ಪಾರುಗೆ ಬಯಕೆ ಬುತ್ತಿ ಶಾಸ್ತ್ರ ಮಾಡಲು ಬಂದ ರಘು.

ಪಾರು ಗರ್ಭಿಣಿ ಆಗಿರುವ ವಿಚಾರ ತಿಳಿದ ರಘು ಖುಷಿಯಲ್ಲಿ ತೇಲಾಡುತ್ತಿದ್ದಾನೆ. ಜನನಿಗೆ ಹೇಗೆ ಬಯಕೆ ಬುತ್ತಿ ಶಾಸ್ತ್ರ ಮಾಡುತ್ತಾ ಇದ್ದಾರೋ ಹಾಗೆಯೇ ಪಾರ್ವತಿಗೆ ಕೂಡ ಬಯಕೆ ಬುತ್ತಿ ಶಾಸ್ತ್ರ ಮಾಡಬೇಕು ಎಂದು ಆಲೋಚನೆ ಮಾಡುತ್ತಾ ಇರುತ್ತಾನೆ. ಸಾವಿತ್ರಿ ಬಳಿ ಪಾರುಗೆ ಇಷ್ಟ ಆಗಿರುವ ಎಲ್ಲಾ ತಿಂಡಿಗಳನ್ನು ಮಾಡಿಸಿ ಹನುಮಂತು ಮನೆಗೆ ಹೋಗುತ್ತಾನೆ.

ಹನುಮಂತು ಹಾಗೂ ಆದಿ ಇಬ್ಬರೂ ಪಾರು ಇನ್ಯಾವ ಕೆಲಸವನ್ನು ಮಾಡಬಾರದು ಎಂದು ಹೇಳಿ ಸೇಬು ಹಣ್ಣನ್ನು ತಿನ್ನಿಸುತ್ತ ಇರುವ ವೇಳೆ ರಘು ಅಲ್ಲಿಗೆ ಬರುತ್ತಾನೆ. ರಘುವನ್ನು ನೋಡಿ ಆದಿಗೆ ಪಾರುಗೆ ಖುಷಿ ಆಗುತ್ತದೆ. ಮನೆಯಲ್ಲಿ ಜನನಿಗೆ ಬಯಕೆ ಬುತ್ತಿ ಶಾಸ್ತ್ರ ನಡೆಯುತ್ತಾ ಇದೆ ಹಾಗೆಯೇ ಅರಸನಕೋಟೆಯ ಹಿರಿ ಸೊಸೆಗೆ ಬಯಕೆ ಬುತ್ತಿ ಶಾಸ್ತ್ರ ಮಾಡೋಣ ಅಂತ ಬಂದೆ ಎಂದು ಹೇಳುತ್ತಾನೆ.

ಇದನ್ನು ಕೇಳಿದ ಪಾರುಗೆ ಮೊದಲು ಅರ್ಥ ಆಗದೇ ನಿಲ್ಲುತ್ತಾಳೆ. ಆದರೆ ಆ ಬಳಿಕ ಎಲ್ಲವೂ ಅರ್ಥ ಆಗುತ್ತದೆ. ಮಾವನಿಗೆ ಎಲ್ಲಾ ವಿಚಾರ ತಿಳಿದು ಹೋಗಿದೆ ಎಂದು ಮನದಲ್ಲಿ ಖುಷಿ ಆಗುತ್ತದೆ. ಇದೆಲ್ಲವನ್ನೂ ಅನುಷ್ಕಾ ಕದ್ದು ನೋಡುತ್ತ ಇರುತ್ತಾಳೆ. ಇತ್ತ ಅರುಂಧತಿ ಅನುಷ್ಕಾ ಮನೆಯಲ್ಲಿ ಇಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಾಳೆ.

ಮಗಳು ಕಾಣಿಸಿಕೊಳ್ಳದೇ ಇರುವುದಕ್ಕೆ ಆತಂಕ ವ್ಯಕ್ತಪಡಿಸಿದ ಅರುಂಧತಿ

ಆದರೆ ರಾಣಾ ಈಗ ಇಲ್ಲಿದ್ದ ಅನುಷ್ಕಾ ಎಲ್ಲಿ ಹೋದಳು ಎಂದುಕೊಂಡು ಅತ್ತಿಂದಿತ್ತ ಓಡಾಡುತ್ತಾ ಇರುತ್ತಾನೆ. ಇನ್ನು ಅರಸನಕೋಟೆಯ ಮನೆ ಮದುಮಗಳ ಹಾಗೆ ಕಂಗೊಳಿಸುತ್ತಾ ಇದ್ದು, ಜನನಿ ಬಯಕೆ ಬುತ್ತಿ ಶಾಸ್ತ್ರ ನಡೆಸಲು ಎಲ್ಲರೂ ಅದ್ಧೂರಿಯಾಗಿ ತಯಾರಿ ಮಾಡಿಕೊಂಡಿರುವಾಗ ಅಖೀಲಾಂಡೇಶ್ವರಿ ನನ್ನ ಗಂಡ ರಘು ಎಲ್ಲಿ ಹೋಗಿದ್ದಾರೆ ಎಂದು ಹುಡುಕುತ್ತಾಳೆ.

ಅಖಿಲ ಬಳಿ ರಘು ಬಗ್ಗೆ ತುಚ್ಛವಾಗಿ ಮಾತನಾಡಿದ ದಾಮಿನಿ

ಈ ವೇಳೆ ದಾಮಿನಿ ಇವತ್ತು ಜನನಿ ಬಯಕೆ ಬುತ್ತಿ ಶಾಸ್ತ್ರ ಅಲ್ವಾ ಅಕ್ಕ, ಅದಕ್ಕೆ ಪಾರುಗೆ ಕೂಡ ಆಕೆಗೆ ಇಷ್ಟ ಆಗಿರುವ ತಿಂಡಿ ಎಲ್ಲಾ ತೆಗೆದುಕೊಂಡು ಹೋಗುತ್ತಾ ಇದ್ದಾರೆ ಎಂದು ಕೊಂಕು ಮಾತುಗಳನ್ನು ಹೇಳುತ್ತ ಇರುತ್ತಾಳೆ. ಪಾರು ಬಾವನನ್ನು ತನಗೆ ಹೇಗೆ ಬೇಕೋ ಹಾಗೆ ಕುಣಿಸುತ್ತಾ ಇದ್ದಾಳೆ, ಇನ್ನು ಆಸ್ತಿಯನ್ನು ಆಕೆಯ ಹೆಸರಿಗೆ ಬಾವ ಬರೆದುಕೊಡಲ್ಲ ಎನ್ನುವುದು ಯಾವ ಗ್ಯಾರಂಟಿ. ನಿಮ್ಮ ಗಂಡನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ ಎನ್ನುತ್ತಾಳೆ.

ಗಂಡನ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಕೋಪಗೊಂಡ ಅಖಿಲ

ಈ ವೇಳೆ ಅಖಿಲ ರಘು ಬಗ್ಗೆ ಯಾರೂ ಹಗುರ ಆಗಿ ಮಾತನಾಡಬಾರದು, ನನಗೆ ಕೊಡುವ ಎರಡರಷ್ಟು ಗೌರವ ಅವರಿಗೆ ಸಿಗಬೇಕು, ಅವರು ಅರಸನ ಕೋಟೆಯ ಯಜಮಾನ ಎಂದು ಹೇಳಿದಾಗ ದಾಮಿನಿ ಅಖಿಲ ಮುಂದೆ ಕ್ಷಮೆ ಯಾಚಿಸುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಜನನಿ ಬರುತ್ತಾಳೆ. ಜನನಿ ಅತ್ತೆಯ ಬಳಿ ಮಾವ ಎಲ್ಲೂ ಕಾಣಿಸುತ್ತ ಇಲ್ಲ ಎಂದಾಗ ಕೂಡ ದಾಮಿನಿ ಕೊಂಚ ನಾಲಗೆ ಹರಿಯ ಬಿಡುತ್ತಾಳೆ. ಆದರೆ ಅಖಿಲ ಅದಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಆಗುತ್ತಾಳೆ.

ಮಾವ ಮನೆಯಲ್ಲಿ ಇರದದ್ದನ್ನು ಕಂಡು ಪ್ರಶ್ನೆ ಮಾಡಿದ ಜನನಿ

ಇವತ್ತು ಜನನಿ ಬಯಕೆ ಬುತ್ತಿ ಶಾಸ್ತ್ರ ಆಕೆಗೆ ಕೂಡ ಒಡವೆ ಸೀರೆ ಎಲ್ಲಾ ಕೊಟ್ಟಿದ್ದೇವೆ, ದಯಮಾಡಿ ನೀನು ನಾನು ಕೊಡುವುದೆಲ್ಲವನ್ನೂ ಹಾಕಿಕೊಂಡು ರೆಡಿ ಆಗಿ ಬಾ ಎಂದು ಹೇಳಿ ಕೊಡುತ್ತಾನೆ. ಪಾರು ಮನಸಿಲ್ಲದ ಮನಸಿನಿಂದ ಅದೆಲ್ಲವನ್ನೂ ಹಾಕಿಕೊಂಡು ಬಂದಾಗ ಟೇಬಲ್ ನಲ್ಲಿ ಆಕೆಗೆ ಬೇಕಾದ ಎಲ್ಲ ತಿಂಡಿ ತಿನಿಸು ಅಲ್ಲಿರುವುದನ್ನು ಕಂಡು ಖುಷಿ ಪಡುತ್ತಾಳೆ. ಆಕೆಗೆ ಸಿಹಿ ತಿನ್ನಿಸಿದ ರಘು ಇನ್ನೂ ಖುಷಿ ಪಡುತ್ತಾನೆ. ಆ ವೇಳೆ ಹನುಮಂತು ನನ್ನ ಮಗಳ ಬಯಕೆ ಬುತ್ತಿ ಶಾಸ್ತ್ರ ಮಾಡಿದ್ದಕ್ಕೆ ನನಗೆ ಬಹಳ ಖುಷಿ ಆಗುತ್ತಿದೆ ಯಜಮಾನರೆ ನಿಮಗೆ ಧನ್ಯವಾದ ಎಂದು ಹೇಳುತ್ತಾನೆ . ಇದನ್ನು ಕೇಳಿದ ರಘು ಹನುಮಂತು ಬಳಿ ಒಂದು ಪ್ರಮಾಣ ಮಾಡಿಕೊಳ್ಳುತ್ತಾನೆ. ಹನುಮಂತು ನೀನು ನನಗೆ ಒಂದು ಪ್ರಮಾಣ ಮಾಡಬೇಕು ಇನ್ಮೇಲೆ ಯಾವತ್ತೂ ನೀನು ಪಾರ್ವತಿ ಮೇಲೆ ಕೋಪ ಮಾಡಿಕೊಳ್ಳಬಾರದು ಎಂದೆಲ್ಲ ಹೇಳಿದಾಗ ಹನುಮಂತು ರಘುಗೆ ಇನ್ಮೇಲೆ ಯಾವತ್ತೂ ಹಾಗೆಲ್ಲ ಮಾಡುವುದಿಲ್ಲ ದಯಮಾಡಿ ಕ್ಷಮಿಸಿ ಎಂದು ಹೇಳುತ್ತಾನೆ. ಇನ್ನು ರಘು ಯಾವ ಕಾರಣಕ್ಕೆ ಮನೆ ಬಿಟ್ಟು ಬಂದಿದ್ದೀರಾ ಗೊತ್ತಿಲ್ಲ, ಇದೀಗ ಮೋನಿಕಾ ಬೇರೆ ಮನೆಯಲ್ಲಿ ಇಲ್ಲ ಆಕೆಯ ಗಂಡ ಬಂದು ಕರೆದುಕೊಂಡು ಹೋದರು ಎಂದಾಗ ಆದಿ ಪಾರುಗೆ ಬಹಳ ಗೊಂದಲ ಉಂಟಾಗುತ್ತದೆ. ಮುಂದೇನು ಕಾದು ನೋಡಬೇಕಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟ ರಿಷಬ್ ಶೆಟ್ಟಿ 'ಕಾಂತಾರ' ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ.

Sat Feb 11 , 2023
ನಿರ್ದೇಶಕ- ನಟ ರಿಷಬ್ ಶೆಟ್ಟಿ ‘ಕಾಂತಾರ’ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಇದೀಗ ‘ಕಾಂತಾರ’ ಪ್ರೀಕ್ವೆಲ್ ಮಾಡೋಕೆ ಮುಂದಾಗಿದ್ದಾರೆ. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದಿಂದ ಪತ್ರಕರ್ತರ ಜೊತೆ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಮಾತನಾಡಿದ್ದರು. ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ಕಾಂತಾರ’ ಸಿನಿಮಾ ವಿವಾದ, ಟೀಕೆ, ಸಕ್ಸಸ್ ಎಲ್ಲದರ ಬಗೆಗೂ ಮಾಧ್ಯಮಗಳ ಪ್ರಶ್ನೆಗೆ ರಿಷಬ್ ಶೆಟ್ಟಿ ಉತ್ತರಿಸಿದರು. ಒಂದಷ್ಟು ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೇ ನುಣುಚಿಕೊಂಡರು. ‘ಕಾಂತಾರ’ ಸಿನಿಮಾ 400 ಕೋಟಿಗೂ ಅಧಿಕ […]

Advertisement

Wordpress Social Share Plugin powered by Ultimatelysocial