ಮಹಾರಾಷ್ಟ್ರ ಸಚಿವರು ಕರ್ನಾಟಕ ಬರುವ ವಿಚಾರ!

ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಮಾಧ್ಯಮದೊಂದಿಗೆ ಮಾತನಾಡಿದರು.ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರನ್ನ ಬರಲು ಬಿಡವುದಿಲ್ಲ. ಮಹಾರಾಷ್ಟ್ರದಲ್ಲಿ ಎಂಇಎಸ್ ವರ್ಚಸ್ಸು ಕಡಿಮೆ ಆಗ್ತಿದ್ದಂತೆ ಈ ರೀತಿ ಮಾಡುತ್ತಿದ್ದಾರೆ.
ಅವರಿಗೆ ಅಸ್ತಿತ್ವ ಇಲ್ಲದಾಗ ಖ್ಯಾತೆ ತಗೀತಾರೆ.
ಸಿಎಂ ಈಗಾಗಲೇ ಹೇಳಿದ್ದಾರೆ. ಮಹಾಜನ್ ವರದಿಯೇ ಅಂತಿಮ ಅಂತ.
ಸುಪ್ರೀಂ ಕೋರ್ಟ್ ನಲ್ಲಿ
ದಾಖಲೆ, ಜನಾಭಿಪ್ರಾಯ ಎಲ್ಲವೂ ನಮ್ಮ ಪರವಾಗಿ ಇದೆ.
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ.ಶಿವಸೇನೆ ನಾಟಕದ ಕಂಪನಿ ಆಗಾಗ ಈ ರೀತಿ ನಾಟಕ ಮಾಡ್ತಾರೆ.ನೆಲ, ಜಲ ವಿಚಾರ ಬಂದಾಗ ನಮ್ಮ ಸರ್ಕಾರ ನಿಲುವು ಸ್ಪಷ್ಟವಾಗಿದೆ.
ನಾವು ಅದನ್ನ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ.ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಇರುವಾಗ ಈ ರೀತಿ ಮಾಡಬಾರದು.ಸಚಿವರನ್ನ ಕಳಿಸಿರೋದಕ್ಕೆ ಪ್ರತಿಯಾಗಿ ನಾವು ಸ್ಟ್ರಾಟರ್ಜಿ ಮಾಡ್ತೀವಿ.ಸಿಎಂ ಬಳಿ ನಾನು ಕೂಡ ಮಾತಾಡುತ್ತೇನೆ. ಕೆಲಸ ಇಲ್ಲದೇ ಇರುವುದರಿಂದ ಅವರು
ಮತ್ತೆ ಮತ್ತೆ ಖ್ಯಾತೆ ತೆಗೆಯೋದು ಕಾಮನ್ ಆಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ಜೊತೆ ಮಾತಾಡಿದ್ದೀವಿ.ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ.ಬಹಳ ವರ್ಷದಿಂದ ಇದೆ ರೀತಿ ಖ್ಯಾತೆ ತಗೀತಿದ್ದಾರೆ.ಇದೆಲ್ಲಾ ಎಲೆಕ್ಷನ್ ಸ್ಟಂಟ್, ಅದಕ್ಕೆ ಯಾರೂ ಬೆಲೆ ಕೊಡಲ್ಲ.ನಮ್ಮ ಸರ್ಕಾರ ನೆಲ, ಜಲ ವಿಷಯದಲ್ಲಿ ಯಾರಿಗೂ ಮಣಿಯುವುದಿಲ್ಲ. ಕರ್ನಾಟಕದ ಭಾಗದ ರಕ್ಷಣೆಗೆ ನಾವು ಯಾವತ್ತೂ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ. ಎಂದು ಅಶೋಕ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನತೆಯಲ್ಲಿ ಮೋದಿ ಮನವಿ – ಮತದಾರರಿಗೆ ಮೋದಿ ನಮನ

Mon Dec 5 , 2022
ಇಂದು ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೀತಾ ಇದೆ.  ಪ್ರಧಾನಿ ಮೋದಿಯವರೂ ಕೂಡ ಅಹಮದಾಬಾದ್ ನ ಸಬರಿಮತಿ ಕ್ಷೇತ್ರದ ರಾಣಿಪ್ ಮತಗಟ್ಟೆಗೆ ಹೋಗಿ ಮತ ಚಲಾವಣೆ ಮಾಡಿದರು. ಮತಚಲಾವಣೆ ಬಳಿಕ  ಮಾತನಾಡಿದ ಪ್ರಧಾನಿ ಮೋದಿ – ದೇಶದಾದ್ಯಂತ ಚುನಾವಣೆಗಳು ನಡೀತಾ ಇದೆ. ಜೊತೆಗೆ ಸದ್ಯದಲ್ಲಿಯೇ ಸಾಕಷ್ಟು ಚುನಾವಣೆ ಎದುರಾಗ್ತಿದೆ. ಎಲ್ಲಾ ಚುನಾವಣೆಯಲ್ಲೂ ಮತದಾರರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತ ಚಲಾಯಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಜೊತೆಗೆ […]

Advertisement

Wordpress Social Share Plugin powered by Ultimatelysocial