ಬೆಂಗಳೂರು ಗಾರ್ಡನ್ ಸಿಟಿಯಿಂದ ಗಾಂಜಾ ಸಿಟಿ ಆಗಿದೆ;

ಬೆಂಗಳೂರು ಮುಂಚೆ ಗಾರ್ಡನ್ ಸಿಟಿ ಆಗಿತ್ತು.ಆಮೇಲೆ ಗಾರ್ಬೇಜ್ ಸಿಟಿ ಆಯಿತು. ಆದರೆ ಈಗ ಬೆಂಗಳೂರು ಈಗ ಗಾಂಜಾ ಸಿಟಿ ಆಗಿದೆ ಎಂದು ಪ್ರಿಯಾಂಕ್ ಖರ್ಗೆ (Priyank Kharge) ರಾಜ್ಯ ಸರ್ಕಾರದ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದಾರೆ. ಇದನ್ನು ನಾವು ಹೇಳುತ್ತಿಲ್ಲ, ವರದಿ ಹೇಳುತ್ತಿದೆ.
ಬೆಂಗಳೂರು ಈಗ ಐಸಿಯುನಲ್ಲಿದೆ. ಬೆಂಗಳೂರಿನ (Bengaluru News) ಪರಿಸ್ಥಿತಿ ಕೆಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಾಗ ದುರಸ್ತಿಗೊಳಿಸಿದ್ದ ರಸ್ತೆಯೇ ಕುಸಿದು‌ ಹೋಯ್ತು. ಡಾಂಬರ್ ಒಂದೇ ದಿನಕ್ಕೆ ಕಿತ್ತು ಹೋಯ್ತು. ಇಂದು ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಂದ ಸಾವು ಸಂಭವಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಬೆಂಗಳೂರಿನ ಮೂಲಸೌಕರ್ಯಗಳ ಕೊರತೆಯ ಲಾಭವನ್ನು ದೆಹಲಿ, ಮುಂಬೈ, ಚೆನ್ನೈ ಪಡೆಯುತ್ತಿವೆ. ದೆಹಲಿಯಲ್ಲಿ 5 ಸಾವಿರ ಸ್ಟಾರ್ಟ್​ಅಪ್ಸ್ ಪ್ರಾರಂಭವಾಗಿವೆ. ಬೆಂಗಳೂರಿನಲ್ಲಿ ಕೇವಲ 4,500 ಸ್ಟಾರ್ಟ್ ಅಪ್ ಆರಂಭವಾಗಿದೆ. ಬೆಂಗಳೂರಿನ ಐಟಿ ಹಬ್ ಎಲ್ಲಿಗೆ ಹೋಗ್ತಿದೆ? ಎಂದು ಅವರು ಟೀಕಿಸಿದ್ದಾರೆ.
ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ಸ್ ವರದಿ ಉಲ್ಲೇಖಿಸಿ ಟೀಕೆ
ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ಸ್ ಜಾಗತಿಕ ಜೀವನಯೋಗ್ಯ ಸೂಚ್ಯಂಕ 2022ರ ವರದಿಯಲ್ಲಿ ವಿಶ್ವದ 173 ನಗರಗಳ ಪಟ್ಟಿಯಲ್ಲಿ ಭಾರತದ ಪ್ರಮುಖ ಐದು ನಗರಗಳು 140ರಿಂದ 146 ಶ್ರೇಯಾಂಕದಲ್ಲಿ ಸ್ಥಾನ ಪಡೆದಿವೆ. ಈ ಪೈಕಿ ಅತಿ ಕಳಪೆ ಸ್ಥಾನ (146) ಬೆಂಗಳೂರಿನದ್ದಾಗಿದೆ. ಕಳೆದ ವರ್ಷ ನಡೆದ ಅಧ್ಯಯನದಲ್ಲಿ ಬೆಂಗಳೂರು ಐಟಿ ಕ್ಷೇತ್ರದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿತ್ತು. ಆದರೆ ಈ ವರ್ಷ ಜೀವನಯೋಗ್ಯ ಮೂಲಸೌಕರ್ಯ ಸೂಚ್ಯಂಕದಲ್ಲಿ ಕಳಪೆ ಸ್ಥಾನ ಪಡೆದಿದೆ. ಐದು ಮಾನದಂಡಗಳ ಮೇಲೆ ಸ್ಥಾನ ನೀಡಲಾಗುತ್ತದೆ. ಅವುಗಳೆಂದರೆ ಸ್ಥಿರತೆ, ಆರೋಗ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಪರಿಸರ, ಮೂಲಭೂತ ಸೌಕರ್ಯ. ಆದರೆ ಬೆಂಗಳೂರು ಈ ವರದಿಯಲ್ಲಿ ಕುಸಿತ ಕಂಡಿದೆ. ಇದಕ್ಕೆ ಬೊಜೆಪಿ ಸರ್ಕಾರವೇ ಹೊಣೆ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.
ಬಿಜೆಪಿಯವರು ಕರಾಚಿಗೆ ಹೋಗಿ ಕಲಿಯಲಿ
ನಾವು ಚೆನ್ನೈಗಿಂತ ಗುಣಮಟ್ಟದಲ್ಲಿ ಕೆಳಗೆ ಹೋಗಿದ್ದೇವೆ. ಮಾತೆತ್ತಿದರೆ ಪಾಕಿಸ್ತಾನತ್ತಿ ಹೋಗಿ ಅಂತಾರೆ. ಆದರೆ ಕರಾಚಿ ಬೆಂಗಳೂರಿಗಿಂತ ಉತ್ತಮ ಎಂದು ವರದಿ ಹೇಳಿದೆ. ಬಿಜೆಪಿಯವರು ಕರಾಚಿಗೆ ಹೋಗಿ ಕಲಿಯಲಿ ಎಂದು ರಾಮಲಿಂಗಾರೆಡ್ಡಿ ವ್ಯಂಗ್ಯದ ಚಾಟಿ ಬೀಸಿದ್ದಾರೆ.
ಬೆಂಗಳೂರಿನಲ್ಲಿ ಮೂಲಸೌಕರ್ಯಗಳೇ ಕುಸಿದಿವೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ, ನಮ್ಮ ರಾಜ್ಯಕ್ಕೆ ಉದ್ಯಮಿಗಳು‌ ಬರ್ತಿಲ್ಲ. ಮೂಲಸೌಕರ್ಯ ಸರಿಯಿಲ್ಲ ಅಂತ ಕಿರಣ್ ಮುಜುಂದಾರ್ ಕೂಡ ಹೇಳಿದ್ದಾರೆ. ಅವರೇನು ರಾಜಕಾರಣಿಗಳೆ? ಅವರು ಬೆಂಗಳೂರಿನ ಉತ್ತಮ ರಾಯಭಾರಿ. ಅವರೇ ಧ್ವನಿ ಎತ್ತಿದರೂ ಸರ್ಕಾರ ಗಮನಹರಿಸಿಲ್ಲ. ಬೆಂಗಳೂರಿನಲ್ಲಿ ಮೂಲಸೌಕರ್ಯಗಳೇ ಕುಸಿದಿವೆ. ಇದಕ್ಕೆಲ್ಲ ಕಾರಣ ಮೂರು ವರ್ಷದ ಬಿಜೆಪಿ‌ ಸರ್ಕಾರ ಎಂದು ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.
ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ; ಸಿ.ಟಿ.ರವಿ ಟೀಕೆ
ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ಮುಂದು ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಉಲ್ಟಾ ಮಚ್ಚೆ ಇದೆ. ಖಾಲಿ ಡಬ್ಬ ಜಾಸ್ತಿ ಸೌಂಡ್ ಮಾಡುತ್ತೆ ಎಂದು ವ್ಯಂಗ್ಯ ಮಾಡಿದರು.
ಗೋವಾದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯೋದು ಏನಾಯ್ತು..? ಯುಪಿಯಲ್ಲಿ ಏನಾಯ್ತು, ಮೇ ಲಡಕೀ ಹೂ, ಲಡ್ ಸಕ್ತಾಹೂ ಅಂದ್ರು. ಏನಾಯ್ತು, ನಿಂತ ಸ್ಥಾನಗಳೆಷ್ಟು ಗೆದ್ದ ಸೀಟುಗಳೆಷ್ಟು? ಸಿದ್ದರಾಮಯ್ಯ ಹೇಳೋದೆಲ್ಲಾ ಉಲ್ಟಾ ಆಗುತ್ತೆ ಎಂದು ಲೇವಡಿ ಮಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಪ್ ಅನ್ನು ಧಿಕ್ಕರಿಸಿದ ಶಿವಸೇನೆಯ ಶಾಸಕ ಆದಿತ್ಯ ಠಾಕ್ರೆ

Mon Jul 4 , 2022
  ಮುಂಬೈ: ಇಂದು ನಡೆದ ಬಲಾಬಲ ಪರೀಕ್ಷೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಮತ ಹಾಕಲು ನೀಡಲಾಗಿದ್ದ ವಿಪ್ ಅನ್ನು ಧಿಕ್ಕರಿಸಿದ ಶಿವಸೇನೆಯ ಶಾಸಕ ಆದಿತ್ಯ ಠಾಕ್ರೆ ಅನರ್ಹತೆಗೆ ಗುರಿಯಾಗುವ ಸಾಧ್ಯತೆ ಇದೆ. ಎರಡು ವಾರಗಳ ಹಿಂದೆ ಆದಿತ್ಯ ಅವರ ತಂದೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಪಕ್ಷದ ಮುಖ್ಯಸ್ಥರಾಗಿ ಆಗ ಏಕನಾಥ್ ಶಿಂಧೆ ಹಾಗೂ ಇತರ ಬಂಡಾಯ ಶಾಸಕರನ್ನು ಅನರ್ಹಗೊಳಿಸಲು ನೋಟಿಸ್ ಕಳುಹಿಸಿದ್ದರು. ಏಕನಾಥ್ ಶಿಂಧೆ ಸರಕಾರಕ್ಕೆ ಮತ […]

Advertisement

Wordpress Social Share Plugin powered by Ultimatelysocial