕೂಡ ಒಂದು. ನಗರದ ಇಂದಿನ ಡೀಸಲ್ ಬೆಲೆ ಲೀಟರ್​ಗೆ 101.86 ರೂ. ಆಗಿದೆ. (ಏಜೆನ್ಸೀಸ್)

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀನಿವಾಸ್​ ಮಾನೆ ಆಧುನಿಕ ಶಕುನಿ ತರ ಇದ್ದಾನೆ :ಸಚಿವ ಬಿ.ಸಿ. ಪಾಟೀಲ್​​​

Sat Oct 23 , 2021
ಹಾನಗಲ್​ ಉಪಚುನಾವಣಾ ಕಣ ರಂಗೇರಿದೆ. ಹಾನಗಲ್​ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸಿಎಂ ಬೊಮ್ಮಾಯಿ ಪ್ರಚಾರ ಕಾರ್ಯಕ್ಕೆ ಸಾಥ್​ ನೀಡಿದ ಸಚಿವ ಬಿ.ಸಿ. ಪಾಟೀಲ್​​​ ಕಾಂಗ್ರೆಸ್​ ಅಭ್ಯರ್ಥಿ ಶ್ರೀನಿವಾಸ್​ ಮಾನೆ ವಿರುದ್ಧ ಆರೋಪಗಳ ಸುರಿಮಳೆಯನ್ನೇ  ಸುರಿಸಿದ್ದಾರೆ. ಈ ಶ್ರೀನಿವಾಸ್​ ಮಾನೆ ಆಧುನಿಕ ಶಕುನಿ ತರ ಇದ್ದಾನೆ. ನಾನು ಕಾಂಗ್ರೆಸ್​ ನಲ್ಲಿದ್ದ ವೇಳೆ ಈ ಅವತಾರವನ್ನು ನೋಡಿದ್ದೇನೆ. ಮೊದಲೇ ಹಾವೇರಿಯ ಹಲವು ಕ್ಷೇತ್ರಗಳ ಮೇಲೆ ಆತ ಕಣ್ಣು […]

Advertisement

Wordpress Social Share Plugin powered by Ultimatelysocial