ಪ್ರತಿಭಾನ್ವಿತ ತಂಡದ ಪ್ರಯತ್ನಕ್ಕೆ ಬೆನ್ನುತಟ್ಟಿದ ಶ್ರೀನಗರ ಕಿಟ್ಟಿ!

 

ಚಂದನವನದ ಅಂಗಳದಲ್ಲಿ ವಿಭಿನ್ನ ಶೀರ್ಷಿಕೆ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾಗಳಲ್ಲಿ ಒಂದು ತೂತು ಮಡಿಕೆ. ಈಗಾಗಲೇ ಶೂಟಿಂಗ್ ಮುಗಿಸಿರುವ ತೂತು ಮಡಿಕೆ ಬಳಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಈಗ ಮೋಷನ್‌ ಟೀಸರ್ ರಿಲೀಸ್ ಮಾಡಿ ಗಮನಸೆಳೆಯುತ್ತಿದೆ.ಮೋಷನ್ ಟೀಸರ್ ಔಟ್ಫಸ್ಟ್ ಲುಕ್ ಮೂಲಕ ಗಮನಸೆಳೆದಿರುವ ತೂತು ಮಡಿಕೆ ಸಿನಿಮಾದ ಮೋಷನ್ ಟೀಸರ್ ನ್ನು ನಟ ಶ್ರೀನಗರ ಕಿಟ್ಟಿ‌ ಅನಾವರಣ ಮಾಡಿ ಪ್ರತಿಭಾನ್ವಿತ ಕಲಾವಿದರ ಬೆನ್ನುತಟ್ಟಿದರು. ಬಳಿಕ‌ ಮಾತಾನಾಡಿದ ಕಿಟ್ಟಿ, ಪೋಸ್ಟರ್ ನಲ್ಲಿಯೇ ಪಾಸಿಟಿವ್ ಫೀಲ್ ಇದೆ. ಕೋವಿಡ್ ನಂತ್ರ ಸಿನಿಮಾಗಳನ್ನು ಪ್ರೇಕ್ಷಕ ಚೆನ್ನಾಗಿ ಸ್ವೀಕರಿಸ್ತಿದ್ದಾನೆ. ಇಡೀ ಕೀರ್ತಿ ಟೀಂಗೆ ಒಳ್ಳೆದಾಗಲಿ ಎಂದರು. ಮೋಷನ್ ಟೀಸರ್ ಸಖತ್ ಇಂಪ್ರೆಸಿವ್ ಆಗಿ‌ ಮೂಡಿಬಂದಿದ್ದು, ಕೀರ್ತಿ ವಿಶೇಷವಾಗಿ‌ ಮೋಷನ್ ಪೋಸ್ಟರ್ ನ್ನು ಪ್ರಸೆಂಟ್ ಮಾಡಿದ್ದಾರೆ.ತೂತು ಮಡಿಕೆ ಸಿನಿಮಾಗೆ ಚಂದ್ರಕೀರ್ತಿ ಎಂ ಕಥೆ, ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಕಾಮಿಡಿ ಕಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ, ನಾಯಕಿಯಾಗಿ ಪವನಾ ಗೌಡ, ಉಗ್ರಂ ಮಂಜು, ಶಂಕರ್ ಅಶ್ವತ್ಥ್​​​​​, ಗಿರೀಶ್​​ ಶಿವಣ್ಣ, ನಂದಗೋಪಾಲ್, ಅರುಣ್ ಮೂರ್ತಿ, ಸಿತಾರಾ, ರಾಘವೇಂದ್ರ. ಎನ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಸ್ವಾಮಿನಾಥನ್ ಆರ್.ಕೆ. ಸಂಗೀತ ನೀಡಿದ್ದಾರೆ. ಚಂದ್ರಕೀರ್ತಿ, ಎಎಸ್ ಜಿ, ಡಾಲರ್ ಚಿತ್ರಕಥೆ ಬೆಲ್​​​​​​ಬಾಟಂ’ ಖ್ಯಾತಿಯ ರಘು ನಿಡುವಳ್ಳಿಯವರು ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಸ್ಪ್ರೆಡಾನ್ ಸ್ಟುಡಿಯೋ ಸಹಯೋಗದೊಂದಿಗೆ
ಸರ್ವತ ಸಿನಿ ಗ್ಯಾರೇಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಮಧುಸೂದನ್ ಮತ್ತು ಗಿರಿಬಸವ ಪ್ರೊಡಕ್ಷನ್ಸ್ ಬಂಡವಾಳ ಹೂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುಗಾದಿಯಂದು ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿದ ಅರ್ಜುನ್ ಗುರೂಜಿ.

Tue Apr 5 , 2022
ಬಹುಬೇಗ ನಮ್ಮನೆಲ್ಲಾ ಅಗಲಿದ ನಟ ಚಿರಂಜೀವಿ ಸರ್ಜಾ ಅಭಿನಯದ ” ರಾಜಮಾರ್ತಾಂಡ” ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಯುಗಾದಿ ಹಬ್ಬದ ಶುಭದಿನದಂದು ಈ ಚಿತ್ರದ ಪೋಸ್ಟರನ್ನು ಅರ್ಜುನ್ ಗುರೂಜಿ ಮೈಸೂರಿನ ಡಿ ಆರ್ ಸಿಯಲ್ಲಿ ಬಿಡುಗಡೆ ಮಾಡಿದರು. ಡಿ.ಸಿ.ಪಿ ಪ್ರಕಾಶ್ ಗೌಡ್ರು ಹಾಗೂ ಡಿ ಆರ್ ಸಿಯ ಎಂ.ಡಿ ಶ್ಯಾಮಲ ಅವರು ಈ ಸಂದರ್ಭದಲ್ಲಿ ‌ಉಪಸ್ಥಿತರಿದ್ದರು. ಚಿರಂಜೀವಿ ಸರ್ಜಾ ಅವರ ಸಾವಿನ ಮುಂಚೆಯೇ ಚಿತ್ರೀಕರಣ […]

Advertisement

Wordpress Social Share Plugin powered by Ultimatelysocial