ಮಕಾಡೆ ಮಲಗಿದ ರಾಧೆ-ಶ್ಯಾಮ್​ ಸಿನಿಮಾ.. ಇದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ರವಿ ತೇಜ

ಅಭಿಮಾನ ಇರಬೇಕು ಆದರೆ ಹುಚ್ಚಾಭಿಮಾನ ಇರಬಾರದು ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಕೆಲವರಿಗೆ ತಮ್ಮ ನೆಚ್ಚಿನ ನಟನನ್ನು ಕಂಡರೆ ಎಲ್ಲಿಲ್ಲದ ಪ್ರೀತಿ, ಗೌರವ. ದೇವರಂತೆ ಅವರನ್ನು ಕಾಣುತ್ತಾರೆ. ಪ್ರಭಾಸ್ ಮತ್ತು ಪೂಜಾ ಹೆಗ್ಡೆ (Prabhas and Pooja Hegde) ನಟನೆಯ ‘ರಾಧೆ ಶ್ಯಾಮ್’ (Radhe Shyam) ಸಿನಿಮಾವು ಶುಕ್ರವಾರ (ಮಾರ್ಚ್ 11) ವಿಶ್ವಾದ್ಯಂತ ತೆರೆಗೆ ಬಂದಿದ್ದು, ಭರ್ಜರಿ ಓಪನಿಂಗ್ (First Day Collection) ಪಡೆದುಕೊಂಡಿತ್ತು.
ಆದರೆ, ಒಂದು ದಿನ ಕಳೆದ ಬಳಿಕ ಸಿನಿಮಾ ಬಗ್ಗೆ ನೆಗೆಟಿವ್​ ಕಮೆಂಟ್ಸ್​ ಹೆಚ್ಚಾಯ್ತು. ಸಿನಿಮಾ ಚೆನ್ನಾಗಿಲ್ಲ, ಪ್ರಭಾಸ್​ ಈ ರೀತಿಯ ಸಿನಿಮಾಗಳನ್ನು ಮಾಡಬಾರದಿತ್ತು ಎಂದು ಅವರ ಅಭಿಮಾನಿಗಳು ಕೂಡ ಚರ್ಚೆ ಮಾಡುತ್ತಿದ್ದಾರೆ. ಬಾಹುಬಲಿ (Bahubali) ಬಳಿಕ ಪ್ರಭಾಸ್​ ಹಿಟ್​ ನೀಡಿಲ್ಲ. ಬಾಹುಬಲಿ ಬಳಿಕ ಪ್ರಭಾಸರ ಸಾಹೋ (Saaho) ಸಿನಿಮಾ ರಿಲೀಸ್​ ಆಗಿ ಫ್ಲಾಪ್​ ಎನಿಸಿಕೊಂಡಿತ್ತು. ಇದೀಗ ರಾಧೆ-ಶ್ಯಾಮ್​ ಸಿನಿಮಾಗೂ ನೆಗೆಟಿವ್​ ಕಮೆಂಟ್​ ಹೆಚ್ಚಾಗಿದೆ.

ನೊಂದ ಪ್ರಭಾಸ್​ ಅಭಿಮಾನಿ ಆತ್ಮಹತ್ಯೆ!

‘ರಾಧೆ-ಶ್ಯಾಮ್’ ಸಿನಿಮಾದ ಬಗ್ಗೆ ಕೆಟ್ಟ ವಿಮರ್ಶೆಗಳು ಬಂದಿವೆಯೆಂದು, ಸಿನಿಮಾ ಚೆನ್ನಾಗಿಲ್ಲವೆಂದು ಚರ್ಚೆಯಾಗುತ್ತಿದೆ ಎಂದು ಬೇಸರಗೊಂಡ ಪ್ರಭಾಸ್​ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೌದು, ಆಂಧ್ರ ಪ್ರದೇಶದ ಕರ್ನೂಲಿನಲ್ಲಿ ರವಿ ತೇಜ ಎಂಬ ಪ್ರಭಾಸ್ ಅಭಿಮಾನಿಯೊಬ್ಬ, ‘ರಾಧೆ-ಶ್ಯಾಮ್’ ಸಿನಿಮಾ ಚೆನ್ನಾಗಿಲ್ಲವೆಂದು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ನಂಬಲು ಕಷ್ಟ, ಆದರೂ ಇದು ಸತ್ಯ. ರವಿ ತೇಜ ಈ ಸಿನಿಮಾ ಮೇಲೆ ಭಾರಿ ನೀರಿಕ್ಷೆಗಳನ್ನು ಇಟ್ಟಕೊಂಡಿದ್ದ. ಆದರೆ, ಸಿನಿಮಾದ ಮೇಲಿದ್ದ ತನ್ನ ನಿರೀಕ್ಷೆಗಳು ಹುಸಿಯಾದುವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪ್ರಭಾಸ್​ರ ಅಪ್ಪಟ ಅಭಿಮಾನಿ ರವಿ ತೇಜ!

ಕರ್ನೂಲಿನ ತಿಲಕ್‌ ನಗರ ನಿವಾಸಿಯಾಗಿದ್ದ 24 ವರ್ಷ ವಯಸ್ಸಿನ ರವಿ ತೇಜ, ಪ್ರಭಾಸ್‌ರ ಅಪ್ಪಟ ಅಭಿಮಾನಿ. ‘ರಾಧೆ-ಶ್ಯಾಮ್ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ. ಅವರ ಫ್ರೆಂಡ್ಸ್​ ಹಾಗೂ ಕೆಲ ಕುಟುಂಬಸ್ಥರು ಕೂಡ ಈ ಸಿನಿಮಾ ಚೆನ್ನಾಗಿಲ್ಲ ಎಂದು ಮಾತನಾಡಿದ್ದನ್ನು ಈತ ಕೇಳಿಸಿಕೊಂಡಿದ್ದಾನೆ. ಸಿನಿಮಾ ಚೆನ್ನಾಗಿಲ್ಲದೇ ಇರುವುದು ರವಿ ತೇಜ ಅನ್ನು ಖಿನ್ನತೆಗೆ ಗುರಿ ಮಾಡಿತ್ತು. ಹೀಗಾಗಿ ತನ್ನ ಮನೆಯಲ್ಲಿಯೇ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

: ಪ್ರಭಾಸ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ನೋಡಿ..

ಕಳೆದ ವರ್ಷ ಬೆದರಿಕೆ ಹಾಕಿದ್ದ ಪ್ರಭಾಸ್​ ಫ್ಯಾನ್ಸ್​!

ಕಳೆದ ವರ್ಷ ಕೆಲವು ಪ್ರಭಾಸ್ ಅಭಿಮಾನಿಗಳು ಆತ್ಮಹತ್ಯೆ ಪತ್ರ ಬರೆದಿದ್ದರು. ‘ರಾಧೆ-ಶ್ಯಾಮ್’ ಸಿನಿಮಾದ ಅಪ್‌ಡೇಟ್ ಬಿಡುಗಡೆ ಮಾಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸಿನಿಮಾದ ಟೀಸರ್ ಬಿಡುಗಡೆ ಮಾಡಿತ್ತು ಚಿತ್ರತಂಡ. ಇದೀಗ ಸಿನಿಮಾ ಚೆನ್ನಗಿಲ್ಲ ಎಂದು ಮನನೊಂದು ಪ್ರಭಾಸ್​ ಅಭಿಮನಿಯೊಬ್ಬ ಸೂಸೈಡ್​ ಮಾಡಿಕೊಂಡಿದ್ದಾನೆ.

: ಆಕಳಿಕೆ ಹುಟ್ಟಿಸುವ ರಾಧೆ ಶ್ಯಾಮ್, ಬಹುನಿರೀಕ್ಷಿತ ಸಿನಿಮಾ ಎಡವಿದ್ದೆಲ್ಲಿ?

ಸಿನಿಮಾದಲ್ಲಿ ಬೇಡದ ದೃಶ್ಯಗಳೇ ಹೆಚ್ಚು

ಈ ಸಿನಿಮಾದಲ್ಲಿ ಎರಡು ಪ್ರಮುಖ ಅಂಶಗಳ ಕೊರತೆ ಇದೆ. ಮೊದಲನೆಯದ್ದು ಪ್ರಭಾಸ್ ಮತ್ತು ಪೂಜಾ ಹೆಗ್ಡೆ ನಡುವೆ ಯಾವುದೇ ಕೆಮಿಸ್ಟ್ರಿ ಕಾಣ ಸಿಗುವುದಿಲ್ಲ. ಅವರು ಪ್ರೇಮದಲ್ಲಿ ಬೀಳುವ ದೃಶ್ಯಗಳ ನಡುವೆ, ಕೆಲವು ಹಾಸ್ಯ ದೃಶ್ಯಗಳನ್ನು ತೂರಿಸಬೇಕೆಂಬ ಕಾರಣಕ್ಕೆ ಚಿತ್ರದಲ್ಲಿ ತೋರಿಸಲಾಗಿದೆ. ಆದರೆ ಹಾಸ್ಯ ದೃಶ್ಯಗಳು ಯಾವುದೇ ರೀತಿಯಲ್ಲೂ ನಗು ತರಿಸಲು ಯೋಗ್ಯವಾಗಿಲ್ಲ. ಹಾಗೂ, ಪ್ರೇಮ ಕಥೆಯು ಅಷ್ಟೊಂದು ಹೃದಯಸ್ಪರ್ಶಿ ಅನಿಸುವುದಿಲ್ಲ. ಚಿತ್ರದಲ್ಲಿ ಅರ್ಥಹೀನ ದೃಶ್ಯಗಳು ಮತ್ತು ಪಾತ್ರಗಳು ಸಾಕಷ್ಟಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹುಟ್ಟುಹಬ್ಬದ ವಿಶೇಷ: ಅಮೀರ್ ಖಾನ್ ಮತ್ತು ನಿರ್ಮಾಪಕರಾಗಿ ಅವರ ಪ್ರತಿಭೆ!

Mon Mar 14 , 2022
ಅಮೀರ್ ಖಾನ್ 1988 ರಲ್ಲಿ ಖಯಾಮತ್ ಸೆ ಕಯಾಮತ್ ತಕ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು 2001 ರಲ್ಲಿ ಲಗಾನ್ ಚಿತ್ರದ ಮೂಲಕ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದರು. ನಟನಾಗಿ ಮತ್ತು ನಿರ್ಮಾಪಕನಾಗಿ ತನ್ನ ಧೈರ್ಯಶಾಲಿ ಚಲನಚಿತ್ರ ಆಯ್ಕೆಗಳಿಗೆ ಸ್ಟಾರ್ ಯಾವಾಗಲೂ ಹೆಸರುವಾಸಿಯಾಗಿದ್ದಾನೆ. ಅವರು 57 ವರ್ಷಕ್ಕೆ ಕಾಲಿಡುತ್ತಿದ್ದಂತೆ, ನಾವು ಅವರ ಕೆಲವು ಅಪಾಯಕಾರಿ ಮತ್ತು ರೋಮಾಂಚನಕಾರಿ ತಿರುವುಗಳನ್ನು ಎರಡನೆಯದಾಗಿ ನೋಡುತ್ತೇವೆ. ಲಗಾನ್ (2001) ಅಮೀರ್ ಖಾನ್ ಪ್ರೊಡಕ್ಷನ್ಸ್ […]

Advertisement

Wordpress Social Share Plugin powered by Ultimatelysocial