ಸಂಭಾವನೆ 3 ಕೋಟಿ ಕೇಳಿ, ನಿರ್ಮಾಪಕರಿಗೆ ತಲೆನೋವಾದ ಪೂಜಾ ಹೆಗ್ಡೆ;

ಸದ್ಯ ಸೌತ್ ಸಿನಿಮಾರಂಗದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ನಟಿಯರು ಎಂದರೆ, ಆ ಸಾಲಿನಲ್ಲಿ ಮೊದಲು ಬರುವುದು ನಟಿ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ಸಾಯಿ ಪಲ್ಲವಿ, ಕೀರ್ತಿ ‌ಶೆಟ್ಟಿ. ಈ ನಟಿಯರ ಪೈಕಿ ಹೆಚ್ಚಿನ ಬೇಡಿಕೆ ಮತ್ತು ಪೈಟೋಟಿ ಇರುವುದು ರಶ್ಮಿಕಾ ಮತ್ತು ಪೂಜಾ ಹೆಗ್ಡೆ ನಡುವೆ.

ಇವರ ಪೈಕಿ ಪೂಜಾ ಹೆಗ್ಡೆ ನಂಬರ್ 1 ಸ್ಥಾನದಲ್ಲಿ ಇದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ಪೂಜಾ ಹೆಗ್ಡೆ. ಆದರೆ ‌ಈಗ ಪೂಜಾ ಹೆಗ್ಡೆಗೆ ಇರುವ ಬೇಡಿಕೆ ಕಡಿಮೆ ಆಗುತ್ತಿದೆಯಂತೆ. ಪೂಜಾ ಹೆಗ್ಡೆಗೆ ಮೊದಲಿದ್ದಷ್ಟು ಬೇಡಿಕೆ ಈಗ ಇಲ್ಲವಂತೆ.

ಸದ್ಯ ಪ್ರಕಟ ಆಗಿರುವ ಸಿನಿಮಾಗಳನ್ನು ಹೊರತು ಪಡಿಸಿದರೆ, ಪೂಜಾ ಹೆಗ್ಡೆ ಕೈಯಲ್ಲಿ ಸಿನಿಮಾಗಳೇ ಇಲ್ಲ. ಹಾಗಾಗಿ ನಂಬರ್ 1 ಸ್ಥಾನದಲ್ಲಿ ಇರುವ ಈ ನಟಿಗೆ ಬೇಡಿಕೆ ಕಡಿಮೆ ಆಗಿದೆ ಎನ್ನಲಾಗುತ್ತಿದೆ. ಪೂಜಾಳನ್ನು ಕಂಡರೆ ನಿರ್ಮಾಪಕರು ಮೂಗು ಮುರಿಯುತ್ತಿದ್ದಾರಂತೆ.

ಒಂದು ಚಿತ್ರಕ್ಕೆ ಪೂಜಾ ಹೆಗ್ಡೆ ಸಂಭಾವನೆ 3 ಕೋಟಿ!
ನಟಿ ಪೂಜಾ ಹೆಗ್ಡೆ ಹೆಚ್ಚಿನ ಸಂಭಾವನೆ ಪಡೆಯುವ ಮೂಲಕ ಸೌತ್ ನಟಿಯರ ಪೈಕಿ ಮೊದಲ ಸ್ಥಾನದಲ್ಲಿ ಇದ್ದಾರೆ‌. ಪೂಜಾ ಒಂದು‌ ಚಿತ್ರಕ್ಕೆ ಮೂರು ಕೋಟಿ ರೂ. ಸಂಭಾವನೆ ಪಡೆಯುತ್ತಾರಂತೆ. ‘ಅಲಾ ವೈಕುಂಠ ಪುರಮುಲೊ’ ಚಿತ್ರದಿಂದ ಪೂಜಾ ಹೆಗ್ಡೆ ಸಂಭಾವನೆ ಹೆಚ್ಚಾಗಿದೆ. ಪ್ರಸ್ತುತ 3 ಕೋಟಿ ಇಲ್ಲದೇ ಸಿನಿಮಾ ಒಪ್ಪುವುದಿಲ್ಲವಂತೆ. ಇದೇ ಕಾರಣಕ್ಕೆ ಈಗ ಪೂಜಾಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿವೆ ಎನ್ನಲಾಗುತ್ತಿದೆ.

ನಿರ್ಮಾಪಕರಿಗೆ ತಲೆನೋವಾದ ಪೂಜಾ ಸಂಭಾವನೆ!

ಪೂಜಾ ಹೆಗ್ಡೆ ಸಂಭಾವನೆ ವಿಚಾರದಲ್ಲಿ ತುಂಬಾನೆ ಕಟ್ಟು ನಿಟ್ಟು. ಹಾಗಾಗಿ ಇದು ಹಲವು ಸಿನಿಮಾ ನಿರ್ಮಾಪಕರಿಗೆ ತಲೆನೋವು ತಂದಿದೆಯಂತೆ. ಪೂಜಾ ಹೆಗ್ಡೆಗೆ ಇಷ್ಟೊಂದು ದುಡ್ಡು ಕೊಡುವ ಬದಲಿಗೆ, ಹೊಸ ನಾಯಕಿಯರಿಗೆ ಅವಕಾಶ ಕೊಡುವುದೇ ಲೇಸು ಎಂದು, ಹಲವು ನಿರ್ಮಾಪಕರು ಪೂಜಾ ಹೆಗ್ಡೆ ಹೆಸರನ್ನು ಕೈ ಬಿಟ್ಟಿದ್ದಾರಂತೆ. ಸ್ಟಾರ್ ನಟರ ಸಿನಿಮಾಗಳಿಗೂ ಪೂಜಾಳ ಕಾಲ್ ಶೀಟ್ ಕೇಳುವ ಗೋಜಿಗೆ ಹೊಗುತ್ತಿಲ್ಲವಂತೆ ನಿರ್ಮಾಪಕರು.

2012 ರಿಂದ ಚಿತ್ರರಂಗದಲ್ಲಿ ಪೂಜಾ ಸಕ್ರಿಯ!

2012ರಿಂದ ನಟಿ ಪೂಜಾ ಹೆಗ್ಡೆ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ. ತಮಿಳಿನ ‘ಮುಗಮುಡಿ’ ಚಿತ್ರದಿಂದ ಬಣ್ಣದ ಲೋಕಕ್ಕೆ ಪೂಜಾ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್’ ಮತ್ತು ‘ಆಚಾರ್ಯ’ ಸಿನಿಮಾಗಳು ರಿಲೀಸ್‌ಗೆ ರೆಡಿ ಇವೆ. ಈ ಚಿತ್ರಗಳನ್ನು ಬಿಟ್ಟರೆ, ತಮಿಳಿನ ‘ಬೀಸ್ಟ್’ ಮತ್ತು ‘ಸರ್ಕಸ್’ ಸಿನಿಮಾಗಳು ಪೂಜಾ ಹೆಗ್ಡೆ ಕೈಯಲ್ಲಿ ಇವೆ. ಈ ಚಿತ್ರಗಳನ್ನು ಬಿಟ್ಟು ಮತ್ಯಾವ ಹೊಸ ಅವಕಾಶಗಳು ಕೂಡ ಪೂಜಾಳನ್ನು ಹುಡುಕಿಕೊಂಡು ಬಂದಿಲ್ಲ ಅಂತೆ. ಬಾಲಿವುಡ್‌ನಲ್ಲೂ ಪೂಜಾಗೆ ಅಷ್ಟಾಗಿ ಬೇಡಿಕೆ ಇಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅಸ್ಸಾಂನ ಕೆಸರಿನ ಕೊಳದಲ್ಲಿ ಸಿಲುಕಿದ್ದ ಮೇಘಾಲಯದ ಆನೆಗಳನ್ನು ರಕ್ಷಿಸಲಾಗಿದೆ

Sat Jan 29 , 2022
ಮೇಘಾಲಯ-ಅಸ್ಸಾಂ ಬೆಲ್ಟ್‌ನಲ್ಲಿ ಮೇಯುತ್ತಿದ್ದ ಆನೆಗಳು ಜನವರಿ 28 ರಂದು ಕೆಸರಿನ ಕೊಳದಲ್ಲಿ ಸಿಕ್ಕಿಬಿದ್ದಿವೆ. ಒಂದು ಚಿಕ್ಕ ಕರು ಸೇರಿದಂತೆ ಆರು ಕಾಡು ಆನೆಗಳು ಕೆಳ ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಕೆಸರಿನ ಕೊಳದಲ್ಲಿ ಸಿಕ್ಕಿಬಿದ್ದಿವೆ. ಕಾಡು ಆನೆಗಳ ಹಿಂಡು ಮೇಘಾಲಯದ ಬೆಟ್ಟಗಳಿಂದ ಆಹಾರ ಮತ್ತು ನೀರನ್ನು ಹುಡುಕುತ್ತಾ ಗೋಲ್ಪಾರಾದ ಲಖಿಪುರ ಪ್ರದೇಶದಲ್ಲಿ ಬಂದಿವೆ. ಮೀಸಲು ಅರಣ್ಯದ ಸಮೀಪವೇ ಕೊಳವಿದ್ದು, ನೀರು ಕುಡಿಯಲು ಮುಂದಾದಾಗ ಆನೆಗಳು ಕೆಳಗೆ ಬಿದ್ದಿವೆ. ಕೆಲವು ಆನೆಗಳು ಹೊರಬರುವಲ್ಲಿ […]

Advertisement

Wordpress Social Share Plugin powered by Ultimatelysocial