ಆರ್‌. ವಿ. ದೇಶಪಾಂಡೆ ಜನ್ಮ ದಿನಾಂಕದ ಕುರಿತು ಅನುಮಾನ

ಮಾಜಿ ಸಚಿವ ಆರ್‌. ವಿ. ದೇಶಪಾಂಡೆ ಅವರ ಜನ್ಮ ದಿನಾಂಕದ ಕುರಿತು ಅನುಮಾನಗಳಿದ್ದು, ಇದರ ತನಿಖೆ ನಡೆಸಲು ಸದನ ಸಮಿತಿ ರಚನೆ ಮಾಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.ಹಾಗೆಂದು ಇದು ಗಂಭೀರವಾಗಿ ಮಾಡಿದ ಆರೋಪವೂ ಅಲ್ಲ, ನಿಜವಾಗಿ ಸದನ ಸಮಿತಿಗೆ ಒತ್ತಾಯವನ್ನೂ ಮಾಡಿಲ್ಲ.ಆರ್‌. ವಿ. ದೇಶಪಾಂಡೆ ಅವರಿಗೆ 2022ನೇ ಸಾಲಿನ ಉತ್ತಮ ಶಾಸಕ ಪ್ರಶಸ್ತಿಯನ್ನು ಪ್ರದಾನ ಮಾಡಿದ ನಂತರ ಸಿದ್ದರಾಮಯ್ಯ ಹೇಳಿದ ಆತ್ಮೀಯ ಮಾತು ಇದು.ಪ್ರಶಸ್ತಿ ಪ್ರದಾನದ ನಂತರ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ಕೃಷ್ಣಬೈರೇಗೌಡ, ಆರ್‌. ವಿ. ದೇಶಪಾಂಡೆ ಅವರ ಬರ್ತ್ ಸರ್ಟಿಫಿಕೇಟ್ ಬಗ್ಗೆಯೇ ಅನುಮಾನ ಇದೆ. 75 ವರ್ಷ ಆಗಿದೆ ಎಂದು ಆರ್‌. ವಿ. ದೇಶಪಾಂಡೆ ಅವರು ಹೇಳಿದಾಗ ರಾಹುಲ್ ಗಾಂಧಿ ಕೂಡಾ ಅಚ್ಚರಿ ವ್ಯಕ್ತಪಡಿಸಿದ್ದರು ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ದೇಶಪಾಂಡೆ ವಯಸ್ಸಿನ ಬಗ್ಗೆ ತನಿಖೆ ಆಗಲಿ. ಬೇಕಾದರೆ ಸದನ ಸಮಿತಿ ರಚನೆ ಮಾಡಿ ಎಂದು ಹಾಸ್ಯಚಟಾಕಿ ಹಾರಿಸಿದರು. ನಮ್ಮಪ್ಪ ಹೊಲ ಉಳುವಾಗ ದೇಶಪಾಂಡೆ ಅಪ್ಪ ಲಾಯರ್ ಆಗಿದ್ದರು ಎಂದು ಹೇಳಿದರು.ಯಡಿಯೂರಪ್ಪ ಇನ್ನೊಂದು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಈಗಲೇ ಚುನಾವಣೆಯಿಂದ ನಿವೃತ್ತನಾಗುವ ಬಗ್ಗೆ ಹಲವು ಬಾರಿ ದೇಶಪಾಂಡೆ ಹೇಳಿದ್ದರು ಎಂದರು. ಇದಕ್ಕೆ ದೇಶಪಾಂಡೆ ಅನುಮೋದಿಸಿದರು.ನಾನು ಇನ್ನೊಂದು ಚುನಾವಣೆಗೆ ಸ್ಫರ್ಧಿಸಿ ನಿವೃತ್ತಿ ಆಗಬೇಕು ಅಂತಿದ್ದೀನಿ. ನನ್ನ ಜತೆ ದೇಶಪಾಂಡೆ ಇರಬೇಕು, ಇನ್ನೊಂದು ಚುನಾವಣೆಗೆ ಸ್ಫರ್ಧೆ ಮಾಡಿ ನೀನು ನಿವೃತ್ತನಾಗಿಬಿಡು ಎಂದು ದೇಶಪಾಂಡೆ ಅವರಿಗೆ ಸಿದ್ದರಾಮಯ್ಯ ಹೇಳಿದರು.ದೇಶಪಾಂಡೆ ವಯಸ್ಸಿನ ಬಗ್ಗೆ ಮಾತನಾಡಿದ ನಂತರ ತಮ್ಮ ವಯಸ್ಸಿನ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ, ನನ್ನ ವಯಸ್ಸಿನಲ್ಲಿಯೂ ಐದಾರು ತಿಂಗಳು ಹೆಚ್ಚು ಕಡಿಮೆ ಇರಬಹುದು. ನನ್ನ ಜನ್ಮ ದಿನಾಂಕವನ್ನು, 03/08/1947 ಅಂತ ಸ್ಕೂಲ್‌ನಲ್ಲಿ ಮೇಷ್ಟ್ರು ಬರೆದುಕೊಂಡಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ನಾಲ್ಕು ದಶಕದ ರಾಜಕಾರಣಿಗೆ ಉತ್ತಮ ಶಾಸಕ ಪ್ರಶಸ್ತಿ

Fri Dec 30 , 2022
ನಾಲ್ಕು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ಸೇವೆ ಸಲ್ಲಿಸುತ್ತಿರುವ, ವಿವಿಧ ಇಲಾಖೆಗಳ ಸಚಿವರಾಗಿ ಕಾರ್ಯನಿರ್ವಹಿಸಿರುವ ಆರ್.‌ ವಿ. ದೇಶಪಾಂಡೆ ಅವರಿಗೆ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಪ್ರದಾನ ಮಾಡಿದೆ.ವಿಧಾನ ಮಂಡಲ ಅಧಿವೇಶನದ ಸಂದರ್ಭದಲ್ಲಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಶಸ್ತಿಯನ್ನು ಘೋಷಣೆ ಮಾಡಿದರು. ಸಿಎಂ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಪ್ರಶಸ್ತಿ […]

Advertisement

Wordpress Social Share Plugin powered by Ultimatelysocial