ಕಂದಾಯ ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆ !

ಬೀದರ್: ಕಂದಾಯ ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆ ತರುವ ಪ್ರಯತ್ನ ಮಾಡಲಾಗುತ್ತಿದ್ದು, ಇನ್ಮುಂದೆ ಜಿಲ್ಲಾಧಿಕಾರಿಗಳು ತಿಂಗಳಲ್ಲಿ ನಾಲ್ಕು ಬಾರಿ ತಮ್ಮ ಜಿಲ್ಲೆಯ ತಾಲೂಕು ತಹಶೀಲ್ದಾರರ ಕಚೇರಿಗೆ ಭೇಟಿ ನೀಡಿ ಜನರ ಅಹವಾಲು ಅಲಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್.

ಅಶೋಕ ಹೇಳಿದರು.

ಜಿಲ್ಲೆಯ ವಡಗಾಂವ್ ಗ್ರಾಮದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿ ನಡೆ – ಹಳಿ ಕಡೆ ಕಾರ್ಯಕ್ರಮದ‌ ಮೂಲಕ, ಮನೆ ಬಾಗಿಲಿಗೆ ಆಡಳಿತ ಯಂತ್ರ ವ್ಯವಸ್ಥೆಯಿಂದ ಜನರ ಅಲೆದಾಟ ಮತ್ತು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬಿದ್ದಿದೆ. ಅಧಿಕಾರಿ ವರ್ಗ ಜನ ಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಪ್ರತಿ ವಾರ ಒಂದು ತಹಶೀಲ್ದಾರ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ‌ ಕೊಟ್ಟು, ಜನರ ಸಮಸ್ಯೆಗಳನ್ನು ಆಲಿಸುವರು ಮತ್ತು ಕುಂದು ಕೊರತೆಗಳಿಗೆ ಸ್ಪಂದಿಸುವರು. ಈ ಸಂಬಂಧ ಮೂರು ದಿನಗಳಲ್ಲಿ ಅದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

ವಡಗಾಂವ್ ದಲ್ಲಿ ಏಳನೇ ಗ್ರಾಮ ವಾಸ್ತವ್ಯ ಮಾಡಿದ್ದು, ಜನರ‌ ಕಷ್ಟಗಳು ಅರಿತುಕೊಳ್ಳಲು ಮತ್ತು ಅವುಗಳ ಪರಿಹಾರಕ್ಕಾಗಿ ರಾಜ್ಯದಲ್ಲಿ ಹೊಸಯೋಜನೆ ಜಾರಿಗೆ ತರಲು ಸಾಧ್ಯವಾಗುತ್ತಿದೆ. ಹಾಗಾಗಿ ಗ್ರಾಮ ವಾಸ್ತವ್ಯ ನನಗೆ ಪಾಠ ಶಾಲೆ ಆಗಿದ್ದು, ಮುಂದಿನ ವಾಸ್ತವ್ಯದಲ್ಲಿ ಮತ್ತಷ್ಟು ಸುಧಾರಣೆಗೆ ಯೋಜಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ 18 ಸಾವಿರಕ್ಕೂ ಹೆಚ್ಚು ಬಂಜಾರಾ ತಾಂಡಾ ಮತ್ತು ಕುರುಬರಹಟ್ಟಿಗಳನ್ನು ಗುರುತಿಸಲಾಗಿದ್ದು, ಬೀದರ ಜಿಲ್ಲೆಯ 98 ಸೇರಿ ಈಗಾಗಲೇ‌ 800 ವಸತಿ‌ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದೆ. ಇನ್ನುಳಿದ ಪ್ರದೇಶಗಳನ್ನು ಸಹ ಕಂದಾಯ ವ್ಯಾಪ್ತಿಗೆ ಸೇರಿಸಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

ನಾನು ಈಗಾಗಲೇ‌ ವಾಸ್ತವ್ಯ‌ಮಾಡಿದ 7 ಗ್ರಾಮಗಳಿಗೆ‌ ಅಭಿವೃದ್ಧಿ ಕಾಮಗಾರಿಗಳ ಅಭಿವೃದ್ಧಿಗಾಗಿ ತಲಾ ಒಂದು ಕೋಟಿ ರೂ.‌ ಘೋಷಣೆ ಮಾಡಿದ್ದು, ಅನುದಾನದ ಸದ್ಬಳಕೆ‌ ಸಂಬಂಧಿಸಿದಂತೆ ನಾನೇ ಖುದ್ದಾಗಿ ಸೂಪರವೈಸ್ ಮಾಡುತ್ತೇನೆ ಎಂದು ಹೇಳಿದ ಸಚಿವ ಅಶೋಕ, ಜಿಲ್ಲೆಯ ವಡಗಾಂವ್ ನಲ್ಲಿ ಜರುಗಿದ ಗ್ರಾಮ ವಾಸ್ತವ್ಯದಲ್ಲಿ 2400ಕ್ಕೂ ಹೆಚ್ಚು‌ ಫಲಾನುಭವಿಗಳಿಗೆ ಸ್ಥಳದಲ್ಲೆ ಸೌಲತ್ತು ವಿತರಣೆ ಮಾಡಲಾಗಿದೆ. ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ಅಧಿಕಾರಿಗಳಿಗೆ ಚುರುಕು ಮೂಡಿಸಿದ್ದೇನೆ. ನಿರ್ಲಕ್ಷ ಮತ್ತು‌ ವಿಳಂಬ ಮಾಡುವವರಿಗೆ ಬೇರೆಡೆ ಎತ್ತಂಗಡಿ ಮಾಡುವ ಎಚ್ಚರಿಕೆ ನೀಡಿದ್ದೇನೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಎಫ್​ಐಆರ್​̤̤

Sat May 28 , 2022
  ಮಂಡ್ಯ: ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಮತ್ತು ದಕ್ಷಿಣ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಂಡ್ಯದ ಮಹಿಳಾ ಕಾಲೇಜು, ವೈದ್ಯಕೀಯ ಕಾಲೇಜಿನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಇದರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಮುಕ್ತವಾಗಿ […]

Advertisement

Wordpress Social Share Plugin powered by Ultimatelysocial