ಪವರ್ ಆಫ್ ‘ಪಠಾಣ್’: ಮುಚ್ಚಿದ್ದ ಚಿತ್ರಮಂದಿರಗಳು ಮತ್ತೆ ಪ್ರಾರಂಭ!

ಒಂದು ಸೂಪರ್ ಹಿಟ್ ಸಿನಿಮಾ ಇಡೀ ಚಿತ್ರರಂಗಕ್ಕೆ ನವ ಚೈತನ್ಯ ತುಂಬಿಬಿಡುತ್ತದೆ. ಇದೀಗ ಬಡವಾಗಿರುವ ಬಾಲಿವುಡ್‌ಗೆ ಅಂಥಹುದೇ ಚೈತನ್ಯವನ್ನು ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ನೀಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಕೋವಿಡ್‌ ಹೊಡೆತ ಆ ನಂತರ ಕಂಟೆಂಟ್ ಕೊರತೆಯಿಂದ ಬಾಲಿವುಡ್ ನಿರ್ಮಿಸಿದ ಕಳಪೆ ಸಿನಿಮಾಗಳು, ಫ್ಲಾಪ್ ಸಿನಿಮಾಗಳಿಂದ ಬೇಸತ್ತು ಉತ್ತರ ಭಾರತದ ಕೆಲವು ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು.

ಆದರೀಗ ಅವರು ಮತ್ತೆ ತೆರೆಯುತ್ತಿವೆ!

ಹೌದು, ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಶಾರುಖ್ ಖಾನ್ ಸಿನಿಮಾವನ್ನು ಸ್ವಾಗತಿಸಲೆಂದೇ ಮುಚ್ಚಿದ್ದ ಕೆಲವು ಚಿತ್ರಮಂದಿರಗಳು ಪುನಃ ತೆರೆಯುತ್ತಿವೆ. ಶಾರುಖ್ ಖಾನ್‌ರ ‘ಪಠಾಣ್’ ಸಿನಿಮಾ ಬಡವಾಗಿದ್ದ ಚಿತ್ರಮಂದಿರಗಳಿಗೆ ಮರುಜೀವ ತುಂಬುವ ವಿಶ್ವಾಸದಿಂದಲೇ ಈ ಬೆಳವಣಿಗೆ ಉಂಟಾಗಿದೆ.

ಸಿನಿಮಾ ವಾಣಿಜ್ಯ ವಿಶ್ಲೇಷಕ ತರಣ್ ಆದರ್ಶ್ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದು, ಮುಚ್ಚಿಹೋಗಿದ್ದ ಸುಮಾರು 25 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ‘ಪಠಾಣ್’ ಸಿನಿಮಾ ಪ್ರದರ್ಶನಕ್ಕಾಗಿ ಮತ್ತೆ ಆರಂಭವಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಒಳ್ಳೆಯ ಹಿಟ್ ಸಿನಿಮಾಗಳಿಲ್ಲದೆ ಬಸವಳಿದಿದ್ದ ಉತ್ತರ ಭಾರತದ ಹಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ‘ಪಠಾಣ್’ ಕಮಾಲ್ ಮಾಡುವ ನಿರೀಕ್ಷೆಯಲ್ಲಿವೆ. ಈಗಾಗಲೇ ಅದ್ಭುತವಾದ ಅಡ್ವಾನ್ಸ್ ಬುಕಿಂಗ್ ನಡೆಯುತ್ತಿದ್ದು, ಸಿನಿಮಾ ಸಹ ಸೂಪರ್ ಹಿಟ್ ಆಗುವ ನಿರೀಕ್ಷೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

2015 ರಿಂದಲೂ ಶಾರುಖ್ ಖಾನ್‌ಗೆ ದೊಡ್ಡ ಗೆಲುವು ಸಿಕ್ಕಿಲ್ಲ. 2018 ರ ಬಳಿಕವಂತೂ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ ಯಾವ ಸಿನಿಮಾ ಬಿಡುಗಡೆ ಸಹ ಆಗಿಲ್ಲ. ಐದು ವರ್ಷಗಳ ಬಳಿಕ ಶಾರುಖ್ ಖಾನ್ ಸಿನಿಮಾ ಬಿಡುಗಡೆ ಆಗುತ್ತಿರುವ ಕಾರಣ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ.

100 ಕ್ಕೂ ಹೆಚ್ಚು ದೇಶಗಳಲ್ಲಿ ‘ಪಠಾಣ್’ ಸಿನಿಮಾ ಬಿಡುಗಡೆ ಆಗಲಿದ್ದು, ವಿದೇಶಗಳಲ್ಲಿಯೂ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಜೋರಾಗಿದೆಯೆಂದು ಸಿನಿಮಾ ವಾಣಿಜ್ಯ ವಿಶ್ಲೇಷಕರು ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾವು ಜನವರಿ 25 ರಂದು ತೆರೆಗೆ ಬರಲಿದೆ.

‘ಪಠಾಣ್’ ಸಿನಿಮಾ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಜಾನ್ ಅಬ್ರಹಾಂ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಯಶ್‌ ರಾಜ್ ಫಿಲಮ್ಸ್ ನಿರ್ಮಾಣ ಮಾಡಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಥಿಯಾ ಲೆಹಂಗಾ ತಯಾರಿಸಲು ಬರೋಬ್ಬರಿ 10 ಸಾವಿರ ಗಂಟೆಗಳು.

Tue Jan 24 , 2023
ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ 2023ರ ಜನವರಿ 23ರಂದು ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಮಹಾರಾಷ್ಟ್ರದ ಖಂಡಾಲಯದಲ್ಲಿರುವ ಸುನೀಲ್ ಶೆಟ್ಟಿ ಅವರ ಐಷಾರಾಮಿ ಫಾರ್ಮ್ ಹೌಸ್ನಲ್ಲಿ ಮದುವೆಯಾಗಿದ್ದಾರೆ. ಇಬ್ಬರು ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗ್ತಿವೆ. ವಿವಾಹ ಸಮಾರಂಭದಲ್ಲಿ ನಟಿ ಅಥಿಯಾ ಶೆಟ್ಟಿ ಲೈಟ್ ಪಿಂಕ್ ಬಣ್ಣದ ಅನಾಮಿಕಾ ಖನ್ನಾ ಚಿಕಂಕರಿ […]

Advertisement

Wordpress Social Share Plugin powered by Ultimatelysocial