ಅಪ್ಪುವನ್ನು ಕಳೆದುಕೊಂಡ ದುಖಃ, ನೋವಿನಲ್ಲೇ ಬದುಕುತ್ತಿದ,ಶಿವರಾಜ್ ಕುಮಾರ್;

ಅಪ್ಪು ನಿಧನ ನೆನೆಸಿಕೊಂಡಾಗೆಲ್ಲ ನಮ್ಮ ಧ್ವನಿಯೇ ಬದಲಾಗುತ್ತದೆ. ಆ‌ ನೋವನ್ನು ಸಂಪೂರ್ಣವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಆ ನೋವಿನ ಜೊತೆಗೆ ಬದುಕುತ್ತಿದ್ದೇವೆ. ಮುಂದೆಯು ನೋವಿನ ಜೊತೆಗೆ ಬದುಕುತ್ತೇವೆ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪುವಿನದು ಅದ್ಭುತವಾದ ಆತ್ಮ. ಹೀಗಾಗಿಯೇ ಅಪ್ಪುವನ್ನು ಜನ ಈಗಲೂ ನೆನಪಿಸಿಕೊಂಡು ಇಷ್ಟಪಡುತ್ತಾರೆ. ಅಪ್ಪು ಗಳಿಸಿರುವ ಈ ಪ್ರೀತಿ ಕಂಡು ನನಗೆ ಹೆಮ್ಮೆಯಾಗುತ್ತಿದೆ. ಮೈಸೂರಿನ ಶಕ್ತಿಧಾಮಕ್ಕೆ ಇತ್ತೀಚಿನ ದಿನಗಳಲ್ಲಿ ನಾನು ಹೆಚ್ಚಾಗಿ ಬರುತ್ತಿದ್ದೇನೆ. ಇದರಿಂದ ನಮ್ಮ ಮನಸ್ಸುಗಳಿಗೂ ಒಂದು ಬದಲಾವಣೆ ಆಗುತ್ತದೆ. ಮಕ್ಕಳಿಗೂ ಹೊಸ ಅನುಭವ ಆಗುತ್ತದೆ ಎಂದರು.

ಗೀತಾ ಶಿವರಾಜಕುಮಾರ್ ಈಗ ಇದರ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಇದರ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಮೊನ್ನೆ ಶಕ್ತಿಧಾಮದ ಮಕ್ಕಳು ಇಷ್ಟ ಪಟ್ಟರೆಂದು ನಾನೇ ಡ್ರೈವ್ ಮಾಡಿಕೊಂಡು ಶೂಟಿಂಗ್ ಸ್ಪಾಟ್‌ಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಸ್ಕೂಲ್ ತೆರೆಯಲು ನಮಗೆ ಅನುಮತಿ ಸಿಗುತ್ತಿದೆ. ಆ ಕೆಲಸವು ಬೇಗನೆ ಆಗುತ್ತದೆ ಎಂದರು.

ಭರವಸೆಯಿದೆ: ಸಿನಿಮಾ ಮಂದಿರಗಳಿಗೆ ಕೋವಿಡ್ 50:50 ರೂಲ್ಸ್ ಮುಂದುವರಿದಿರುವ ಹಿನ್ನೆಲೆಯಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, ನಿನ್ನೆಯಷ್ಟೇ ಕೂಡ ನಾನು ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ನಾವು ಕೊರೊನಾದ ಜೊತೆ ಜೊತೆಗೆ ಬದುಕಬೇಕಿದೆ. ಅದರ ಜೊತೆಗೆ ಬದುಕಬೇಕಾದ ಅನಿವಾರ್ಯತೆಯೂ ಇದೆ. ಎಲ್ಲ ಕ್ಷೇತ್ರಗಳಿಗೂ 50:50 ರೂಲ್ಸ್ ನಿಂದ ರಿಲ್ಯಾಕ್ಸ್ ಕೊಡಲಾಗಿದೆ. ಆದರೆ ಸಿನಿಮಾ ಮಂದಿರಗಳಿಗೆ ಯಾಕೆ ಕೊಟ್ಟಿಲ್ಲ ಎಂದು ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ. ಮುಖ್ಯಮಂತ್ರಿಗಳು ನಮಗೆ ಸಾಕಷ್ಟು ಬಾರಿ ಅನುಕೂಲ ಮಾಡಿಕೊಟ್ಟಿದ್ದಾರೆ. ಈಗಲೂ ನಮಗೆ ಅನುಕೂಲ ಮಾಡಿಕೊಡುವ ಭರವಸೆ ಇದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಧಾನಿ ಮೋದಿ:ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಕುಟುಂಬದೊಂದಿಗೆ ಭೇಟಿ ನೀಡಿ;

Sun Jan 30 , 2022
ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜ್ಯೋತಿ ಜವಾನ್ ನಲ್ಲಿನ ಉರಿಯುವ ದೀಪವನ್ನು ರಾಷ್ಟ್ರೀಯ ಯುದ್ಧ ಸ್ಮಾರಕ ದೀಪ ಜೊತೆ ಸೇರಿಸಿ ಉರಿಸುವ ಕಾರ್ಯ ನಡೆದಿದೆ. ಈ ಭಾವನಾತ್ಮಕ ಕ್ಷಣಕ್ಕೆ ದೇಶದ ನಾಗರಿಕರು ಮತ್ತು ಹುತಾತ್ಮ ಯೋಧರ ಕುಟುಂಬಸ್ಥರು ಕಣ್ಣೀರು ಹಾಕಿದ್ದನ್ನು ಕಂಡಿದ್ದೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 2022ರ ಆರಂಭದ ತಿಂಗಳು ತಮ್ಮ ಆಕಾಶವಾಣಿಯ ಮನದ ಮಾತು ಸರಣಿ ಭಾಷಣ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿರುವ […]

Advertisement

Wordpress Social Share Plugin powered by Ultimatelysocial