ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ

ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ
ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ
ಕರಿಗೆಜ್ಜೆ ಕುಣಿಸುತ್ತ ಕಣ್ಣೀರ ಮಿಡಿಯುತ್ತ
ಇರುಳಾಕೆ ಬಂದಳು ದೀಪ ಹಚ್ಚ
ಬಾನಿನಂಗಳದಲ್ಲಿ ಚುಕ್ಕಿ ಹೊಳೆ ಬೆಸೆವಂತೆ
ನನ್ನ ಮನದಂಗಳದೀ ದೀಪ ಹಚ್ಚ
ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ
ಹಳೆ ಬಾಳು ಸತ್ತಿತ್ತು ಕೊಳೆ ಬಾಳು ಸುಟ್ಟಿತ್ತು
ಹೊಸ ಬಾಳು ಹುಟ್ಟಿತ್ತು ದೀಪ ಹಚ್ಚ
ಪ್ರೀತಿಯ ರತಿಗೆ ನೀ ಬೆಳಕಿನ ಆರತಿ
ಬೆಳಗಿ ಕಣ್ಣಾರತಿ ದೀಪ ಹಚ್ಚ
ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ
ವಿಷ್ಣುಮೋಹಿತ ಚರಣ ವಿವಿಧ ವಿಶ್ವಾಭರಣ
ಆನಂದದ ಕಿರಣ ದೀಪ ಹಚ್ಚ
ನೀನೆಂಬ ಜ್ಯೋತಿಯಲಿ ನಾನೆಂಬ ಪತಂಗ
ಸೋತ ಉಲಿ ಏಳಲಿ ದೀಪ ಹಚ್ಚ
ನನ್ನಂತರಂಗದಿ ನಂದದೆ ನಿಂದೀಪ
ನಂದಾದೀಪವಾಗಿರಲಿ ದೀಪ ಹಚ್ಚ
ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚ
ನಲ್ಲೆ ನೀ ಬಂದಂದು ಕಣ್ಣಾರೆ ಕಂಡಂದು
ಮನೆಯೆಲ್ಲ ಹೊಳೆದಂತೆ ದೀಪ ಹಚ್ಚ
ಸಾಹಿತ್ಯ: ಪರಮೇಶ್ವರ ಭಟ್ಟರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀವು ತುಂಬಾ ಕೆಂಪು ಮಾಂಸವನ್ನು ತಿನ್ನುತ್ತಿದ್ದೀರಾ?

Fri Mar 4 , 2022
ಕೆಂಪು ಮಾಂಸವು ಮಾಂಸದ ಕೊಬ್ಬಿನ ಕಟ್ ಆಗಿದ್ದು ಅದು ಗಾಢ ಬಣ್ಣವನ್ನು ಹೊಂದಿರುತ್ತದೆ. ಇವು ವಿನ್ಯಾಸದಲ್ಲಿ ಸಮೃದ್ಧವಾಗಿವೆ ಮತ್ತು ಅವುಗಳಿಗೆ ‘ಗೇಮಿ’ ರುಚಿಯನ್ನು ಹೊಂದಿರುತ್ತವೆ. ಜನಪ್ರಿಯವಾಗಿ ಸೇವಿಸುವ ಕೆಲವು ಕೆಂಪು ಮಾಂಸಗಳು ಒಳಗೊಂಡಿರಬಹುದು: ಗೋಮಾಂಸ ಮೇಕೆ ಹಂದಿಮಾಂಸ ಜಿಂಕೆ ಮಾಂಸ ಕುರಿಮರಿ ಮಾಂಸ ಪ್ರಿಯರಲ್ಲಿ ತಮ್ಮ ಶ್ರೀಮಂತ ಸುವಾಸನೆಯಿಂದಾಗಿ ಜನಪ್ರಿಯ ಆಹಾರದ ಆಯ್ಕೆಯಾಗಿದ್ದರೂ, ಆರೋಗ್ಯದ ಮೇಲೆ ಈ ರೀತಿಯ ಮಾಂಸದ ಪ್ರಭಾವವು ಹೆಚ್ಚು ಚರ್ಚೆಯಾಗಿದೆ. ಮಧ್ಯಮ ಸೇವನೆಯನ್ನು ಶಿಫಾರಸು ಮಾಡಲಾಗಿದ್ದರೂ, […]

Advertisement

Wordpress Social Share Plugin powered by Ultimatelysocial