ಮಗುವಿನ ಚಿತ್ರ ಹಂಚಿಕೊಂಡು ಸತ್ಯ ಹೊರಹಾಕಿದ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಅನ್ನು ವಿವಾಹವಾಗಿ ವಿದೇಶದಲ್ಲಿಯೇ ಸೆಟಲ್ ಆಗಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಈ ದಂಪತಿ ಪೋಷಕರಾಗಿದ್ದಾರೆ.

ಸೆರೊಗಸಿ ಮಾದರಿ ಮೂಲಕ ಪ್ರಿಯಾಂಕಾ ಹಾಗೂ ನಿಕ್ ದಂಪತಿ ತಂದೆ ತಾಯಿ ಆಗಿದ್ದಾರೆ. ತಾವು ಸೆರೊಗಸಿ ಮಾದರಿ ಮೂಲಕ ತಾಯಿಯಾದ ವಿಷಯವನ್ನು ಪ್ರಿಯಾಂಕಾ ಚೋಪ್ರಾ ಜನವರಿ 15 ರಂದು ಘೋಷಿಸಿದ್ದರು.

ಇದೀಗ ಮೊದಲ ಬಾರಿಗೆ ತಮ್ಮ ಮಗಳ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಗಳನ್ನು ಎದೆಗೆ ಅಪ್ಪಿಕೊಂಡಿರುವ ಚಿತ್ರವನ್ನು ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಮಗು ಎದುರಿಸಿದ ಸಂಕಷ್ಟ, ತಾವು ಅನುಭವಿಸಿದ ಆತಂಕಕಗಳ ಬಗ್ಗೆಯೂ ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

”ಕಳೆದ ಕೆಲ ದಿನಗಳ ನಾವು ತೀವ್ರ ಭಾವತೀವ್ರತೆಯ ಏರು-ಇಳುವಿನ ಹಾದಿಯಲ್ಲಿ ಪಯಣಿಸಿದ್ದೇವೆ. ಅದನ್ನು ಈ ತಾಯಂದಿರ ದಿನದಂದು ನೆನಪು ಮಾಡಿಕೊಳ್ಳುತ್ತಿದ್ದೇನೆ. ನಾನು ಅನುಭವಿಸಿದ ಕಷ್ಟವನ್ನು ಸಾಕಷ್ಟು ಮಂದಿ ಅನುಭವಿಸಿರುತ್ತಾರೆ” ಎಂದು ಬರೆದುಕೊಂಡಿದ್ದಾರೆ ಪ್ರಿಯಾಂಕಾ ಚೋಪ್ರಾ.

”ಕಳೆದ 100 ದಿನಗಳಿಂದ ಐಸಿಯುನಲ್ಲಿದ್ದ ನನ್ನ ಪುಟ್ಟ ಮಗಳು ಕೊನೆಗೂ ಮನೆಗೆ ಬಂದಿದ್ದಾಳೆ. ಈ ರೀತಿಯ ಸನ್ನಿವೇಶದಲ್ಲಿ ಪ್ರತಿ ಕುಟುಂಬದ ಪಯಣ ಬೇರೆಯದ್ದೇ ರೀತಿಯದ್ದಾಗಿರುತ್ತದೆ. ಈ ರೀತಿಯ ಸನ್ನಿವೇಶಗಳ ಪರಸ್ಪರ ನಂಬಿಕೆ, ಧೈರ್ಯವನ್ನು ಬೇಡುತ್ತವೆ. ಕಳೆದ ಕೆಲವು ತಿಂಗಳುಗಳು ನಮಗೆ ಬಹಳ ಸವಾಲಿನದ್ದಾಗಿದ್ದವು. ಪ್ರತಿ ನಿಮಿಷ, ಕ್ಷಣ ನಮಗೆ ಬಹಳ ಕಠಿಣವಾಗಿದ್ದವು ಮತ್ತು ಬಹಳ ಪ್ರಾಮುಖ್ಯತೆಯಿಂದ ಕೂಡಿದ್ದವು” ಎಂದಿದ್ದಾರೆ ಪ್ರಿಯಾಂಕಾ.

”ನಮ್ಮ ಪುಟ್ಟ ಮಗಳು ಕೊನೆಗೂ ಮನೆಗೆ ಬಂದಿರುವುದು ನಮಗೆ ಅತೀವ ಸಂತಸ ತಂದಿದೆ. ಲಾಸ್ ಎಂಜಲ್ಸ್‌ನ ರಾಡಿ ಚಿಲ್ಡಡ್ರನ್ಸ್ ಲಾ ಜೊಲ್ಲಾ ಹಾಗೂ ಸೆಡರ್ ಸಿನೈನ ಪ್ರತಿಯೊಬ್ಬ ವೈದ್ಯರಿಗೂ, ದಾದಿಯರಿಗೂ, ತಜ್ಞರಿಗೆ ಧನ್ಯವಾದ ಹೇಳುತ್ತೇನೆ. ಇವರು ನಿಸ್ವಾರ್ಥಿಗಳಾಗಿ ನಮಗೆ ಸಹಾಯ ಮಾಡಿದರು” ಎಂದು ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ ಪ್ರಿಯಾಂಕಾ.

”ಮಗಳು ಮನೆಗೆ ಬಂದಾಗಿದೆ. ಈಗ ನಮ್ಮ ಎರಡನೇ ಅಧ್ಯಾಯ ಪ್ರಾರಂಭವಾಗುತ್ತದೆ. ನಮ್ಮ ಮಗಳು ಬಹಳ ಗಟ್ಟಿಗಿತ್ತಿ. ಅಪ್ಪ-ಅಮ್ಮನಾದ ನಾವು ಆಕೆಯನ್ನು ಬಹಳ ಇಷ್ಟಪಡುತ್ತೇವೆ. ನನ್ನ ಜೀವನದಲ್ಲಿ ಬಂದ ಎಲ್ಲ ತಾಯಂದಿರಿಗೂ, ಕೇರ್‌ ಟೇಕರ್‌ಗಳಿಗೂ ತಾಯಂದಿರ ದಿನದ ಶುಭಾಶಯಗಳು” ಎಂದಿರುವ ಪ್ರಿಯಾಂಕಾ, ಪತಿ ನಿಕ್ ಜೋನಸ್‌ ಕುರಿತು, ”ನನ್ನನ್ನು ಅಮ್ಮನನ್ನಾಗಿ ಮಾಡಿದ್ದಕ್ಕೆ ಧನ್ಯವಾದ” ಎಂದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ಬರ್ತ್​ಡೇ ಆಚರಣೆ;

Mon May 9 , 2022
  Ira Khan Birthday: ಇರಾ ಖಾನ್​ ಅವರು ಹುಟ್ಟುಹಬ್ಬ ಆಚರಿಸಿಕೊಂಡ ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ.ಬಾಲಿವುಡ್​ನ ಖ್ಯಾತ ನಟ ಆಮಿರ್ ಖಾನ್​ಅವರ ಪುತ್ರಿ ಇರಾ ಖಾನ್​ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕುಟುಂಬದವರು, ಸ್ನೇಹಿತರು ಹಾಗೂ ಪ್ರಿಯಕರನ ಜೊತೆ ಪ್ರತ್ಯೇಕವಾಗಿ ಕೇಕ್​ ಕಟ್​ ಮಾಡುವ ಮೂಲಕ ಅವರು ಜನ್ಮದಿನವನ್ನು ಸೆಲೆಬ್ರೇಟ್​ ಮಾಡಿಕೊಂಡಿದ್ದಾರೆ. ಈ ಸಂದರ್ಭದ ಕೆಲವು ಫೋಟೋಗಳು ಇಂಟರ್​ನೆಟ್​ನಲ್ಲಿ […]

Advertisement

Wordpress Social Share Plugin powered by Ultimatelysocial