ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳ ಅರಿವಿಗೆ ಸಮಾವೇಶ

ಅರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯವ್ಯಾಪ್ತಿ 22 ಜಿಲ್ಲೆಗಳಲ್ಲಿ ಜಾಗೃತಿ ಸಮಾವೇಶಗಳನ್ನು ಆಯೋಜಿಸಲಾಗಿದೆ ಎಂದು ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಜೆ. ಕೆನಡಿ ಶಾಂತಕುಮಾರ್ ಅವರು ತಿಳಿಸಿದರು.ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಕಲ್ಯಾಣ ಕಾರ್ಯಕ್ರಮಗಳ ಜಾಗೃತಿ ಮತ್ತು ಯೋಜನೆಗಳ ಅರಿವು ಮೂಡಿಸಲು ರಾಜ್ಯ ಪ್ರವಾಸ ಮಾಡಲಾಗುತ್ತಿದೆ ಎಂದರು.ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ, ಕೊಪ್ಪಳಗಳಲ್ಲಿ ಸುಮಾರು 200ವರ್ಷಗಳ ಹಳೆಯದಾದ ಚರ್ಚುಗಳು ಜೀರ್ಣೋದ್ಧಾರವಿಲ್ಲದೆ ನಶಿಸುತ್ತಿರುವುದನ್ನು ಗಮನಿಸಿದ ಸರ್ಕಾರ ಚರ್ಚ್ಗಳ ನವೀಕರಣ ಕಾರ್ಯ ಕೈಗೊಂಡಿದೆ. ಕ್ರಿಶ್ಚಿಯನ್‌ರಿರುವ ಪ್ರದೇಶಗಳಲ್ಲಿ ವಿವಾಹ ಹಾಗೂ ಹಲವು ಕಾರ್ಯಕ್ರಮಗಳು ಕಡಿಮೆ ವೆಚ್ಚದಲ್ಲಿ ಮಾಡಲುವ ಉದ್ದೇಶದಿಂದ ಸರ್ಕಾರ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿದೆ. 100 ವರ್ಷ ಮೇಲ್ಪಟ್ಟ ಚರ್ಚ್ಗಳ ಅಭಿವೃದ್ಧಿಗೆ ರೂ.50ಲಕ್ಷ ನೀಡಲಾಗುತ್ತಿದೆ ಹಾಗೂ ವಿದೇಶಗಳಲ್ಲಿ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಅನುದಾನ ನೀಡಲಾಗುತ್ತಿದೆ. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ರೇಷ್ಮೆ, ಪಶು ಸಂಗೊAಪನಾ ಇಲಾಖೆ ಸೇರಿದಂತೆ ಸರ್ಕಾರದ 13 ಇಲಾಖೆಗಳಲ್ಲಿ ಶೇ.8ರಷ್ಟು ಮಿಸಲಾತಿ ನೀಡಿದೆ ಎಂದರು.ಜಿಲ್ಲಾ ವ್ಯಾವಸ್ಥಪಕ ಸೈಯದ್ ನಜಿಮ್, ಅಲ್ಪಾ ಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಮಠದ ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಧು-ವರರ ವಯ್ಯಾರದ ಫೋಟೋ.

Sat Jan 14 , 2023
ಮದುವೆಯ ಫೋಟೋಶೂಟ್‌ಗಳನ್ನು ನೀವು ಆಗಾಗ್ಗೆ ನೋಡಿದ್ದೀರಿ. ಆದರೆ ಕಲಾವಿದ ಜಯೇಶ್ ಸಚ್ ದೇವ್ ತಮ್ಮ ಕಲೆಯಲ್ಲಿ ವಧು-ವರರನ್ನು ಪ್ರಾಣಿಗಳ ರೂಪದಲ್ಲಿ ತೋರಿಸಿದ್ದಾರೆ. ಜಯೇಶ್ ಸಚ್‌ದೇವ್ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಸರಣಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಚಿಂಪಾಂಜಿಯನ್ನು ಸುಂದರ ವಧುವಿನ ಗೆಟಪ್‌ನಲ್ಲಿ ತೋರಿಸಿದ್ದಾರೆ.ಜಯೇಶ್ ಸಚ್‌ದೇವ್ ಈ ಚಿತ್ರದ ಸಾಂಪ್ರದಾಯಿಕ ಪಾತ್ರವನ್ನು ಸಾಂಪ್ರದಾಯಿಕ ನೋಟದಲ್ಲಿ ತೋರಿಸಿದ್ದಾರೆ. ನೀಲಿ ಬಣ್ಣದ ಉಡುಪಿನಲ್ಲಿ ಚಿನ್ನದ ಆಭರಣಗಳನ್ನು ತೊಡಿಸಿದಂತೆ ತೋರಿಸಿದ್ದಾರೆ.  ಕಲಾವಿದರು ಛಾಯಾಗ್ರಹಣದೊಂದಿಗೆ ದೃಶ್ಯ ಕಲೆಗಳನ್ನು […]

Advertisement

Wordpress Social Share Plugin powered by Ultimatelysocial