ಎಂ ಯು ಪ್ರಸನ್ನ ಹಳ್ಳಿ ನಿರ್ದೇಶನದ ಈ ಚಿತ್ರದ ವಿಶೇಷ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ನಟನೆ.

ರಾಘವೇಂದ್ರ ರಾಜಕುಮಾರ್ ವಿಶೇಷಪಾತ್ರದಲ್ಲಿ ಅಭಿನಯಿಸುತ್ತಿರುವ ಹಾಗೂ ಎಂ.ಯು ಪ್ರಸನ್ನ ಹಳ್ಳಿ ನಿರ್ದೇಶಿಸುತ್ತಿರುವ “ಖಡಕ್ ಹಳ್ಳಿ ಹುಡುಗರು” ಚಿತ್ರದ ಮೊದಲ ದೃಶ್ಯಕ್ಕೆ ಡಾ||ರಾಜಕುಮಾರ್ ಅವರ ಸಹೋದರಿ ನಾಗಮ್ಮ ಹಾಗೂ ರಾಘವೇಂದ್ರ ರಾಜಕುಮಾರ್ ಪತ್ನಿ ಮಂಗಳ
ರಾಘವೇಂದ್ರ ರಾಜಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು. ಆರಂಭ ಫಲಕವನ್ನು ನಾಗಮ್ಮನವರ ಪುತ್ರ ಗೋಪಾಲ್ ಮಾಡಿದರು. ಗಾಜನೂರಿನಲ್ಲಿ‌‌ ಮುಹೂರ್ತವಷ್ಟೇ ಅಲ್ಲ, ಕೆಲವು ಭಾಗದ ಚಿತ್ರೀಕರಣ ಸಹ ಮಾಡಿದ್ದೇವೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ನಿರ್ದೇಶಕ ಎಂ.ಯು ಪ್ರಸನ್ನಹಳ್ಳಿ ಅವರೆ ಕಥೆ, ಚಿತ್ರಕಥೆ ಹಾಗೂ ಹಾಡುಗಳನ್ನು ಬರೆದಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಸಧೀರ್ ಶಾಸ್ತ್ರಿ ಮೂರು ಹಾಡುಗಳಿಗೆ ಹಾಗೂ ಹದಿನಾಲ್ಕು ವರ್ಷದ ಧ್ರುವ ಮೂರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಯಶ್ ಗೌಡ ಈ ಚಿತ್ರದ ಛಾಯಾಗ್ರಹಕರು. ರಾಜೀವ್ ರಾಥೋಡ್, ಪ್ರಭಾಸ್ ರಾಜ್ ಹಾಗೂ ಪ್ರಭು ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ವಿಶೇಷ ಹಾಗೂ ವಿಭಿನ್ನ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಯುಕ್ತ ಮಲ್ನಾಡ್, ದೀಪು ವಿಜಯ್, ಚಂದ್ರಪ್ರಭ, ವರದರಾಜ್, ಮಹಂತೇಶ್, ಉದಯ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಪ್ಪ ನೋಟದ ಮೇಲೆ ಟ್ರೋಲ್ಗಳನ್ನು ಮುಚ್ಚಿದ್ದಾ,ಸಮಂತಾ!

Sat Mar 12 , 2022
ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ನಲ್ಲಿ ತನ್ನ ಸಿಜ್ಲಿಂಗ್ ನೋಟದ ಮೂಲಕ ಗಮನ ಸೆಳೆದಿದ್ದ ಸಮಂತಾ ರುತ್ ಪ್ರಭು ತನ್ನ ದಿಟ್ಟ, ಬಹಿರಂಗ ನೋಟಕ್ಕಾಗಿ ಟ್ರೋಲ್ ಮಾಡಲ್ಪಟ್ಟಳು. ಕೆಲವು ತೆಲುಗು ಟ್ಯಾಬ್ಲಾಯ್ಡ್‌ಗಳು ಅವಳ ಡ್ರೆಸ್ಸಿಂಗ್ ಸೆನ್ಸ್ ಅನ್ನು ಅವಳ ವಿಚ್ಛೇದನದೊಂದಿಗೆ ಸಂಬಂಧಿಸಿವೆ. ಆದ್ದರಿಂದ, ಸಮಂತಾ ತನ್ನ ಟ್ರೋಲ್‌ಗಳನ್ನು ಸ್ಲ್ಯಾಮ್ ಮಾಡಲು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ತೆಗೆದುಕೊಂಡಳು. ‘ರಂಗಸ್ಥಳಂ’ ನಟಿ ಬರೆದಿದ್ದಾರೆ, “ಮಹಿಳೆಯಾಗಿ, ನಿರ್ಣಯಿಸುವುದರ ಅರ್ಥವೇನೆಂಬುದನ್ನು ನಾನು ನೇರವಾಗಿ ತಿಳಿದುಕೊಳ್ಳುತ್ತೇನೆ. ನಾವು ಮಹಿಳೆಯರನ್ನು […]

Advertisement

Wordpress Social Share Plugin powered by Ultimatelysocial