ದೇಶದ ಸಿರಿಧಾನ್ಯಗಳನ್ನು ಅಪ್ಪಿಕೊಂಡ ಪ್ರಧಾನಿ ಮೋದಿ.

ವದೆಹಲಿ: ಯೋಗ ಮತ್ತು ಸಿರಿಧಾನ್ಯಗಳನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸುವ ಮೂಲಕ ಅವುಗಳನ್ನು ಉತ್ತೇಜಿಸುವ ಅಭಿಯಾನಗಳಲ್ಲಿ ಜನರು ವ್ಯಾಪಕವಾಗಿ ಭಾಗವಹಿಸುತ್ತಿರುವುದರಿಂದ ಹೊಸ ಕ್ರಾಂತಿಯು ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದ್ದಾರೆ.

‘ಜನರು ಎರಡೂ ಅಭಿಯಾನಗಳಲ್ಲಿ ಭಾಗವಹಿಸುತ್ತಿರುವುದರಿಂದ ಕ್ರಾಂತಿ ನಡೆಯುತ್ತಿದೆ. ಜನರು ದೊಡ್ಡ ಪ್ರಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಯೋಗ ಮತ್ತು ಫಿಟ್ ನೆಸ್ ಅನ್ನು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ; ಅಂತೆಯೇ ಜನರು ದೊಡ್ಡ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ’ ಎಂದು ಪ್ರಧಾನಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದ 97 ನೇ ಆವೃತ್ತಿಯಲ್ಲಿ ಹೇಳಿದರು.

‘ಭಾರತದ ಪ್ರಸ್ತಾಪದ ನಂತರ ಅಂತರರಾಷ್ಟ್ರೀಯ ಯೋಗ ದಿನ ಮತ್ತು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎರಡನ್ನೂ ಉತ್ತೇಜಿಸುವ ನಿರ್ಧಾರವನ್ನು ವಿಶ್ವಸಂಸ್ಥೆ ತೆಗೆದುಕೊಂಡಿದೆ. ಯೋಗವು ಆರೋಗ್ಯಕ್ಕೂ ಸಂಬಂಧಿಸಿದೆ ಮತ್ತು ಸಿರಿಧಾನ್ಯಗಳು ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತವೆ’ ಎಂದು ಪ್ರಧಾನಿ ಮೋದಿ ಹೇಳಿದರು. ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರವು 2023 ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್ಜಿಎ) ನಿರ್ಣಯದ ಮುಂದಾಳತ್ವ ವಹಿಸಿತು ಮತ್ತು ಭಾರತದ ಪ್ರಸ್ತಾಪವನ್ನು 72 ದೇಶಗಳು ಬೆಂಬಲಿಸಿದವು. ಮಾರ್ಚ್ 2021 ರಲ್ಲಿ ಯುಎನ್ಜಿಎ 2023 ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿತು. ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023 ಜನವರಿ 1, 2023 ರಂದು ಅಧಿಕೃತವಾಗಿ ಪ್ರಾರಂಭವಾಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತುರ್ತುನಿರ್ಗಮನ ರಕ್ಷಾಕವಚ ತೆರೆಯಲು ಯತ್ನಿಸಿದ ಪ್ರಯಾಣಿಕ, ಎಫ್‌ಐಆರ್‌ ದಾಖಲು.

Sun Jan 29 , 2023
      ಮುಂಬೈ: ನಾಗ್ಪುರದಿಂದ ಮುಂಬೈಗೆ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನವು ಇಳಿಯುವ ವೇಳೆ ತುರ್ತು ನಿರ್ಗಮನದ ರಕ್ಷಾಕವಚವನ್ನು ತೆರೆಯಲು ಪ್ರಯತ್ನಿಸಿದರು ಎಂದು ವಿಮಾನಯಾನ ಸಂಸ್ಥೆ ಭಾನುವಾರ ಹೇಳಿದೆ. ‘ರಕ್ಷಾಕವಚ ತೆರೆಯಲು ಪ್ರಯತ್ನಿಸಿದ ಪ್ರಯಾಣಿಕನ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಇಂಡಿಗೊ ಪ್ರಕಟಣೆಯಲ್ಲಿ ತಿಳಿಸಿದೆ. ‘ಪ್ರಯಾಣಿಕನ ನಡೆ ಗಮನಿಸಿದ ವಿಮಾನದ ಸಿಬ್ಬಂದಿ ಕಾಪ್ಟನ್‌ನನ್ನು ಎಚ್ಚರಿಸಿದ್ದಾರೆ. ಈ ಕುರಿತು ಉಳಿದ ಪ್ರಯಾಣಿಕರಿಗೂ ಎಚ್ಚರಿಕೆ […]

Advertisement

Wordpress Social Share Plugin powered by Ultimatelysocial