ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪ್ರಭುದೇವ. ಸಂದೇಶ್ ಪ್ರೊಡಕ್ಷನ್ಸ್ ನಿಂದ ನಿರ್ಮಾಣ..

ಕನ್ನಡ ಚಿತ್ರರಂಗಕ್ಕೆ ಸದಭಿರುಚಿ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಮತ್ತೊಂದು ಅದ್ದೂರಿ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗುತ್ತಿದೆ. ಬಹುಭಾಷಾ ನಟ, ಇಂಡಿಯನ್ ಮೈಕಲ್ ಜಾಕ್ಸನ್ ಅಂತಲೇ ಪ್ರಸಿದ್ದರಾಗಿರುವ ಪ್ರಭುದೇವ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಕೃಷ್ಣ ಸೇರಿದಂತೆ ಸಾಕಷ್ಟು ಖ್ಯಾತ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅವರು ಅರ್ಪಿಸುತ್ತಿರುವ ಈ ಚಿತ್ರವನ್ನು ಸಂದೇಶ್ ಎನ್ ನಿರ್ಮಿಸುತ್ತಿದ್ದಾರೆ. ಇದು ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆಯ 31 ನೇ ಚಿತ್ರ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ಬರಲಿದೆ.

ವಿನಿ ವೆಂಕಟೇಶ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಜುಲೈ 5 ರಿಂದ ಆರಂಭವಾಗಲಿದೆ. ಅಂಡಮಾನ್, ನಿಕೋಬಾರ್, ಬೆಂಗಳೂರು, ಚೆನ್ನೈ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಅಂಬರೀಶನ್ ಈ ನೂತನ ಸಂಗೀತ ನೀಡಲಿದ್ದಾರೆ. ಶೀರ್ಷಿಕೆ ಅನಾವರಣ ಸದ್ಯದಲ್ಲೇ ನಡೆಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಟ್ಲರ್ಗೆ ʼಆರೆಂಜ್ ಕ್ಯಾಪ್ʼ, ಚಹಲ್ಗೆ ʼಪರ್ಪಲ್ ಕ್ಯಾಪ್ʼ: ಉಮ್ರಾನ್ ಮಲ್ಲಿಕ್ ʼಎಮರ್ಜಿಂಗ್ ಪ್ಲೇಯರ್ʼ

Mon May 30 , 2022
ಕಳೆದ ಎರಡು ತಿಂಗಳ ಕಾಲ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಅದ್ದೂರಿ ತೆರೆಬಿದ್ದಿದೆ. ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಗುಜರಾತ್ ಟೈಟನ್ಸ್ 2022ರ ಐಪಿಎಲ್ ಚಾಂಪಿಯನ್ ಎನಿಸಿದರೆ. ಸೀಸನ್ ಉದ್ದಕ್ಕೂ ಮಿಂಚಿದ ಹಲವು ಆಟಗಾರರು ವಿವಿಧ ಪ್ರಶಸ್ತಿಗಳನ್ನ ಪಡೆದು ಮಿಂಚಿದರು. BUTTLER, IPL 2022ಬಟ್ಲರ್ಗೆ ʼಆರೆಂಜ್ ಕ್ಯಾಪ್ʼ: 2022ರ ಐಪಿಎಲ್ನಲ್ಲಿ ಅದ್ಭುತ ಬ್ಯಾಟಿಂಗ್ನಿಂದ ಮಿಂಚಿದ ಜಾಸ್ ಬಟ್ಲರ್, 15ನೇ ಆವೃತ್ತಿಯ […]

Advertisement

Wordpress Social Share Plugin powered by Ultimatelysocial