ಪುಷ್ಟ ಸಿನಿಮಾ ನಂತರ ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ …

ರಶ್ಮಿಕಾ ಮಂದಣ್ಣ ಈಗ ಗೆಲ್ಲುವ ಕುದುರೆ ಆಗಿದ್ದಾರೆ. ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಹಾಗಾಗಿ ಅವರ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಮುಗಿಬೀಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಅವರಿಗೆ ಬಾಲಿವುಡ್​ನಿಂದಲೂ ಆಫರ್‌ ಗಳು​ ಬಂದಿದೆ. ಅಮಿತಾಭ್​ ಬಚ್ಚನ್​ ಜೊತೆ ‘ಗುಡ್​ ಬೈ’ ಹಾಗೂ ಸಿದ್ದಾರ್ಥ್​ ಮಲ್ಹೋತ್ರ ಜೊತೆ ‘ಮಿಷನ್​ ಮಜ್ನು’ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ ಮಾತ್ತು ಈಗಾಗಲೇ ತಿಳಿದಿರುವಂತೆ ‘ಪುಷ್ಪ’ ಚಿತ್ರದ ಎರಡನೇ ಪಾರ್ಟ್ ಸಿದ್ಧವಾಗುತ್ತಿದೆ. ಆ ಸಿನಿಮಾದಲ್ಲೂ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಅಭಿನಯಿಸಲಿದ್ದಾರೆ. ಮೊದಲ ಪಾರ್ಟ್​ ಗೆದ್ದ ಬಳಿಕ ಎರಡನೇ ಪಾರ್ಟ್​ಗೆ ರಶ್ಮಿಕಾ ಹೆಚ್ಚು ಸಂಬಳ ಕೇಳುತ್ತಿದ್ದಾರಂತೆ. ಮೊದಲ ಪಾರ್ಟ್​ಗೆ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದ ಅವರು ಈಗ 3 ಕೋಟಿ ರೂ. ಡಿಮ್ಯಾಂಡ್​ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂದರೆ, ಅವರು ಶೇ.50ರಷ್ಟು ಸಂಭಾವನೆಯನ್ನು ಹಚ್ಚಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

DK Shivakumar : ಪಾದಯಾತ್ರೆ ವೇಳೆ ಕಬ್ಬಿನ ಹಾಲು ಸವಿದ ಡಿಕೆಶಿ | Mekedatu Padayatre | Speed News Kannada

Mon Jan 10 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial