ಸಚಿವ ಕೋಟ ಅವರಿಂದ ಪ್ರಧಾನಿ ಮೋದಿ ಭೇಟಿ; ಇಲಾಖೆ ಯೋಜನೆಗಳ ಕುರಿತು ಚರ್ಚೆ.

ನವದೆಹಲಿಯ ಸಂಸತ್ ಭವನದಲ್ಲಿಂದು ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೊಂದಿಗೆ ಭೇಟಿಯಾದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಪ್ರಧಾನಿಯವರಿಗೆ ಮತ್ಸ್ಯ ದೇವತೆ ಸ್ಮರಣಿಕೆ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ತಮ್ಮ ಇಲಾಖೆಯ ವಿವಿಧ ಯೋಜನೆಗಳು, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳ ಕುರಿತು ಪ್ರಧಾನಿಯವರಿಗೆ ವಿವರಿಸಲಾಯಿತು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.ಇಲಾಖೆಗೆ ಸಂಬಂಧಿಸಿದ ಕೇಂದ್ರದ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಕರಾವಳಿ ಭಾಗದಲ್ಲಿ ಕೈಗೊಂಡಿರುವ ಅಭಿವೃದ್ಧಿಯೋಜನೆಗಳು, ಮೀನುಗಾರರ ಕಲ್ಯಾಣ ಸಂಬಂಧಿತ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸೂಚನೆ ನೀಡುವುದಾಗಿ ಪ್ರಧಾನಿಯವರು ಭರವಸೆ ನೀಡಿದ್ದಾರೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾಯಿಧರಮ್ ತೇಜ್ ಅಭಿನಯದ 'ವಿರೂಪಾಕ್ಷ' ಚಿತ್ರದ ಟೈಟಲ್​ ಗ್ಲಿಂಪ್ಸ್​ ಬಿಡುಗಡೆ.

Wed Dec 14 , 2022
ಸುಪ್ರೀಂ ಹೀರೋ’ ಸಾಯಿಧರಮ್ ತೇಜ್ ಅಭಿನಯದ ಪ್ಯಾನ್-ಇಂಡಿಯಾ ಮಿಸ್ಟಿಕ್ ಥ್ರಿಲ್ಲರ್ ಚಿತ್ರಕ್ಕೆ ‘ವಿರೂಪಾಕ್ಷ’ ಎಂಬ ಹೆಸರಿಡಲಾಗಿದ್ದು, ಟೈಟಲ್ ಗ್ಲಿಂಪ್ಸ್ ಬಿಡುಗಡೆಯಾಗಿದೆ.’ವಿರೂಪಾಕ್ಷ’ ಚಿತ್ರವನ್ನು ಸುಕುಮಾರ್ ರೈಟಿಂಗ್ಸ್ ಸಹಯೋಗದಲ್ಲಿ ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಎಲ್‌ಎಲ್‌ಪಿ ನಿರ್ಮಿಸುತ್ತಿದೆ. ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಬಿ.ವಿ.ಎಸ್.ಎನ್. ಪ್ರಸಾದ್ ನಿರ್ಮಿಸಿದರೆ, ಬಾಪಿನೀಡು ಪ್ರಸ್ತುತಪಡಿಸಿದ್ದಾರೆ.ಇದು 1990ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು, ಕಾಡಿಗೆ ಅಂಟಿಕೊಂಡಿರುವ ಹಳ್ಳಿಯೊಂದರಲ್ಲಿ ಮೂಢನಂಬಿಕೆಗಳ ಹೆಸರಿನಲ್ಲಿ ನಡೆಯುವ ಕೆಲವು ವಿಲಕ್ಷಣ ಘಟನೆಗಳನ್ನು ನಾಯಕ ಹೇಗೆ ನಿಭಾಯಿಸುತ್ತಾನೆ […]

Advertisement

Wordpress Social Share Plugin powered by Ultimatelysocial