ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದೇ ಪರಿಗಣಿಸಲಾಗುತ್ತದೆ.

ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದೇ ಪರಿಗಣಿಸಲಾಗುತ್ತದೆ. ಆದರೆ ಆಲೂಗಡ್ಡೆಯನ್ನು ಅತಿಯಾಗಿ ಸೇವಿಸಿದ್ರೆ ಅಪಾಯ ಗ್ಯಾರಂಟಿ. ಆಲೂಗಡ್ಡೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ಬೊಜ್ಜಿನ ಸಮಸ್ಯೆ ಬರಬಹುದು, ಮಧುಮೇಹಕ್ಕೂ ಇದು ಕಾರಣವಾಗಬಹುದು.

ಆಲೂಗಡ್ಡೆಯನ್ನು ಅತಿಯಾಗಿ ತಿಂದರೆ ಅಲರ್ಜಿ ಉಂಟಾಗುವ ಸಾಧ್ಯತೆಯೂ ಇರುತ್ತದೆ.

ಆಲೂಗಡ್ಡೆಯಲ್ಲಿರುವ ಕಾರ್ಬೋಹೈಡ್ರೇಟ್ ಸಂಧಿವಾತದ ನೋವನ್ನು ಸಹ ಹೆಚ್ಚಿಸುತ್ತದೆ. ಹಾಗಾಗಿ ಸಂಧಿವಾತದ ಸಮಸ್ಯೆ ಇರುವ ರೋಗಿಗಳು ಹೆಚ್ಚು ಆಲೂಗಡ್ಡೆ ಸೇವಿಸಬಾರದು.

ಆಲೂಗಡ್ಡೆಯ ಅತಿಯಾದ ಸೇವನೆಯು ಮಧುಮೇಹಿಗಳ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಆಲೂಗಡ್ಡೆಯಿಂದ ದೂರವಿದ್ದರೆ ಒಳ್ಳೆಯದು. ಆಲೂಗಡ್ಡೆಯ ಅತಿಯಾದ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ.

ಹಾಗಾಗಿ ಅತಿಯಾದ ಆಲೂಗಡ್ಡೆ ತಿನ್ನುವುದು ಬಿಪಿ ರೋಗಿಗಳಿಗೂ ಸೂಕ್ತವಲ್ಲ. ಆಲೂಗಡ್ಡೆಗಳಲ್ಲಿ ಕಾರ್ಬೋಹೈಡ್ರೇಟ್‌ ಅಧಿಕವಾಗಿರುತ್ತದೆ. ಇದನ್ನು ಹೆಚ್ಹೆಚ್ಚು ತಿಂದರೆ ಕ್ಯಾಲೋರಿ ಕೂಡ ಹೆಚ್ಚಾಗುತ್ತದೆ. ಪರಿಣಾಮ ತೂಕ ಹೆಚ್ಚಾಗುವ ಅಪಾಯವೂ ಇರುತ್ತದೆ. ಹಾಗಾಗಿ ಆಲೂಗಡ್ಡೆಯನ್ನು ಹಿತಮಿತವಾಗಿ ಸೇವಿಸಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

`ಅಪ್ಪು ಅಮರ' ಪುಸ್ತಕ ಬಿಡುಗಡೆ!

Thu May 5 , 2022
ಬೆಂಗಳೂರು: ಡಾ.ಪುನೀತ್ ರಾಜ್ ಕುಮಾರ್ ಕುರಿತಾಗಿ ಲೇಖಕ, ಪ್ರಕಾಶಕ ಭದ್ರಾವತಿ ರಾಮಾಚಾರಿಯವರು `ಅಪ್ಪು ಅಮರ’ ಎಂಬ ಪುಸ್ತಕವನ್ನು ಸಂಪಾದಿಸಿದ್ದಾರೆ. ಸುಮಾರು ಮೂನ್ನೂರೈವತ್ತು ಪುಟಗಳುಳ್ಳ ಈ ಪುಸ್ತಕ ಬಹುವರ್ಣದಲ್ಲಿ ಮುದ್ರಿತವಾಗಿದ್ದು ಮೇ ೭ರ ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಹಿರಿಯ ನಟ ರಾಮಕೃಷ್ಣರವರು ಬಿಡುಗಡೆ ಮಾಡಲಿದ್ದಾರೆ. ಖ್ಯಾತ ಚಿತ್ರ ನಿರ್ದೇಶಕ ಓಂ ಸಾಯಿ ಪ್ರಕಾಶ್, ನಿರ್ಮಾಪಕ ಎಸ್.ಎ.ಗೋವಿಂದ ರಾಜ್, ಸಂಗೀತ ನಿರ್ದೇಶಕರಾದ ಗುರುಕಿರಣ್, ವಿ.ಮನೋಹರ್, ಕರ್ನಾಟಕ ಚಲನಚಿತ್ರ […]

Related posts

Advertisement

Wordpress Social Share Plugin powered by Ultimatelysocial