ಕಾಂತಾರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ.

ಬೆಂಗಳೂರು : ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾತ್ರಿ (ಫೆ 12) ಬೆಂಗಳೂರಿನ ರಾಜಭವನದಲ್ಲಿ ತಂಗಿದ್ದ ವೇಳೆ ದಿಗ್ಗಜ ನಟರು, ನಿರ್ಮಾಪಕರು ಕ್ರಿಕೆಟ್ ರಂಗದ ತಾರೆಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ವಿಶೇಷವಾಗಿ ಕಾಂತಾರ ಚಿತ್ರದ ನಟ , ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ರಾಕಿಂಗ್ ಸ್ಟಾರ್ ಯಶ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಔತಣ ಕೂಟಕ್ಕೆ ಆಹ್ವಾನಿಸಿದ್ದರು.

‘ಸ್ಫೂರ್ತಿದಾಯಕ ಭೇಟಿ ಪ್ರಧಾನಿ ನರೇಂದ್ರ ಮೋದಿ ಅವರು ನವ ಭಾರತ ಮತ್ತು ಪ್ರಗತಿಪರ ಕರ್ನಾಟಕವನ್ನು ರೂಪಿಸುವಲ್ಲಿ ಮನರಂಜನಾ ಉದ್ಯಮದ ಪಾತ್ರವನ್ನು ನಾವು ಚರ್ಚಿಸಿದ್ದೇವೆ.  ಉತ್ತಮ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಲು ಹೆಮ್ಮೆ ಪಡುತ್ತೇನೆ. ನಿಮ್ಮ ದೂರದೃಷ್ಟಿಯ ನಾಯಕತ್ವವು ನಮಗೆ ಸ್ಫೂರ್ತಿ ನೀಡುತ್ತದೆ ಮತ್ತು ನಿಮ್ಮ ಪ್ರೋತ್ಸಾಹ ಜಗತ್ತೇ ನಮ್ಮೊಂದಿಗೆ ಇದ್ದ ಹಾಗೆ’ ಎಂದು ಹೊಂಬಾಳೆ ಫಿಲ್ಮ್ಸ್ ಪರ ನಿರ್ಮಾಪಕ ವಿಜಯ್ ಕಿರಗಂದೂರು ಟ್ವೀಟ್ ಮಾಡಿದ್ದಾರೆ.

 ಪ್ರಧಾನಿ ಮೋದಿ ಅವರು ಕನ್ನಡ ಚಲನಚಿತ್ರ ರಂಗದದ ನಾಯಕರನ್ನು ಭೇಟಿ ಮಾಡಿ ಸಾಂಸ್ಕೃತಿಕ ಸನ್ನಿವೇಶ ಮತ್ತು ನವ ಭಾರತ ಮತ್ತು ಪ್ರಗತಿಪರ ಕರ್ನಾಟಕ ನಿರ್ಮಾಣಕ್ಕೆ ಅವರು ನೀಡಬಹುದಾದ ಕೊಡುಗೆಯ ಕುರಿತು ಚರ್ಚಿಸಿದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಟ್ವೀಟ್ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಲ್ಲು ಅರ್ಜುನ್ ಬಾಲಿವುಡ್ ಎಂಟ್ರಿ;

Mon Feb 13 , 2023
ಅಲ್ಲು ಅರ್ಜುನ್.. ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ಸ್ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಹೊಂದಿರುವ ನಟರು ಎಂದ ಕೂಡಲೇ ಕೇಳಿಬರುವ ಕೆಲವು ಹೆಸರುಗಳಲ್ಲಿ ಒಂದು. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ದೊಡ್ಡ ಮಟ್ಟದಲ್ಲಿ ಕ್ಲಿಕ್ ಆಗುವ ಮುನ್ನವೇ ದೇಶದಾದ್ಯಂತ ತನ್ನ ಅದ್ಭುತ ಡಾನ್ಸ್, ಉತ್ತಮ ನಟನೆ ಹಾಗೂ ಹಿಟ್ ಚಿತ್ರಗಳಿಂದ ಹೆಸರು ಮಾಡಿದ್ದ ನಟ. ವಿಜೇತ ಹಾಗೂ ಸ್ವಾತಿ ಮುತ್ಯಂ ಚಿತ್ರಗಳಲ್ಲಿ ಬಾಲ ನಟನಾಗಿ ನಟಿಸಿದ್ದ ಅಲ್ಲು ಅರ್ಜುನ್ 2003ರಲ್ಲಿ […]

Advertisement

Wordpress Social Share Plugin powered by Ultimatelysocial