ಪ್ರತಿದಿನ ಬೆಲ್ಲ ಸೇವಿಸುವುದರಿಂದ ದೇಹಕ್ಕಾಗುವ ಲಾಭಗಳೇನು ಗೊತ್ತಾ..?

ಸಾಮಾನ್ಯವಾಗಿ ನಾವೆಲ್ಲರೂ ಸಿಹಿ ಪದಾರ್ಥಗಳಲ್ಲಿ ಸಕ್ಕರೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತೇವೆ. ಆದರೆ, ಬೆಲ್ಲ ಸಕ್ಕರೆಗಿಂತ ಹೆಚ್ಚು ರುಚಿಕರ ಹಾಗೂ ಪೌಷ್ಠಿಕವಾಗಿದೆ ಎಂಬುದು ನಿಮಗೆ ತಿಳಿದಿದೆಯೇ. ಬೆಲ್ಲದ ಸೇವನೆ ಶರೀರದಿಂದ ಹಲವು ರೋಗಗಳನ್ನು ತೊಲಗಿ ಸುತ್ತದೆ ಎಂದು ಸಾಬೀತಾಗಿದೆ.

ಹೀಗಾಗಿ ಬೆಲ್ಲ ಸೇವಿಸಿ ಯಾವ ಯಾವ ರೋಗಗಳಿಂದ ಮುಕ್ತಿ ಪಡೆಯಬಹುದು ಎಂಬುದನ್ನೊಮ್ಮೆ ತಿಳಿಯೋಣ ಬನ್ನಿ.

ಬೆಲ್ಲದಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್ ಅಂಶ ಇರುತ್ತದೆ. ಇದು ಪಚನ ಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಬೆಲ್ಲದ ಸೇವನೆ ಯಿಂದ ಪಚನ ಶಕ್ತಿ ಗಟ್ಟಿಯಾಗುತ್ತದೆ. ಹೀಗಾಗಿ ನಿಯಮಿತವಾಗಿ ಬೆಲ್ಲವನ್ನು ಸೇವಿಸಬೇಕು. ರಾತ್ರಿಯ ಹೊತ್ತು ಮಲಗುವ ಮುನ್ನ ಬೆಲ್ಲ ಸೇವಿಸುವುದರಿಂದ ಪಚನ ಕ್ರಿಯೆ ಉತ್ತಮವಾಗಿರುತ್ತದೆ. ಶರೀರದಲ್ಲಿ ಒಂದು ವೇಳೆ ಕಬ್ಬಿಣಾಂಶದ ಕೊರತೆ ಉಂಟಾದರೆ ಅನಿಮಿಯಾ ಲಕ್ಷಣಗಳು ಕಂಡುಬರಲಾರಂಭಿಸುತ್ತವೆ.

ಹೆಚ್ಚಿನ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಶರೀರದಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತ ನಿರ್ಗಮಿಸುವುದರಿಂದ, ಕೆಂಪು ರಕ್ತ ಕಣಗಳಲ್ಲಿ ಇಳಿಕೆ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬೆಲ್ಲದ ಸೇವನೆ ಪ್ರಯೋಜನಕಾರಿಯಾಗಿದೆ. ಬೆಲ್ಲದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿಣದ ಅಂಶ ಇರುತ್ತದೆ. ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಬೇಳೆಯೊಂದಿಗೆ ಬೆಲ್ಲ ಬೆರೆಸಿ ಸೇವಿಸಬೇಕು. ಇದು ದೇಹದಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಿಸುತ್ತದೆ. ಹಾಲು-ಬೆಲ್ಲ ಒಟ್ಟಾಗಿ ಬೆರೆಸಿ ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆ ಪರಿಹರಿಸಬಹುದು.

ಬೆಲ್ಲವನ್ನು ಸೇವಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಹಾಗೂ ಹಲವು ರೋಗಗಳಿಂದ ಮುಕ್ತಿ ಪಡೆಯ ಬಹುದು. ಶರೀರದ ಇಮ್ಯೂನ್ ಸಿಸ್ಟಂ ದುರ್ಬಲವಾಗಿದ್ದರೆ, ನಮ್ಮ ಶರೀರ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳ ವಿರುದ್ಧ ಹೋರಾ ಡಲು ಸಾಧ್ಯವಿಲ್ಲ. ಬೆಲ್ಲದಲ್ಲಿ ಝಿಂಕ್ ಹಾಗೂ ವಿಟಮಿನ್ ಸಿ ಜೊತೆಗೆ ಹಲವು ಪೋಷಕ ತತ್ವಗಳಿವೆ. ಇವು ನಮ್ಮ ಶರೀರವನ್ನು ವಿವಿಧ ಋತು ಗಳಲ್ಲಿ ಬರುವ ಸಾಮಾನ್ಯ ಕಾಯಿಲೆಯಿಂದ ರಕ್ಷಿಸುತ್ತವೆ.

ಒಂದು ವೇಳೆ ನೀವೂ ಕೂಡ ತೂಕ ಹೆಚ್ಚಳ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದು, ನೀವು ನಿಮ್ಮ ತೂಕವನ್ನು ಇಳಿಸಲು ಬಯಸು ತ್ತಿದ್ದರೆ, ಬೆಲ್ಲದ ನೀರನ್ನು ಸೇವಿಸಿ. ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆ ಬೆಲ್ಲದ ನೀರಿನ ಸೇವನೆ ಮಾಡುವುದರಿಂದ ನೀವು ನಿಮ್ಮ ಶರೀ ರದಿಂದ ಅನಾವಶ್ಯಕ ಕೊಬ್ಬನ್ನು ತೊಡೆದುಹಾಕಬಹುದು.ಒಂದು ವೇಳೆ ನೀವೂ ಕೂಡ ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದರೆ ಬೆಲ್ಲದ ಸೇವನೆ ನಿಮಗೆ ತುಂಬಾ ಲಾಭಕಾರಿಯಾಗಿದೆ.

ಬೆಲ್ಲದಲ್ಲಿ ಹೇರಳ ಪ್ರಮಾಣದಲ್ಲಿ ಪೊಟ್ಯಾಸಿಯಂ ಕಂಡು ಬರುತ್ತದೆ, ಇದು ರಕ್ತದೊತ್ತಡವನ್ನು ಸಂತುಲನದಲ್ಲಿಡುತ್ತದೆ. ಕಿಡ್ನಿ ಸ್ಟೋನ್ ಹಾಗೂ ಆಸ್ಟಿಯೋಫೋರೋಸಿಸ್ ಸಮಸ್ಯೆಗಳಿಗೂ ಕೂಡ ಬೆಲ್ಲದ ಸೇವನೆ ಪರಿಣಾಮಕಾರಿಯಾಗಿದೆ. ಜಠರ ನಮ್ಮ ಶರೀರದ ಒಂದು ಮಹತ್ವಪೂರ್ಣ ಅಂಗವಾಗಿದೆ. ಜಠರದಲ್ಲಿನ ಸಮಸ್ಯೆ ನಮ್ಮ ಶರೀರದ ಇತರ ಅಂಗಗಳ ಸಮಸ್ಯೆಗಳಿಗೂ ಕೂಡ ಕಾರಣವಾಗುತ್ತದೆ. ಹೀಗಾಗಿ ಜಠರವನ್ನು ಆರೋಗ್ಯಪೂರ್ಣವಾಗಿರಿಸಲು ರಾತ್ರಿಯ ಹೊತ್ತು ಬಿಸಿನೀರಿನ ಜೊತೆಗೆ ಬೆಲ್ಲವನ್ನು ಸೇವಿಸಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಜನರ ಮನೆ ಬಾಗಿಲಿಗೆ ಪಹಣಿ, ಖಾತೆ, ಭೂದಾಖಲೆ ಉಚಿತ ವಿತರಣೆ

Sat Mar 5 , 2022
ಬೆಂಗಳೂರು : ರಾಜ್ಯದ ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಮಾರ್ಚ್ 12 ರಂದು ಜಿಲ್ಲಾಧಿಕಾರಿಯಿಂದ ಹಿಡಿದು ಗ್ರಾಮ ಸೇವಕರವರೆಗೂ ಗ್ರಾಮೀಣ ಪ್ರದೇಶದ ಸಾರ್ವಜನಿಕರ ಮನೆಗೆ ಭೇಟಿ ನೀಡಿ ಸರ್ಕಾರಿ ಸೌಲಭ್ಯ, ದಾಖಲಾತಿಗಳನ್ನು ಉಚಿತವಾಗಿ ವಿತರಣೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 12 ರಂದು ಮನೆ ಮನೆಗೆ ಅಧಿಕಾರಿಗಳು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಸಿಎಂ […]

Advertisement

Wordpress Social Share Plugin powered by Ultimatelysocial