ತುಮಕೂರು ನಗರದ ಕಮಲ ಕೃಪ ಕಛೇರಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಪತ್ರಿಕಾ ಗೋಷ್ಠಿ.

ಬಿಜೆಪಿ ಪಕ್ಷದ ತುಮಕೂರು ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಸಂಸದ ಜಿ.ಎಸ್. ಬಸವರಾಜು. ಶಾಸಕ ಜಿ ಬಿ ಜ್ಯೋತಿ ಗಣೇಶ್ ಮಾಜಿ ಸಂಸದ ಮುದ್ದಹನುಮೇಗೌಡರ ನೇತೃತ್ವದಲ್ಲಿ ನೇಡೆದ ಪತ್ರಿಕಾ ಗೋಷ್ಠಿ. ಜಿ ಕೆ ಶ್ರೀನಿವಾಸ್ ಸ್ವಂತಂತ್ರ ಅಭ್ಯರ್ಥಿ ಆಗಿ ಉಮೇದುವರಿಕೆ ಸಲ್ಲಿಸಿದ್ದರು ಆದರೆ ಬಿಜೆಪಿಗೆ ಬೆಂಬಲ ಸೂಚಿಸಿ ವಾಪಾಸ್ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಅಧ್ಯಕ್ಷರು ಹೇಳಿದರು.

ನಾನು ಪ್ರಾಮಾಣಿಕ ಕಾರ್ಯಕರ್ತನಾಗಿ ಹಲವಾರು ವರ್ಷಗಳಿಂದ ದುಡಿಯುತ್ತಿದ್ದೇನೆ ಅದರಂತೆ ಮೋದಿ ನಾಯಕತ್ವ ಹಾಗೂ ಬಿಜೆಪಿಯನ್ನು ತುಮಕೂರು ನಗರದಲ್ಲಿ ಗೆಲ್ಲಿಸುವ ಸದುದ್ದೇಶದಿಂದ ನಾನು ಉಮೇದುವಾರಿಕೆ ಹಿಂಪಡೆಯುತ್ತಿದ್ದೇನೆ ಎಂದು ಜಿ.ಕೆ ಶ್ರೀನಿವಾಸ್ ತಿಳಿಸಿದರು.

ಭಾರತವನ್ನು ಒಟ್ಟುಗುಡಿಸುವ ಹಾಗೂ ಪಾಕಿಸ್ತಾನದಂತಹ ಕೆಲವು ಶತೃ ರಾಷ್ಟ್ರಗಳು ಭಾರತವನ್ನು ಹೊಡೆಯುವಂತಹ ಕೆಲಸ ಮಾಡುತ್ತಿದೆ ಅದಕ್ಕೆ ನಾವು ವಿಶ್ವ ಹಿಂದೂ ಪರಿಷದ್, ಆರ್ ಎಸ್ ಎಸ್ ಬಿಜೆಪಿ ಭಾರತವನ್ನು ಸಮೃದ್ಧ ರಾಷ್ಟ್ರವನ್ನು ಮಾಡುವಂತಹ ಕಾರ್ಯಕ್ಕೆ ಮುಂದಾಗಿದ್ದೇವೆ ಅದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಬಿಜೆಪಿಯ ಹರ್ಯಾಣ ಸಂಸದರು ಸಂಜಯ್ ಬಾಟಿಯ ಹೇಳಿದರು.

ಇನ್ನು ಇದೆ ಮಾಧ್ಯಮ ಗೋಷ್ಠಿಗೆ ಆಗಮಿಸಿದ ಮಾಜಿ ಸಂಸದ ಮುದ್ದಾಹನುಮೇಗೌಡ ಮಾತನಾಡುತ್ತ ನಾನು ಸಹ ಕುಣಿಗಲ್ ಕ್ಷೇತ್ರದ ಆಕಾಂಕ್ಷೆ ಆಗಿದ್ದು ಸತ್ಯ ಆದರೆ ನನ್ನ ಪಕ್ಷ ಕೆಲವೊಂದು ನಿರ್ಧಾರ ಕೈಗೊಂಡಿತು ಅದಕ್ಕೆ ನಾನು ತಲೆ ಬಾಗಿ ಅವರ ನಿರ್ಧಾರ ಗೌರವಿಸುವುದು ನನ್ನ ಕರ್ತವ್ಯ ಆಗಿದ್ದ ಪರಿಣಾಮ ನಾನು ಪಕ್ಷದ ನಿಷ್ಠಾವಂತನಾಗಿ ದುಡಿದು ಕುಣಿಗಲ್ ಮಾತ್ರವಲ್ಲದೆ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ನಮ್ಮ ಪಕ್ಷ ಗೆಲ್ಲಲು ಶ್ರಮವಹಿಸಿ ಕೆಲಸ ಮಾಡುತ್ತೇನೆ ಎಂದರು.

ನಮ್ಮ ಪಕ್ಷ ಜನಸ್ನೇಹಿ ಪಕ್ಷವಾಗಿದ್ದು ನಾನು ಬಿಜೆಪಿ ಪಕ್ಷಕ್ಕೆ ಪಕ್ಷ ನಿಷ್ಠೆ ಕೆಲಸ ಮಾಡುತ್ತಿರುವುದು ಅಳಿಲು ಸೇವೆ ಅಷ್ಟೇ ಎಂದು ಹೇಳಿದರು ಹಾಗೂ ನಾನು ನನ್ನ ಕಾರ್ಯಕರ್ತರು ಬಿಜೆಪಿ ಪಕ್ಷದಲ್ಲಿ ಸಾಕಾರಾತ್ಮಕವಾಗಿ ಹಾಗೂ ಸಕ್ರಿಯವಾಗಿದ್ದೇವೆಂದರು.

ನಾನು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇನೆ ಯಾವುದೇ ಒಬ್ಬ ವ್ಯಕ್ತಿಗಾಗಿ ನಾನು ಚುನಾವಣಾ ಪ್ರಚಾರ ಮಾಡಲ್ಲ ಎಂದ ಮಾಜಿ ಸಂಸದ ಮುದ್ದಾಹನುಮೇಗೌಡ, ಬಿಜೆಪಿ ಪಕ್ಷಕ್ಕೆ ಅಭಿವೃದ್ಧಿಯೇ ಶ್ರೀ ರಕ್ಷೆ ಹಾಗಾಗಿ ಬಿಜೆಪಿ ತುಮಕೂರು ಜಿಲ್ಲೆಯಲ್ಲಿ ಹೆಚ್ಚಿನ ಸೀಟ್ ಗಳನ್ನು ಗೆಲ್ಲಲು ಸಹಕರಿಯಾಗಿದೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೆಡಿಎಸ್ ಪಕ್ಷದ ಕಾರ್ಯಕರ್ತರೇ ನಮ್ಮ ಶಕ್ತಿ: ಶಾಸಕ ಬಂಡೆಪ್ಪ ಖಾಶೆಂಪುರ್..!

Mon Apr 24 , 2023
ಬೀದರ್ (ಏ.24): ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷದ ಕಾರ್ಯಕರ್ತರೇ ನಮ್ಮ ಶಕ್ತಿ, ಅವರಿಂದಲೇ ನಮ್ಮ ಪಕ್ಷ ಗಟ್ಟಿಯಾಗಿದೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು. ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಆಣದೂರು ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಕ್ಷೇತ್ರದ ಆಣದೂರು, ಆಣದೂರುವಾಡಿ, ಸಿಖೇನಪೂರ ಸೇರಿದಂತೆ ವಿವಿಧ ಗ್ರಾಮಗಳ ವಿವಿಧ ಪಕ್ಷಗಳ ಮುಖಂಡರನ್ನು […]

Advertisement

Wordpress Social Share Plugin powered by Ultimatelysocial