ಕಾರವಾರ : ರಾಜ್ಯ ಸರ್ಕಾರವು ಪಿಂಚಣಿದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು,

 

ಕಾರವಾರ : ರಾಜ್ಯ ಸರ್ಕಾರವು ಪಿಂಚಣಿದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಸರ್ಕಾರದ ಪಿಂಚಣಿ ಪ್ರಯೋಜನ ಪಡೆಯಲು ಇನ್ಮುಂದೆ 72 ಗಂಟೆಗಳಲ್ಲಿ ಪಿಂಚಣಿ ಪ್ರಮಾಣ ಪತ್ರ ಮನೆ ಬಾಗಿಲಿಗೆ ಬರಲಿದೆ.

ಈ ಕುರಿತು ಮಾಹಿತಿ ನೀಡಿರುವ ಕಂದಾಯ ಸಚಿವ ಆರ್.

ಅಶೋಕ್, ಸರ್ಕಾರದ ಪಿಂಚಣಿ ಯೋಜನೆಯ ಪ್ರಯೋಜನ ಪಡೆಯಲು ಇನ್ಮುಂದೆ ಕಚೇರಿಗಳಿಗೆ ಅಲೆದಾಡಬೇಕಿಲ್ಲ. ದೂರವಾಣಿ ಕರೆ ಮಾಡಿ ಹಲೋ ಎಂದು ಎರಡು ದಾಖಲೆಗಳ ನಂಬರ್ ಗಳನ್ನು ಕೊಟ್ಟರೆ ಸಾಕು, 72 ಗಂಟೆಯಲ್ಲಿ ಪಿಂಚಣಿ ಪ್ರಮಾಣ ಮನೆ ಬಾಗಿಲಿಗೆ ಬರಲಿದೆ. ಇಂಥ ಯೋಜನೆ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಯೋಜನೆಗೆ ಸಂಬಂಧಿಸಿದಂತೆ ನಾಳ್ಕು ಡಿಜಿಟಲ್ ಗಳ ಟೋಲ್ ಫ್ರೀ ನಂಬರ್ ನೀಡಲಾಗುತ್ತದೆ. ಆ ನಂಬರ್ ಗೆ ಕರೆ ಮಾಡಿ ಪಿಂಚಣಿ ಫಲಾನುಭವಿಗಳಾಗುವವರ ಆಧಾರ್ ಸಂಖ್ಯೆ, ಬ್ಯಾಂಕ್ ಅಕೌಂಟ್ ಸಂಖ್ಯೆ ನೀಡಬೇಕು. 15 ನಿಮಿಷಗಳಲ್ಲಿ ಆ ಮಾಹಿತಿ ಸಂಬಂಧಪಟ್ಟ ಜಿಲ್ಲಾಧಿಕಾರಿ, ತಹಸೀಲ್ದಾರ್ ಮತ್ತಿತರ ಅಧಿಕಾರಿಗೆ ಹೋಗುತ್ತದೆ. ಗ್ರಾಮ ಸಹಾಯಕರು ಅವರ ಮನೆಗೆ ತೆರಳಿ ಫಲಾನುಭವಿಯ ಫೋಟೋ, ಇತರೆ ದಾಖಲೆ ಪಡೆದು ಅಪ್ ಲೋಡ್ ಮಾಡುತ್ತಾರೆ.ಅದಾದ 72 ಗಂಟೆಗಳಲ್ಲಿ ಪಿಂಚಣಿ ಪ್ರಮಾಣ ಪತ್ರ ಫಲಾನುಭವಿಯ ಕೈಸೇರಲಿದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL 2022- LSG Vs Mumbai Indians – 11ರ ಬಳಗದಲ್ಲಿ ಕಾಣಿಸಿಕೊಳ್ತಾರಾ ಅರ್ಜುನ್ ತೆಂಡುಲ್ಕರ್!

Sat Apr 16 , 2022
  ಸಾಲು ಸಾಲು ಐದು ಪಂದ್ಯಗಳನ್ನು ಸೋತಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಈಗ ಮರ್ಯಾದೆ ಉಳಿಸಿಕೊಳ್ಳಬೇಕಿದೆ. ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡ ಸೋಲಿನ ಸರಪಳಿಯಿಂದ ಹೊರಬಲು ಹರಸಾಹಸಪಡುತ್ತಿದೆ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 26ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿ ನಡೆಸಲಿವೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕೆಲವೊಂದು ಬದಲಾವಣೆ ಮಾಡುವ ಸಾದ್ಯತೆಗಳಿವೆ. ಮುಖ್ಯವಾಗಿ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು […]

Advertisement

Wordpress Social Share Plugin powered by Ultimatelysocial