ಈ ಬಾರಿಯೂ ನ್ಯೂ ಇಯರ್‌ ಗೆ ಬ್ರೇಕ್.? ಪೊಲೀಸ್ ಆಯುಕ್ತ ಕಮಲ್‌ ಪಂಥ್‌ ಹೇಳಿದ್ದೇನು.?

ಬೆಂಗಳೂರು ವಿಶ್ವ ಮಟ್ಟದಲ್ಲಿ ಅಭಿವೃದ್ಧಿಗೊಂಡಿದೆ. ಸಾರ್ವಜನಿಕರಿಗೆ ಭದ್ರತೆ ಕಲ್ಪಿಸುವುದು ಪ್ರಮುಖವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.ವೈಟ್‍ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಜನಸಂಪರ್ಕ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ವೈಟ್‍ಫೀಲ್ಡ್ ಭಾಗ ಪ್ರಬುದ್ದ ಕ್ಷೇತ್ರವಾಗಿದೆ. ಅಲ್ಲದೆ ಅನೇಕ ಕಂಪನಿಗಳ ಇಲ್ಲಿದ್ದು ಅನೇಕ ಸಮಸ್ಯೆಗಳು ಎದುರಾಗುವುದು ಸಹಜ. ಈ ಹಿನ್ನೆಲೆಯಲ್ಲಿ ನಮ್ಮ ಇಲಾಖೆ ಸಾರ್ವಜನಿಕರಿಗೆ ಸೂಕ್ತ ಭದ್ರತೆ ಕಲ್ಪಿಸಲು ಬದ್ದವಾಗಿದೆ ಎಂದರು.ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ಅವಕಾಶವಿಲ್ಲ. ಸರ್ಕಾರಿ ಆದೇಶಗಳನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಲಾಗುತ್ತಿದೆ. ಪಬ್ಬು, ಬಾರ್‍ಗಳಲ್ಲಿ ಅವಕಾಶವಿಲ್ಲ. ಎಂ.ಜಿ.ರೋಡ್, ಬಿಗ್ರೇಡ್ ರೋಡ್‍ನಲ್ಲಿ ಸಂಭ್ರಮಾಚರಣೆ ಇಲ್ಲ ಎಂದು ಹೇಳಿದರು.ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆ ಮಾಡಲಾಗುತ್ತದೆ.

ಒತ್ತಾಯ ಪೂರ್ವಕವಾಗಿ ಯಾರೂ ಕೂಡ ಅಡ್ಡಿಪಡಿಸುವಂತಿಲ್ಲ. 30ರಿಂದಲೇ ನೈಟ್ ಕಫ್ರ್ಯೂ ಜಾರಿಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಿದರು. ಪೊಲೀಸ್ ಇಲಾಖೆ ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮಾಸಿಕ ಸಭೆಯನ್ನು ಪ್ರಾರಂಭಿಸಲಾಗಿದೆ.ನಗರದ ವಿವಿಧ ಕಡ ವಿಲ್ಹೀಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿರುವುದು ಗಮನಕ್ಕೆ ಬಂದಿದ್ದು, ವೀಲ್ಹೀಂಗ್ ಮಾಡುವವರ ವಿರುದ್ಧ ಕೇಸ್ ದಾಖಲಿಸಲು ನಿರ್ಧರಿಸಲಾಗಿದೆ. ವೀಲ್ಹೀಂಗ್ ವೇಳೆ ಅಪಘಾತ ಸಂಭವಿಸಿದರೆ ಮಾಲೀಕರೆ ಹೊಣೆಗಾರರಾಗುತ್ತಾರೆ ಎಂದರು.ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕರ ಸಮಸ್ಯೆ, ಅಹವಾಲುಗಳನ್ನು ಸ್ವೀಕರಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RBI ನ ಹೊಸ ಯೊಜನೆ; ಟೋಕನೈಸೇಶನ್‌ ಗಡುವು ವಿಸ್ತರಣೆ

Sat Dec 25 , 2021
RBI ಕಾರ್ಡ್ ಟೋಕನೈಸೇಶನ್ ಗಡುವನ್ನು 6 ತಿಂಗಳವರೆಗೆ ವಿಸ್ತರಿಸಿದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾರ್ಡ್ ಟೋಕನೈಸೇಶನ್ ಗಡುವನ್ನು ಆರು ತಿಂಗಳವರೆಗೆ ಜೂನ್ 30, 2022 ರವರೆಗೆ ವಿಸ್ತರಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ 30, 2022 ರವರೆಗೆ ಕಾರ್ಡ್ ಟೋಕನೈಸೇಶನ್ ಗಡುವನ್ನು ಆರು ತಿಂಗಳವರೆಗೆ ವಿಸ್ತರಿಸಿದೆ. RBI ಯ ಹೊಸ ನಿಯಮದ ಪ್ರಕಾರ ಎಲ್ಲಾ ವ್ಯಾಪಾರಿಗಳು ಮತ್ತು ಪಾವತಿ ಗೇಟ್‌ ವೇಗಳು ಸೂಕ್ಷ್ಮ ಗ್ರಾಹಕರ ಡೇಟಾವನ್ನು ಅಳಿಸಬೇಕು ಮತ್ತು […]

Advertisement

Wordpress Social Share Plugin powered by Ultimatelysocial