ಅಣ್ಣಾಮಲೈ ಪಾದಯಾತ್ರೆ ರಾಹುಲ್ ಗಾಂಧಿಯವರ ಪಾದಯಾತ್ರೆಯ ಪ್ರಭಾವ.

ಚೆನ್ನೈ, ಜನವರಿ, 22: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ರಾಜ್ಯಾದ್ಯಂತ ಪಾದಯಾತ್ರೆ ಮಾಡಲು ಯೋಜನೆ ರೂಪಿಸಿದ್ದು, ಇದಕ್ಕೆ ಆಡಳಿತರೂಢ ಡಿಎಂಕೆ ಭಾರತ್ ಜೋಡೋ ಯಾತ್ರೆಯ ನಕಲು ಎಂದು ವ್ಯಂಗ್ಯವಾಡಿದೆ.

ಅಣ್ಣಾಮಲೈ ರಾಜ್ಯಾದ್ಯಂತ ನಡೆಸಲಿರುವ ಪಾದಯಾತ್ರೆಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನಡೆಸುತ್ತಿರುವ ಪಾದಯಾತ್ರೆಯ ಪರಿಣಾಮವಾಗಿದೆ ಎಂದು ಆಡಳಿತಾರೂಢ ಡಿಎಂಕೆ ಭಾನುವಾರ ಅಪಹಾಸ್ಯ ಮಾಡಿದೆ.

ಅಣ್ಣಾಮಲೈ ಅವರ ಪಾದಯಾತ್ರೆಯು ದಕ್ಷಿಣ ತಮಿಳುನಾಡಿನ ಕಡಲತೀರದಲ್ಲಿರುವ ದೇವಾಲಯದ ಪಟ್ಟಣವಾದ ತಿರುಚೆಂದೂರ್‌ನಿಂದ ಏಪ್ರಿಲ್ 14 ರಿಂದ ಪ್ರಾರಂಭವಾಗಲಿದೆ ಎಂದು ಆಡಳಿತ ಪಕ್ಷದ ಮುಖವಾಣಿ ‘ಮುರಸೋಲಿ’ಯಲ್ಲಿ ಉಲ್ಲೇಖಿಸಲಾಗಿದೆ. ಈ ಪಾದಯಾತ್ರೆಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಪರಿಣಾಮ ಎಂದೆನಿಸುತ್ತಿದೆ ಎಂದು ವ್ಯಂಗ್ಯವಾಡಿದೆ.

ಅಣ್ಣಾಮಲೈ ಅವರ ಪಾದಯಾತ್ರೆ ಕೇವಲ ‘ಕಣ ಮಾಯಿಲಾದ’ ಪದ್ಯವನ್ನು ನೆನಪಿಸುತ್ತದೆ ಎಂದು ದಿನಪತ್ರಿಕೆ ಹೇಳಿದೆ. ಇದು ನೀತಿಬೋಧಕವಾಗಿದ್ದು, ಹಳೆಯ ತಮಿಳು ಪದ್ಯವಾಗಿದೆ. ಇದರಲ್ಲಿ ಯಾರೊಬ್ಬರಿಂದ ಏನಾದರೂ ನಕಲು ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಲಾಗಿದೆ.

ಆಡಳಿತ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ದಿನಪತ್ರಿಕೆಯು ಅಣ್ಣಾಮಲೈ ಅವರನ್ನು ಇಬ್ಬರು ಮಹಿಳೆಯರ ಸಂಭಾಷಣೆಯ ರೂಪದಲ್ಲಿ ಗೇಲಿ ಮಾಡಿದೆ.

2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಚುನಾವಣಾ ಪ್ರಚಾರವನ್ನು ಪ್ರಾರಂಭಿಸುವ ಮೊದಲು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪಾದಯಾತ್ರೆ ಮಾಡಲು ನಿರ್ಧರಿಸಿದ್ದಾರೆ.

ಏಪ್ರಿಲ್ 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಮತ್ತು ತಮಿಳು ಹೊಸ ವರ್ಷದ ದಿನವು ಬರರುವುದರಿಂದ ಈ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Qué buscar en los sitios de cámaras populares

Mon Jan 23 , 2023
Los sitios de cámaras más populares llevan algunas cosas en colectivo, incluido el hecho de que te permiten ver a artistas atractivos transmitir sobre vivo sus cuerpos desnudos y ofrecen servicios pagos como reveals privados. Agregado tienden a trabajar en un matriz freemium en el que debes chatear gratis, pero […]

Advertisement

Wordpress Social Share Plugin powered by Ultimatelysocial