ವಿ. ಪ್ರಸಾದ್ ಸ್ವಯಂ ಪರಿಶ್ರಮದಿಂದ ಎತ್ತರಕ್ಕೇರಿದ ಮಹಾನ್ ಚಿತ್ರದ್ಯೋಮಿ.

ಎಲ್. ವಿ. ಪ್ರಸಾದ್ ಸ್ವಯಂ ಪರಿಶ್ರಮದಿಂದ ಎತ್ತರಕ್ಕೇರಿದ ಮಹಾನ್ ಚಿತ್ರದ್ಯೋಮಿ. ಅವರ ಪೂರ್ಣ ಹೆಸರು ಅಕ್ಕಿನೇನಿ ಲಕ್ಷ್ಮೀ ವರ ಪ್ರಸಾದ್ ರಾವ್. ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತರಾದ ಅವರೊಬ್ಬ ನಟ, ನಿರ್ಮಾಪಕ, ನಿರ್ದೇಶಕ, ಛಾಯಾಗ್ರಾಹಕ ಮತ್ತು ಉದ್ಯಮಿ. ಇವರು ಮೂರು ಭಾಷೆಗಳ ಪ್ರಥಮ ಮಾತಿನ ಚಿತ್ರಗಳಾದ ಹಿಂದಿಯ ಆಲಂ ಅರಾ, ತೆಲುಗಿನ ಭಕ್ತ ಪ್ರಹ್ಲಾದ ಮತ್ತು ತಮಿಳು-ತೆಲುಗಿನಲ್ಲಿ ತಯಾರಾದ ‘ಕಾಳಿದಾಸ’ ಗಳಲ್ಲಿ ನಟಿಸಿದ ಕೀರ್ತಿವಂತರು.

ಎಲ್. ವಿ. ಪ್ರಸಾದ್ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ತಾಲೂಕಿನ ಸೋಮವರಪ್ಪಡು ಎಂಬ ಹಳ್ಳಿಯಲ್ಲಿ 1908ರ ಜನವರಿ 17ರಂದು ಕೃಷಿಕುಟುಂಬದಲ್ಲಿ ಜನಿಸಿದರು. ತಂದೆ ಅಕ್ಕಿನೇನಿ ಶ್ರೀರಾಮುಲು. ತಾಯಿ ಅಕ್ಕಿನೇನಿ ಬಸವಮ್ಮ. ಅತಿ ಮುದ್ದಿನಿಂದ ಬೆಳೆದ ಪ್ರಸಾದ್ ಅವರಿಗೆ ಓದಿನಲ್ಲಿ ಆಸಕ್ತಿ ಹುಟ್ಟಲಿಲ್ಲ. 1924ರಲ್ಲಿ ತಮ್ಮ 17 ನೇ ವಯಸ್ಸಿನಲ್ಲಿ ತಾಯಿಯ ಸಂಬಂಧಿ ಸೌಂದರ್ಯ ಮನೋಹರಮ್ಮ ಅವರನ್ನು ವಿವಾಹವಾದರು. ಶೀಘ್ರದಲ್ಲೇ ಅವರಿಗೆ ಹೆಣ್ಣು ಮಗುವಾಯಿತು. ಪ್ರಸಾದ್ ಅವರ ತಂದೆ ಅತಿಯಾದ ಸಾಲಗಳ ಹೊರೆ ತಾಳಲಾರದೆ ದಿವಾಳಿತನ ಘೋಷಿಸಿದರು. ಆ ಸಮಯದಲ್ಲಿ ಪ್ರಸಾದ್ ಸಿನಿಮಾ ವೃತ್ತಿಜೀವನದತ್ತ ನೋಡಿದರು.
ಎಲ್.ವಿ.ಪ್ರಸಾದ್ ವೀನಸ್ ಫಿಲ್ಮ್ ಕಂಪನಿಯ ಹುಡುಗನಾಗಿ ಕೆಲಸ ಮಾಡಿದರು. ನಂತರ ಅವರು ಇಂಡಿಯಾ ಪಿಕ್ಚರ್ಸ್‌ಗೆ ಕೆಲಸದ ಹುಡುಗನಾಗಿ ಸೇರಿಕೊಂಡರು. ಅಲ್ಲಿ ಅಕ್ತರ್ ನವಾಜ್ ಅವರ ಮೂಕಿ ಚಲನಚಿತ್ರ ‘ಸ್ಟಾರ್ ಆಫ್ ದಿ ಈಸ್ಟ್‌’ನಲ್ಲಿ ಕಿರು ಪಾತ್ರವೊಂದರಲ್ಲಿ ನಟಿಸಿದರು. 1931ರಲ್ಲಿ, ಅವರು ವೀನಸ್ ಫಿಲ್ಮ್ ಕಂಪನಿಯ ಮೂಲಕ ಭಾರತದ ಮೊದಲ ಮಾತಿನ ಚಿತ್ರ ‘ಆಲಂ ಅರಾ’ದಲ್ಲಿ ನಟಿಸಿದರು. ಮುಂದೆ ಹಲವು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದರು. ಇಂಪೀರಿಯಲ್ ಫಿಲ್ಮ್ಸ್ ನ ಎಚ್. ಎಮ್. ರೆಡ್ಡಿ ಪ್ರಸಾದ್‌ಗೆ ಮೊದಲ ತೆಲುಗು ಮತ್ತು ತಮಿಳು ದ್ವಿಭಾಷಾ “ಟಾಕಿ” ಚಿತ್ರವಾದ ಕಾಳಿದಾಸ್‌ನಲ್ಲಿ ಸಣ್ಣ ಪಾತ್ರವನ್ನು ನೀಡಿದರು. ನಂತರ ತೆಲುಗಿನ ಮೊದಲ ಟಾಕಿ ಚಿತ್ರ ‘ಭಕ್ತ ಪ್ರಹ್ಲಾದ’ದಲ್ಲಿ ಪಾತ್ರ ನೀಡಿದರು.
ಅಲಿ ಷಾ ನಿರ್ದೇಶಿಸಿದ ‘ಕಮರ್-ಅಲ್-ಜಮಾನ್‌’ನಲ್ಲಿ ಪ್ರಸಾದ್‌ಗೆ ಆಕಸ್ಮಿಕವಾಗಿ ಸಹಾಯಕ ನಿರ್ದೇಶಕನಾಗುವ ಅವಕಾಶ ಸಿಕ್ಕಿತು. ತಂತ್ರ ಸುಬ್ರಹ್ಮಣ್ಯಂ ಅವರು ‘ಕಷ್ಟ ಜೀವಿ’ ಚಿತ್ರದ ನಿರ್ಮಾಣ ಮೇಲ್ವಿಚಾರಣೆ ಮತ್ತು ಸಹಾಯಕ ನಿರ್ದೇಶಕನ ಕೆಲಸವನ್ನು ಕೊಟ್ಟರು. ಇದು ಅವರನ್ನು ಮತ್ತೆ ಮುಂಬೈಗೆ ಕರೆದೊಯ್ಯಿತು. ಮೂರು ರೀಲ್‌ಗಳ ಚಿತ್ರೀಕರಣದ ನಂತರ ಚಿತ್ರವನ್ನು ಕೈಬಿಡಲಾಯಿತು. ಪ್ರಸಾದ್ ಅವರು ಕೈಚೆಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಇನ್ನೂ ಕೆಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಸಿಕ್ಕಿತು. ಈ ಸಮಯದಲ್ಲಿ, ಪೃಥ್ವಿರಾಜ್ ಕಪೂರ್ ಅವರೊಂದಿಗೆ ಸಂಪರ್ಕ ಮೂಡಿ ಪೃಥ್ವಿ ಥಿಯೇಟರ್‌ ಸೇರಿ ತಮ್ಮಲ್ಲಿದ್ದ ಅಭಿನಯದ ಅಭಿಲಾಷೆಗಳಿಗೆ ತೃಪ್ತಿ ಕಂಡುಕೊಂಡರು. ಈ ಸಮಯದಲ್ಲಿ ಅವರಿಗೆ ಪರಿಚಿತರಾದ ರಾಜ್ ಕಪೂರ್ ಅವರನ್ನು ತಮ್ಮ ಮೊದಲ ಹಿಂದಿ ನಿರ್ಮಾಣವಾದ ‘ಶಾರದಾ’ದ ನಾಯಕರಾಗಿಸಿದರು.
ಪ್ರಸಾದ್ 1943ರಲ್ಲಿ ‘ಗೃಹ ಪ್ರವೇಶಂ’ಗೆ ಸಹಾಯಕ ನಿರ್ದೇಶಕರಾಗಿದ್ದರು. ಅನಿರೀಕ್ಷಿತವಾಗಿ ಅವರು ಆ ಚಿತ್ರದ ನಿರ್ದೇಶಕರಾಗಿ ಮತ್ತು ಚಿತ್ರದ ನಾಯಕ ನಟರಾಗುವ ಪರಿಸ್ಥಿತಿ ಮೂಡಿತು! 1946ರಲ್ಲಿ ಬಿಡುಗಡೆಯಾದ ‘ಗೃಹಪ್ರವೇಶಂ’ ಚಿತ್ರವು ಆ ದಶಕದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದೆನಿಸಿತು. ಇದಾದ ನಂತರ ಕೆ.ಎಸ್.ಪ್ರಕಾಶ ರಾವ್ ಅವರು ಪ್ರಸಾದ್ ಅವರಿಗೆ ‘ದ್ರೋಹಿ’ ಚಿತ್ರದಲ್ಲಿ ಪ್ರಮುಖ ಪಾತ್ರ ನೀಡಿದರು. ಈ ಸಮಯದಲ್ಲಿ, ರಾಮಬ್ರಹ್ಮಮ್ ಅವರು ಅನಾರೋಗ್ಯದ ಕಾರಣ ‘ಪಲ್ನಾಟಿ ಯುದ್ಧಂ’ ಚಿತ್ರವನ್ನು ಮುಗಿಸಲು ಕಷ್ಟಪಡುತ್ತಿದ್ದರು. ಅವರು ಈ ಚಿತ್ರಕ್ಕೆ ನ್ಯಾಯ ಸಲ್ಲಿಸಲು ಪ್ರಸಾದ್ ಅವರನ್ನು ಆಯ್ಕೆ ಮಾಡಿದರು. ಇದರ ನಂತರ 1949ರಲ್ಲಿ, ಪ್ರಸಾದ್ ಅವರು ‘ಮನ ದೇಶಂ’ ಅನ್ನು ನಿರ್ದೇಶಿಸಿದರು. ಇದರಲ್ಲಿ ಅವರು ಮೊದಲ ಬಾರಿಗೆ ಎನ್. ಟಿ. ರಾಮರಾವ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕದ ಈ ರಾಜಕೀಯ ನಾಯಕರಿಗೆ ಇದೇ ಕೊನೆ ಚುನಾವಣೆ.

Tue Jan 17 , 2023
  ಬೆಂಗಳೂರು, ಜನವರಿ 17: ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ರಾಜಕಾರಣದ ಹಲವು ದಿಗ್ಗಜರಿಗೆ ಮುಂಬರುವ ವಿಧಾನಸಭಾ ಚುನಾವಣೆಯು ಕೊನೆಯ ಚುನಾವಣೆಯಾಗುವ ಸಾಧ್ಯತೆಯಿದೆ. ಏಕೆಂದರೆ ಅವರು ಇನ್ನು ಐದು ವರ್ಷಗಳ ನಂತರ 80 ವರ್ಷಗಳನ್ನು ಪೂರೈಸುವ ಹೊಸ್ತಿಲಲ್ಲಿದ್ದಾರೆ. ಈ ಹಿರಿಯರಲ್ಲಿ ಹೆಚ್ಚಿನವರು ಆ ವೇಳೆಗೆ ಚುನಾವಣಾ ರಾಜಕೀಯದಿಂದ ನಿವೃತ್ತರಾಗಬಹುದು. ಕಾಂಗ್ರೆಸ್ ಶಾಸಕರಾದ ಆರ್.ವಿ.ದೇಶಪಾಂಡೆ (75), ಕೆ.ಆರ್.ರಮೇಶ್ ಕುಮಾರ್ (73) ಶಾಮನೂರು ಶಿವಶಂಕರಪ್ಪ (91) ಸೇರಿದಂತೆ ಇತರರಿಗೆ ಇದು […]

Advertisement

Wordpress Social Share Plugin powered by Ultimatelysocial