ಪ್ರಧಾನಿ ಮೋದಿ:ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಕುಟುಂಬದೊಂದಿಗೆ ಭೇಟಿ ನೀಡಿ;

ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜ್ಯೋತಿ ಜವಾನ್ ನಲ್ಲಿನ ಉರಿಯುವ ದೀಪವನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ದೀಪ ಜೊತೆ ಸೇರಿಸಿ ಉರಿಸುವ ಕಾರ್ಯ ನಡೆದಿದೆ. ಈ ಭಾವನಾತ್ಮಕ ಕ್ಷಣಕ್ಕೆ ದೇಶದ ನಾಗರಿಕರು ಮತ್ತು ಹುತಾತ್ಮ ಯೋಧರ ಕುಟುಂಬಸ್ಥರು ಕಣ್ಣೀರು ಹಾಕಿದ್ದನ್ನು ಕಂಡಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

2022ರ ಆರಂಭದ ತಿಂಗಳು ತಮ್ಮ ಆಕಾಶವಾಣಿಯ ಮನದ ಮಾತು ಸರಣಿ ಭಾಷಣ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರಧಾನ ಮಂತ್ರಿಗಳು, ರಾಷ್ಟ್ರೀಯ ಯುದ್ಧ ಸ್ಮಾರಕ ಬಳಿ ಇರುವ ಅಮರ್ ಜವಾನ್ ಜ್ಯೋತಿ ಹುತಾತ್ಮ ಯೋಧರಿಗೆ ಸಲ್ಲಿಸಬಹುದಾದ ಅತಿದೊಡ್ಡ ಗೌರವ. ನಾಗರಿಕರು ತಮ್ಮ ಕುಟುಂಬಸ್ಥರೊಂದಿಗೆ ಈ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಎಂದು ನಾನು ಈ ಸಂದರ್ಭದಲ್ಲಿ ಕೇಳಿಕೊಳ್ಳುತ್ತೇನೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಪ್ರಧಾನ ಮಂತ್ರಿ ಬಾಲ ಪುರಸ್ಕಾರ, ಪದ್ಮ ಪುರಸ್ಕಾರಗಳನ್ನು ಘೋಷಿಸಲಾಗುತ್ತದೆ ಎಂದು ಹೇಳಿದರು.

ದೇಶದ ಒಂದು ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಮನದ ಮಾತುಗಳನ್ನು ಪೋಸ್ಟ್ ಕಾರ್ಡ್ ಮೂಲಕ ನನಗೆ ಕಳುಹಿಸಿದ್ದಾರೆ. ಈ ಪೋಸ್ಟ್‌ಕಾರ್ಡ್‌ಗಳು ದೇಶದ ಹಲವು ಭಾಗಗಳಿಂದ ಮತ್ತು ವಿದೇಶಗಳಿಂದಲೂ ಬಂದಿವೆ. ಈ ಪೋಸ್ಟ್‌ಕಾರ್ಡ್‌ಗಳು ನಮ್ಮ ದೇಶದ ಭವಿಷ್ಯವಾಗಿರುವ ಮಕ್ಕಳ ವಿಶಾಲ ಮತ್ತು ಸಮಗ್ರ ದೃಷ್ಟಿಕೋನವನ್ನು ನೀಡುತ್ತವೆ ಎಂದರು.

ಇಂದು ದೇಶದ ಪಿತಾಮಹ ಬಾಪು ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿ. ಬಾಪು ಅವರ ಜೀವನ, ಬೋಧನೆಗಳನ್ನು ಜನವರಿ 30 ನಮಗೆ ಸ್ಮರಿಸುವಂತೆ ಮಾಡುತ್ತದೆ. ಕೆಲ ದಿನಗಳ ಹಿಂದೆ ಗಣರಾಜ್ಯೋತ್ಸವ, ಹಾಗೂ ಜ.23ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮಜಯಂತಿಯನ್ನು ಆಚರಿಸಿದ್ದೇವೆ ಎಂದರು.

ಪ್ರಧಾನಿಯವರು ಇಂದು ಮನ್ ಕಿ ಬಾತ್ ನಲ್ಲಿ ಹೇಳಿರುವ ಅಂಶಗಳು:
-‘ಅಮರ ಜವಾನ್ ಜ್ಯೋತಿ’ಯಂತೆ ಹುತಾತ್ಮರ ತ್ಯಾಗ ಮತ್ತು ಬಲಿದಾನವೂ ಅಮರವಾಗಿದೆ, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಜನತೆ ತಮ್ಮ ಕುಟುಂಬ ಮತ್ತು ಮಕ್ಕಳೊಂದಿಗೆ ತಪ್ಪದೆ ಭೇಟಿ ನೀಡುವಂತೆ ಪ್ರಧಾನಿ ಕೋರಿದರು; ಅಲ್ಲಿ ತಮಗೆ ಒಂದು ಅನನ್ಯ ಚೈತನ್ಯ ಮತ್ತು ಪ್ರೇರಣೆಯ ಅನುಭವವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

BCCI:ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಈ ʼಇಬ್ಬರು ಯುವ ಆಟಗಾರರುʼ ಆಯ್ಕೆ;

Sun Jan 30 , 2022
 ಭಾರತ (IND) ಮತ್ತು ವೆಸ್ಟ್ ಇಂಡೀಸ್ (WI) ನಡುವಿನ ಏಕದಿನ ಸರಣಿಗೆ ಮುನ್ನ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿದೆ. ಕೋವಿಡ್ ಪರಿವರ್ತನೆಯನ್ನ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಯುವ ಆಟಗಾರರಾದ ಶಾರುಖ್ ಖಾನ್ ಮತ್ತು ಸಾಯಿ ಕಿಶೋರ್ ಅವರನ್ನ ತಂಡದಲ್ಲಿ ಸ್ಟ್ಯಾಂಡ್‌ಬೈ ಆಟಗಾರರನ್ನಾಗಿ ಸೇರಿಸಲು ನಿರ್ಧರಿಸಿದೆ. ಈ ಇಬ್ಬರೂ ಆಟಗಾರರು ಟೀಮ್ ಇಂಡಿಯಾದೊಂದಿಗೆ ಬಯೋ ಬಬಲ್‌ನ ಭಾಗವಾಗಲಿದ್ದಾರೆ. ಅಗತ್ಯವಿದ್ದರೆ, ಅವರನ್ನ ವೆಸ್ಟ್ ಇಂಡೀಸ್ ವಿರುದ್ಧ ಕಣಕ್ಕಿಳಿಸಬಹುದು. ಇಬ್ಬರೂ […]

Related posts

Advertisement

Wordpress Social Share Plugin powered by Ultimatelysocial