_ಫ್ರೆಂಡ್ಸ್_ಎಲ್ಲರೂ_ಒಳ್ಳೆಯವರೇ_?!

ಗೆಳೆತನವೆಂಬುದು ಬಾಲ್ಯಾವಸ್ಥೆಯಿಂದ ಮುಪ್ಪಿನವರೆಗೂ ಒಬ್ಬರಲ್ಲ ಮತ್ತೊಬ್ಬರೊಂದಿಗೆ ಬೆಸೆದುಕೊಂಡಿರುತ್ತದೆ. ಬಾಲ್ಯದಲ್ಲಿ ಗೆಳೆಯರ ನಡುವೆ ತುಂಬಾ ಆನಂದ, ಒಬ್ಬರು ಮತ್ತೊಬ್ಬರೊಡನೆ ಅನ್ಯೋನ್ಯ ಸಂಬಂಧ, ಅಪಾರವಾದ ನಂಬಿಕೆ, ಸ್ನೇಹಿತನನ್ನು ಹೊಗಳುವುದು, ಜಗಳ ಮಾಡುವುದು, ಕೋಪಗೊಳ್ಳುವುದು ಹಾಗೂ ಕೆಲವೇ ಕ್ಷಣಗಳಲ್ಲಿ ಮತ್ತೆ ಎಂದಿನಂತೆ ಆಪ್ತಮಿತ್ರರಾಗುವುದು ಎಲ್ಲವೂ ಸಹಜಾತೀಸಹಜವಾಗಿರುತ್ತವೆ. ಆ ವಯೋಮಾನದ ಕಲ್ಪನೆಗಳು, ಆಟಪಾಠಗಳು ಎಲ್ಲವೂ ಚೌಕಟ್ಟನಾಚೆಯೇ ನಡೆದು ಮುಗಿದು ಹೋಗುತ್ತವೆ. ಅಲ್ಲಿನ ಎಲ್ಲವೂ ಅಲ್ಪಾಯುಷಿ ಥೇಟ್ ಬಾಲ್ಯದಂತೆಯೇ. ಜೊತೆ ಸಾಗಿ ಬರದ ಬಾಲ್ಯ ಬಿಟ್ಟರೂ ಬಿಡದೇ ಕಾಡುವ ನೆನಪುಗಳಂತೆ. ಬೆಳೆಯುತ್ತಾ ಹೋದಂತೆ ಈ ಸ್ನೇಹವಲಯ ವಿಸ್ತಾರಗೊಳ್ಳುತ್ತದೆ ಅಲ್ಲದೆ ಕಡಿಮೆಯೂ ಆಗುವುದು ಆಶ್ಚರ್ಯ!
ಯುವಕರ ಗೆಳೆತನ ಮನೆಯಿಂದ ಹೊರಬಂದ ಮನೆಯಿಂದ ಹೊರಗಿನ ಪ್ರಪಂಚಕ್ಕೆ ಕಾಲಿಟ್ಟುರುತ್ತದೆ. ಗೆಳೆತನವೆಂಬುದಿಲ್ಲಿ ಆಪ್ತತೆಗಿಂತ ಹೆಚ್ಚಾಗಿ ಪರಿಚಯಗಳಲ್ಲಿ ಹೆಚ್ಚು ನಿಲ್ಲುತ್ತದೆ. ಕೆಲವು ಪರಿಚಯಗಳು ಚಿರಪರಿಚಿತವಾಗಿ ಸ್ನೇಹಕ್ಕೆ ಹೊರಳುತ್ತವೆ. ಈ ಯೌವ್ವನದ ಗೆಳೆತನಕ್ಕೆ ಆಯ್ಕೆಗಳಿರುತ್ತವೆ. ಯೌವ್ವನವೆಂದರೆ ವಿಗ್ರಹಕಾರನ ಹತ್ತಿರವಿರುವ ಮಣ್ಣಿದ್ದಂತೆ. ತಾನೇ ಶಿಲ್ಪಿ, ತಾನೇ ಮೂತರ್ಿ ಕೆತ್ತಿಕೊಳ್ಳುವ ಮೂತರ್ಿಯಾಗುವ ಹೊಣೆ ಹೊತ್ತವರು. ಅದರ ಭಾಗೀದಾರರು ಹಾಗೂ ಪ್ರಭಾವ ಬೀರುವವರು ಸ್ನೇಹಿತರಾಗಿರುತ್ತಾರೆ.
 :- ಒಂದು ಹಸುವನ್ನೋ ವಾಹನವನ್ನೋ ಖರೀದಿಸುವಾಗ ಎಷ್ಟೆಲ್ಲಾ ಗುಣಾವಗುಣಗಳನ್ನು ಪರೀಕ್ಷಿಸುವ ನಾವು ಸ್ನೇಹಿತರ ಆಯ್ಕೆಯಲ್ಲಿಯೂ ಎಚ್ಚರ ವಹಿಸಬೇಕು. ಸಾಮಾನ್ಯವಾಗಿ ಒಬ್ಬ ಸಹಪಾಠಿ ಮಾತನಾಡುವ ರೀತಿ, ನಗುಮುಖ, ಚತುರತೆ, ಅವನ ಆಕರ್ಷಕ ಉಡುಗೆ, ಹಣ, ಸಂಪತ್ತು ಮುಂತಾದವುಗಳಿಂದ ಗೆಳೆತನ ಕುದುರುತ್ತದೆ. ಅದೊಂದು ತಾತ್ಕಾಲಿಕ ಸೆಳೆತ. ಒಬ್ಬ ಗೆಳೆಯ ಬದುಕಿನ ಜೊತೆ ದಾರಿ ಸವೆಸುವ ಸಹಪಯಣಿಗ. ಸುಮ್ಮನೆ ನಾಲ್ಕು ಹೆಜ್ಜೆ ಸಾಗಿ ನಿಂತುಬಿಡುವವರು ಹೇಗೆ ಗೆಳೆಯರಾದಾರು? ಇವರು ಗಳೆಯ ಗೆಳೆಯರ ನಡುವೆ ಮುನಿಸು ತಂದು ಆಪ್ತವಲಯಕ್ಕೆ ಪೆಟ್ಟು ಕೊಡುತ್ತಾರೆ. ಆದರೆ ಉತ್ತಮ ಗೆಳೆಯರು ಮುರಿದ ಮನಸ್ಸುಗಳನ್ನು ಕೂಡಿಸಿ ಸ್ನೇಹದ ಬಂಧವನ್ನು ಬೆಸೆಯುತ್ತಾರೆ.
  ಗೆಳೆತನದ ಹೇಗಿರಬೇಕೆಂದರೆ ಆ ಗೆಳೆಯ ಅಮೂಲ್ಯ ಸಂಪತ್ತಾಗಿರಬೇಕು. ಒಳ್ಳೆಯ ಹಾಗೂ ನಿಜವಾದ ಗೆಳೆಯ ಅಪಾಯಗಳಿಂದ ಪಾರು ಮಾಡಬೇಕು. ಮನಸ್ಸನ್ನು ಸತ್ಯ, ಪಾವಿತ್ರ್ಯತೆ, ಸದ್ಭಾವನೆ ಮುಂತಾದವುಗಳ ಕಡೆಗೆ ಕೊಂಡೊಯ್ಯಬೇಕು. ಒಳ್ಳೆಯ ಜೀವನ ನಿರ್ವಹಣೆ ಮಾಡುವ ಸಲಹೆ ಸೂಚನೆ ನೀಡುವವನಾಗಿರಬೇಕು. ದಾರಿ ತಪ್ಪಿದಾಗ ಎಚ್ಚರಿಸುವುದು ಹಾಗೂ ನಿರಿತ್ಸಾಹಿಗಳಾದಾಗ ಉತ್ಸಾಹ ತುಂಬವ ಚೈತನ್ಯಶೀಲನಾಗಿರಬೇಕು. ಗೆಳೆಯರೆಲ್ಲರೂ ಕೂಡಿ ಕೆಲವು ಗೆಳೆಯರ ಜೀವನವನ್ನು ಸುಧಾರಣೆ ಮಾಡಿದ ಬಹಳಷ್ಟು ಉದಾಹರಣೆಗಳು ನಮಗೆ ಸಾಕಷ್ಟು ಸಿಗುತ್ತವೆ.
   ಇನ್ನೊಂದು ಸ್ನೇಹವಲಯವೂ ಇರುತ್ತದೆ. ಅಲ್ಲಿಯಾವಾಗಲೂ ಸಿಗರೇಟ್ನ ಹೊಗೆ ಆವರಿಸಿರುತ್ತದೆ. ಜೂಜು, ವೇಶ್ಯೆಯರ ಸಹವಾಸ, ಅಶ್ಲೀಲ ವಿಚಾರಗಳಲ್ಲಿ ಆಸಕ್ತಿ, ಬೀದಿ ಬೀದಿಗಳಲ್ಲಿ ಪೋಲಿ ಅಲೆಯುವುದು, ತಮ್ಮ ಮೇಲೆ ತಮಗೆ ಹಿಡಿತ ಇಲ್ಲದಿರುವಿಕೆ ಮುಂತಾದ ಹೀನಗುಣಗಳ ವೃತ್ತದಲ್ಲಿಯೇ ಈ ಗುಂಪು ಸುತ್ತುತ್ತಿರುತ್ತದೆ. ಇದೊಂಥರ ಕೆಸರಿನ ಗದ್ದೆಯಲ್ಲಿ ಕಾಲು ಸಿಕ್ಕಿಸಿಕೊಂಡಂತೆ. ಒಂದು ಕಾಲನ್ನು ತೆಗೆಯಲು ಹೋದರೆ ಮತ್ತೊಂದು ಕಾಲು ಸಿಕ್ಕಿಹಾಕಿಕೊಳ್ಳುತ್ತದೆ. ಈ ಕೊಚ್ಚೆಯಿಂದ ಹೊರಬರುವುದು ಅಷ್ಟು ಸುಲಭವಲ್ಲ. ಇದಕ್ಕೆ ಕಾರಣ ಮೊದಲ ಹೆಜ್ಜೆಯಲ್ಲೇ ಎಡವಿದ್ದು. ಆದ್ದರಿಂದ ಕೆಟ್ಟವರ ಸ್ನೇಹ ಬೆಳೆಸಬಾರದು.
ಸಮಾಜ ಸಹಪಾಠಿಗಳನ್ನು ನೋಡಿ ಗುಣಾವಗುಣಗಳನ್ನು ಅಳೆಯುತ್ತದೆ ನಮಗೆಲ್ಲ ಗೊತ್ತಿರುವಂತದ್ದೇ ಅಲ್ಲವೇ? ಒಳ್ಳೆಯ ಗೆಳೆತನ ಗೌರವ ತಂದುಕೊಟ್ಟರೆ ಕೆಟ್ಟ ಗೆಳೆತನದಿಂದ ವ್ಯಕ್ತಿತ್ವ ಹಾಳಾಗುತ್ತದೆ. ಗೆಳೆತನಕ್ಕೂ ಆಯ್ಕೆಯ ಅವಕಾಶಗಳಿವೆ. ಅದರ ಆಧಾರದ ಮೇಲೆ ಬದುಕು ನಿಧರ್ಾರವಾಗುತ್ತದೆ. ಯೌವ್ವನದಲ್ಲಿ ಬದುಕನ್ನು ಚಂದದ ಹಳಿಗೆ ತೊಡಗಿಸಿಕೊಂಡರೆ ಭವಿಷ್ಯವೂ ಸುಂದರವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BMW X3 ಈಗ ಭಾರತದಲ್ಲಿ ಡೀಸೆಲ್ ಎಂಜಿನ್ನೊಂದಿಗೆ ಲಭ್ಯವಿದೆ;

Fri Feb 18 , 2022
ಕಳೆದ ತಿಂಗಳು 2022 X3 ಬಿಡುಗಡೆಯೊಂದಿಗೆ BMW ಭಾರತದಲ್ಲಿ 2022 ಅನ್ನು ಪ್ರಾರಂಭಿಸಿತು. Mercedes-Benz GLC ಮತ್ತು Audi Q5, Volvo XC60 ಮತ್ತು ಹೆಚ್ಚಿನವುಗಳಿಗೆ ಪ್ರತಿಸ್ಪರ್ಧಿಯಾಗಿರುವ SUV ಗೆ ಫೇಸ್‌ಲಿಫ್ಟ್, 2022 X3 ಅನ್ನು ಆರಂಭದಲ್ಲಿ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಪ್ರಾರಂಭಿಸಲಾಯಿತು. ಇದು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 248 bhp ಮತ್ತು 350 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. ಆದರೆ ಈಗ, X3 ಅನ್ನು ಡೀಸೆಲ್ […]

Advertisement

Wordpress Social Share Plugin powered by Ultimatelysocial